ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನ ಮೊದಲನೆಯ ಸಂಕಲನಾತ್ಮಕ (SA-1) ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಾಲೆಗಳ - ಮಧ್ಯಂತರ ರಜೆ ಅವಧಿಯನ್ನು ಸರ್ಕಾರ ಈ ಮೊದಲೇ ನಿರ್ಧರಿಸಿದಂತೆ ಭಾನುವಾರ (ಅ.16)ವೇ ಅಂತ್ಯಗೊಳಿಸಿದ್ದು, ಪರೀಕ್ಷೆಗಳನ್ನು ಮಾತ್ರ ಮುಂದೂಡಿ ಆದೇಶ ಹೊರಡಿಸಿದೆ. ದಸರಾ ರಜೆಯನ್ನು 15 ದಿನಗಳಿಗೇ ಸೀಮಿತಗೊಳಿಸಿ, ಅ.17ರಿಂದಲೇ ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ. ಆದರೆ, 17ರಿಂದ 25ರವರೆಗೆ ನಡೆಸಲು ಉದ್ದೇಶಿಸಿದ್ದ ಮೊದಲ ಸಂಕಲನಾತ್ಮಕ ಪರೀಕ್ಷೆಗಳನ್ನು (1ರಿಂದ 10ನೇ ತರಗತಿ) ಮುಂದೂಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ನವೆಂಬರ್ 3ರಿಂದ 10ರವರೆಗೆ ಪರೀಕ್ಷೆಗಳು ನಡೆಯಲಿವೆ. ಕಲಿಕಾ ಪ್ರಕ್ರಿಯೆ ಅನುಪಾಲನಾ ಕೊರತೆ ಮತ್ತು ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ಸಿದ್ದವಾಗಲು ಕಾಲಾವಕಾಶ ಬೇಕಿರುವುದರಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ ಹೀಗಿದೆ: ಪ್ರಥಮ ಭಾಷೆ (ನ.3), ದ್ವಿತೀಯ ಭಾಷೆ (ನ.4), ತೃತೀಯ ಭಾಷೆ ಗಣಿತ (ನ.5), ವಿಜ್ಞಾನ (ನ.7), ಸಮಾಜ ವಿಜ್ಞಾನ (ನ.8), ಭಾಗ-ಬಿ/ದೈಹಿಕ ಶಿಕ್ಷಣ ನ.9ರಂದು ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಮೊದಲ ತರಗತಿಗೆ ಮಗು ಪ್ರವೇಶಕ್ಕೆ ಆರು ವರ್ಷ ವಯೋಮಿತಿ ನಿಗದಿ: 2025 - 26 ರಿಂದ ಜಾರಿಗೆ ಚಿಂತನೆ: ನಾಗೇಶ್