ETV Bharat / state

ಕಬ್ಬು ಬೆಳೆಗಾರ ಹೋರಾಟ ತೀವ್ರ: ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಚಳವಳಿ - sugarcane growers protest

ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೊರಿ 11ನೇ ದಿನದ ಆಹೋ ರಾತ್ರಿ ಧರಣಿ ಮುಂದುವರೆದಿದ್ದು ಸರ್ಕಾರಕ್ಕೆ ಸವಾಲಾಗಿ 'ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಚಳವಳಿ' ನಡೆಸಿದರು.

Arrest us and put us in front of a judge
ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಚಳುವಳಿ
author img

By

Published : Dec 2, 2022, 7:15 PM IST

ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 11ನೇ ದಿನದ ಆಹೋ ರಾತ್ರಿ ಧರಣಿ ಮುಂದುವರೆದಿದ್ದು, ಸರ್ಕಾರಕ್ಕೆ ಸವಾಲಾಗಿ 'ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಚಳವಳಿ' ನಡೆಸಿದರು.

ಕಬ್ಬು ಎಫ್ಆರ್​ಪಿ ದರದಿಂದ ರೈತರಿಗೆ ಮೋಸವಾಗಿದೆ. ರಾಜ್ಯ ಸಲಹಾ ಬೆಲೆ ನಿಗದಿ ಮಾಡಿ ಕಬ್ಬಿನಿಂದ ಬರುವ ಇತರ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು. ಪೊಲೀಸರು ಮುಖ್ಯಮಂತ್ರಿ ಮನೆ ಬಳಿ ಹೋಗಲು ಬಿಡುತ್ತಿಲ್ಲ, ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ಎಂದು ಘೋಷಣೆ ಕೂಗುತ್ತಾ ಸಿ.ಎಂ ಮನೆ ಕಡೆ ಹೊರಟ ರೈತರನ್ನು ರೈತ ಮಹಿಳೆಯರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.

ಸುಮ್ಮಸುಮ್ಮನೆ ಮುಂಜಾಗ್ರತ ಕ್ರಮ ಬಂಧನ ಬೇಡ, ನ್ಯಾಯ ಕೊಡಿಸಿ ಇಲ್ಲವೇ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ನಿಮಗೆ ಸಾಧ್ಯವಾದರೆ ಮಾತ್ರ ನಮ್ಮನ್ನು ಬಂಧಿಸಿ, ಎಂದು ಎಸಿಪಿಗೆ ಎಚ್ಚರಿಕೆ ನೀಡಿದರು, ನಾವು ಮುಖ್ಯಮಂತ್ರಿ ಮನೆಗೆ ಹೋಗಲು ಬಿಡುತ್ತಿಲ್ಲ, ಬಂಧಿಸಿ ನ್ಯಾಯಾಲಯಕ್ಕೆ ಕರೆದು ಕೊಂಡು ಹೋಗಿಲ್ಲ, ಇದು ಗುಂಡಾಗಿರಿ ವರ್ತನೆ ಎಂದು ರೈತಮುಖಂಡ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಜೇಡರ ಬಲೆಯಲ್ಲಿ: ರಾಜ್ಯ ಸರ್ಕಾರ ಜೇಡರ ಬಲೆಯಲ್ಲಿ ಸಿಲುಕಿದೆ, ರೈತರನ್ನು ಈ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ, ಕಳೆದ ನಾಲ್ಕು ತಿಂಗಳಿಂದ ಮಂಡ್ಯ, ಬಿಜಾಪುರ, ಮೈಸೂರು ಜಿಲ್ಲೆಗಳಲ್ಲಿ ನಿರಂತರ ಧರಣಿ ಚಳವಳಿ ನಡೆಸಲಾಗುತ್ತಿದೆ. ಮಂತ್ರಿಗಳು ಸುಳ್ಳು ಹೇಳಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ.

ಸಕ್ಕರೆ ಸಚಿವರು ಪಾಪದ ಕೂಸಾಗಿ ಕೆಲಸ ಮಾಡುತ್ತಿದ್ದಾರೆ, ರಾಜ್ಯದ ರೈತರು ಬಿಜೆಪಿ ಶಾಸಕರು, ಸಂಸದರ ಮನೆ ಅಥವಾ ಕಚೇರಿ ಮುಂದೆ ರಾಜ್ಯಾದ್ಯಂತ 5 ರಂದು ಸೋಮವಾರ ಪ್ರತಿಭಟನೆ ಮಾಡಿ ಎಚ್ಚರಿಸಲಿದ್ದೇವೆ ಎಂದು ಹೇಳಿದರು.

5 ದಿನವಾದರೂ ಬಾರದ ವರದಿ: ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ 5 ದಿನದಲ್ಲಿ ವರದಿ ಏನು ಮಾಡಿದ್ದಾರೆ ಎಂದು ರೈತರಿಗೆ ಬಹಿರಂಗಪಡಿಸಲಿ. ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ಹುಸಿ ಗೊಳಿಸುತ್ತಿದ್ದಾರೆ. ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರಿಂದ ನಿರಂತರ ಹೋರಾಟ:ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಪೊಲೀಸರ ಬಲದಿಂದ ಭಂಡತನ ತೋರುತ್ತಿದೆ. ಸಿ.ಎಂ ಜನಸಂಪರ್ಕ ಸಭೆ ಮಾಡುತ್ತಿದ್ದು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿದ್ದೀರಿ, ನಿಮ್ಮಿಂದ ಮುಂದೆ ಏನು ಮಾಡಲು ಸಾಧ್ಯವಿಲ್ಲ ಎಂದು ರೈತರಿಗೆ ಗೊತ್ತಿದೆ. ಕಬ್ಬು ಬೆಳೆಗಾರರ ರೈತ ಮುಖಂಡರ ಗುಂಪೊಂದು ಮುಖ್ಯಮಂತ್ರಿ ಗೃಹ ಕಚೇರಿಯ ಭೇಟಿಗೂ ಅವಕಾಶ ನೀಡಲಿಲ್ಲ ಎಂದು ಪ್ರತಿಭಟಿಸಿದಾಗ ಇದನ್ನು ಕಂಡು ಕಕ್ಕಾಬಿಕ್ಕಿಯಾದ ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು.

ದೂರದ ಜಿಲ್ಲೆಗಳಿಂದ ಬಂದ ಕಬ್ಬು ಬೆಳೆಗಾರ ರೈತರನ್ನು ಬೆಳಿಗ್ಗೆ ರೈಲು ನಿಲ್ದಾಣದಲ್ಲಿ ಪೊಲೀಸರು ದಿಕ್ಕು ತಪ್ಪಿಸಿದ ಪ್ರಸಂಗವೂ ನಡೆಯಿತು. ಬಂಧಿಸಿದ ಸಿಎಆರ್ ಮೈದಾನಕ್ಕೆ ಬಿಡಲಾಯಿತು ಎಂದು ಹೇಳಿದರು.

ನ್ಯಾಯಾಧೀಶರ ಮುಂದೆ ನಿಲ್ಲಿಸಿ:ರೈತರನ್ನು ನ್ಯಾಯಾಧೀಶರ ಮುಂದೆ ನಮ್ಮನ್ನು ನಿಲ್ಲಿಸಬೇಕು ಅಥವಾ ಮುಖ್ಯಮಂತ್ರಿ ಮನೆಗೆ ಕರೆದುಕೂಂಡು ಹೋಗಿ ಎಂದು ಹಟ ತೂಟ್ಟು ಕುಳಿತ್ತಿದ್ದಾರೆ. ಸರ್ಕಾರದ ಬೇಜವಾಬ್ದಾರಿ ಆಡಳಿತದಿಂದ ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಚಿರತೆ ದಾಳಿಯಿಂದ ಟಿ ನರಸೀಪುರದಲ್ಲಿ ಯುವತಿ ಒಬ್ಬಳು ಪ್ರಾಣ ಕಳೆದು ಕೊಂಡಿದ್ದಾಳೆ. ಆದರೆ ಅರಣ್ಯ ಇಲಾಖೆಯವರು ನಿದ್ರೆ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ರಮೇಶ್ ಹೂಗಾರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಹುಳುವಪ್ಪ ಬಳಗೆರಾ, ನಿಂಗನಗೌಡರು, ಮಂಜುಳಾಪಾಟೀಲ್, ದೇವಮಣ್ಣಿ ಮುಂತಾದವರು ಭಾಗವಹಿಸಿದ್ದರು.

ಇದನ್ನೂ ಓದಿ:ರೈತನ‌ ಬದುಕು ಹಸನಾಗಿಸಿದ ಹೈನೋದ್ಯಮ: ಗ್ರಾಮೀಣ ಜನರ ಆರ್ಥಿಕ ಬದುಕಿಗೆ ಆಸರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.