ಬೆಂಗಳೂರು: ರಾಜ್ಯ ಹಾಗೂ ಕೇಂದ್ರದ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಸಾಧನೆಯ ವಿಡಿಯೋವೊಂದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇನ್ನೇನು ಉದ್ಘಾಟನೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಿ ರಸ್ತೆ ಸಂಚಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ತೆರಳಿದ್ದರು. ಇದೇ ರಸ್ತೆಯ ವಿಚಾರವಾಗಿ ಸಚಿವ ಸುಧಾಕರ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದ ಜೊತೆ ಜೊತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಹಾದು ಹೋಗಿರುವುದು ಕಾಣುತ್ತದೆ. ಸಂಸದ ಪ್ರತಾಪ್ ಸಿಂಹ ಅವರೂ ಕೂಡಾ ನಿತ್ಯವೂ ಒಂದಲ್ಲೊಂದು ಚಿತ್ರದ ಮೂಲಕ ಈ ಹೆದ್ದಾರಿಯ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಆರೋಗ್ಯ ಸಚಿವ ಕೆ.ಸುಧಾಕರ್ ಇದೀಗ ವಿಶಿಷ್ಟ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಡ್ರೋನ್ ಕ್ಯಾಮೆರಾದಿಂದ ದೃಶ್ಯ ಸೆರೆ ಹಿಡಿಯಲಾಗಿದೆ. ಇದು ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳ ಸಾಧನೆ ಎಂದು ಸಚಿವರು ಶೀರ್ಷಿಕೆ ಬರೆದಿದ್ದಾರೆ.
-
10-lane Bengaluru-Mysuru Expressway and Vande Bharat Express in one frame!
— Dr Sudhakar K (@mla_sudhakar) February 9, 2023 " class="align-text-top noRightClick twitterSection" data="
Double Engine BJP Govts at the Centre and in Karnataka have delivered next generation infrastructure at a scale & speed that is unprecedented.@narendramodi @BSBommai @nitin_gadkari @AshwiniVaishnaw pic.twitter.com/WBU3wx0kbr
">10-lane Bengaluru-Mysuru Expressway and Vande Bharat Express in one frame!
— Dr Sudhakar K (@mla_sudhakar) February 9, 2023
Double Engine BJP Govts at the Centre and in Karnataka have delivered next generation infrastructure at a scale & speed that is unprecedented.@narendramodi @BSBommai @nitin_gadkari @AshwiniVaishnaw pic.twitter.com/WBU3wx0kbr10-lane Bengaluru-Mysuru Expressway and Vande Bharat Express in one frame!
— Dr Sudhakar K (@mla_sudhakar) February 9, 2023
Double Engine BJP Govts at the Centre and in Karnataka have delivered next generation infrastructure at a scale & speed that is unprecedented.@narendramodi @BSBommai @nitin_gadkari @AshwiniVaishnaw pic.twitter.com/WBU3wx0kbr
ಡಾ.ಸುಧಾಕರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, "10 ಪಥಗಳ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಒಂದೇ ಚೌಕಟ್ಟಿನಲ್ಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ಅಭೂತಪೂರ್ವ ವೇಗದಲ್ಲಿ ಮುಂದಿನ ಪೀಳಿಗೆಗೆ ಮೂಲ ಸೌಕರ್ಯಗಳನ್ನು ಒದಗಿಸಿವೆ" ಎಂದು ತಿಳಿಸಿದ್ದಾರೆ.
8,453 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಮೂಲಕ ತೆರಳಲು ಇದುವರೆಗೆ ಮೂರುವರೆ ಗಂಟೆ ಕಾಲ ಬೇಕಾಗಿತ್ತು. ಆದರೆ, ಈಗ ಸಿದ್ಧವಾಗಿರುವ ಎಕ್ಸ್‌ಪ್ರೆಸ್ ವೇ ಮೂಲಕ ಕೇವಲ ಒಂದೂವರೆ ಗಂಟೆಯಲ್ಲಿ ಕ್ರಮಿಸಬಹುದು.
ವೇಗ, ಸುರಕ್ಷಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಸ್ತೆಯನ್ನು ಸಿದ್ಧಪಡಿಸಲಾಗಿದೆ. ಸದ್ಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನಿಂದ ಮಂಡ್ಯಕ್ಕೆ ವಾಹನ ಸಂಚಾರಕ್ಕೆ ಅನುಮತಿ ನೀಡಿದೆ. ಉಳಿದ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ. ಈ ರಸ್ತೆಯು 118 ಕಿ.ಮೀ. ಉದ್ದ ಹೊಂದಿದೆ.
ಎರಡು ತಿಂಗಳ ಹಿಂದೆ ಹಳೆ ಮೈಸೂರು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಾಮನಗರ ಬಳಿ ಎಕ್ಸ್‌ಪ್ರೆಸ್ ವೇ ನಲ್ಲಿ ನೀರು ಸಂಗ್ರಹವಾಗಿ ವಾರಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆಗ ರಸ್ತೆ ನಿರ್ಮಾಣ ಹಾಗೂ ಗುಣಮಟ್ಟದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ರಸ್ತೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಸಚಿವ ಸುಧಾಕರ್ ಸೂಕ್ತ ಸಮಯ ನೋಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರು ಮತ್ತು ಚೆನ್ನೈ ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿತ್ತು. ರೈಲಿನ ಸರಾಸರಿ ವೇಗ ಗಂಟೆಗೆ 75 ರಿಂದ 77 ಕಿ.ಮೀ. ಎರಡು ನಗರಗಳ ನಡುವಿನ ಅಂತರ 504 ಕಿ.ಮೀ. ಚೆನ್ನೈನಿಂದ ಮೈಸೂರು ನಗರವನ್ನು ಈ ರೈಲು ಆರೂವರೆ ಗಂಟೆಗಳಲ್ಲಿ ತಲುಪುತ್ತದೆ.
ಇದನ್ನೂ ಓದಿ: ಸಚಿವ ಸುಧಾಕರ್ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ