ETV Bharat / state

ತಮಿಳುನಾಡಿನ 3ನೇ ಬೆಳೆಗೆ ಹರಿಯುತ್ತಿರುವ ಕಾವೇರಿ ನೀರನ್ನು ಡಿಕೆಶಿ ತಡೆಯಲಿ: ಕುರುಬೂರು ಶಾಂತಕುಮಾರ್ - 56 ಟಿಎಂಸಿ ನೀರು ಸಂಗ್ರಹ

ತಮಿಳುನಾಡಿಗೆ ಕಾವೇರಿ ನೀರು ಹರಿಯುವಿಕೆ ತಡೆಗೆ ಆಗ್ರಹಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ.

Water Conservation Committee protest  continued
ಜಲ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಧರಣಿ ಮುಂದುವರಿಕೆ
author img

By ETV Bharat Karnataka Team

Published : Oct 6, 2023, 5:43 PM IST

ಬೆಂಗಳೂರು: ರಾಜ್ಯದ ರೈತರಿಗೆ ಗಿಳಿಪಾಠ ಹೇಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಿಳುನಾಡು ರಾಜ್ಯಕ್ಕೆ ಮೂರನೇ ಬೆಳೆ ಬೆಳೆಯುವುದಕ್ಕಾಗಿ ಹರಿಯುತ್ತಿರುವ ಕಾವೇರಿ ನೀರು ತಡೆಯುವ ಕೆಲಸಕ್ಕೆ ಮುಂದಾಗಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಲಹೆ ನೀಡಿದರು.

ನೀರಾವರಿ ಮಂತ್ರಿಯಾಗಿರುವ ಅವರು ಇಂಡಿಯಾ ಒಕ್ಕೂಟ ಬಲಪಡಿಸುವ ಚಿಂತನೆಯಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಓಲೈಸುವ ಕಾರಣದಿಂದ ರಾಜ್ಯದ ನೀರು ಬಿಟ್ಟು ರೈತರನ್ನು ಬಲಿ ಕೊಟ್ಟಿದ್ದಾರೆ ಎಂದು ದೂರಿದರು.

ಕಾವೇರಿ ನೀರಿಗಾಗಿ ರಾಷ್ಟ್ರಪತಿ, ಕೇಂದ್ರ ಜಲ ಸಂಪನ್ಮೂಲ ಸಚಿವ ಹಾಗೂ ಕಾವೇರಿ ಪ್ರಾಧಿಕಾರದ ಮುಖ್ಯಸ್ಥರನ್ನು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ನಿಯೋಗ 9ರಂದು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ಸಮಯ ನಿಗದಿಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷ, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ
ವಿ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಜನರನ್ನು ಮರೆತು ನೀರು ಹರಿಸುವ ಮೂಲಕ ತಮಿಳುನಾಡಿನ ಓಲೈಕೆ ನೀತಿಯನ್ನು ರಾಜ್ಯ ಸರ್ಕಾರ ಮಾಡಬಾರದು. ಕಾವೇರಿ ನೀರಿಗಾಗಿ ಇಂದು ನೂರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಧರಣಿ ಆರಂಭಿಸಿದ್ದಾರೆ ಎಂದರು.

"ಉಳಿಸಿ ಉಳಿಸಿ ಕಾವೇರಿ ಉಳಿಸಿ, ಕಾವೇರಿ ನಮ್ಮದು" ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಐದನೇ ದಿನದ ಧರಣಿ ಮುಂದುವರಿಸಿದ್ದಾರೆ. ಕನ್ನಡ ಚಳುವಳಿಯ ದಲಿತ ಸಂಘಟನೆಗಳ ಮುಖಂಡ ವೆಂಕಟೇಶ, ಸತೀಸ್, ಕನ್ನಡ ಚಳುವಳಿ ಗುರುದೇವ ನಾರಾಯಣ್, ಆಮ್ ಆದ್ಮಿ ಪಕ್ಷದ ಉಷಾ ಮೋಹನ್ ಮತ್ತಿತರರು ಭಾಗವಹಿಸಿದ್ದರು.

56 ಟಿಎಂಸಿ ನೀರು ಸಂಗ್ರಹ: ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ 106 ಟಿಎಂಸಿ ನೀರಿನ ಅಗತ್ಯವಿದ್ದು, ಇದೀಗ 56 ಟಿಎಂಸಿ ನೀರು ಸಂಗ್ರಹವಿದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅಕ್ಬೋಬರ್ 1ರಂದು 13,000, 2ರಂದು 23,000, 3ರಂದು 20,000, 4ರಂದು 15,000, 5ರಂದು 10,000 ಕ್ಯೂಸೆಕ್ ನೀರು ಒಳಹರಿವಿನ ಮೂಲಕ ಸಂಗ್ರಹವಾಗಿದೆ ಎಂದು ಡಿ.ಕೆ.ಶಿವಕುಮಾರ್ ನಿನ್ನೆ ತಿಳಿಸಿದ್ದರು.

ವಿಧಾನ ಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ನಾವು ರಕ್ಷಿಸಿದ್ದೇವೆ. ಇದು ಸಮಾಧಾನದ ವಿಷಯ. ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ಸೂಚಿಸಿದ್ದೇವೆ. ಮುಂದಿನ ತಿಂಗಳು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದಿದ್ದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 2.78 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಜಿಲ್ಲಾಧಿಕಾರಿ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.