ETV Bharat / state

ಅಲ್ಲೊಂದು, ಇಲ್ಲೊಂದು ಬಸ್ ಹೋಗ್ತಿದೆ ಅಂತಾ ಎದೆಗುಂದುವುದು ಬೇಡ: ಆನಂದ್​ - ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್

6 ದಿನಗಳ ಮುಷ್ಕರ ಯಶಸ್ವಿಯಾಗಿದೆ. ಅಲ್ಲೊಂದು, ಇಲ್ಲೊಂದು ಬಸ್ ಹೋಗ್ತಿದೆ ಅಂತಾ ಎದೆಗುಂದುವುದು ಬೇಡ. ನಮ್ಮ ನೌಕರರು ಯಾರು ಬಸ್ ಓಡಿಸುತ್ತಿಲ್ಲ. ಖಾಸಗಿ ಚಾಲಕರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್​ ಹೇಳಿದ್ದಾರೆ.

Anand reaction
ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್
author img

By

Published : Apr 12, 2021, 1:34 PM IST

ಬೆಂಗಳೂರು: ಸರ್ಕಾರದ ವಿರುದ್ಧದ ಸಾರಿಗೆ ನೌಕರರ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ಕೊಡ್ತಾಯಿಲ್ಲ, ಸಾರಿಗೆ ನೌಕರರು ಬಿಡ್ತಾಯಿಲ್ಲ ಅನ್ನೊ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ ಮುಷ್ಕರ ಇಂದಿನಿಂದ ತಟ್ಟೆ ಲೋಟ ಹಿಡಿದು ಸಾರಿಗೆ ನೌಕರರು ಮತ್ತವರ ಕುಟುಂಬಸ್ಥರು ಬೀದಿಗೆ ಬಂದಿದ್ದಾರೆ.

ಇಂದು ರಾಜ್ಯಾದ್ಯಂತ ಡಿಸಿ ಕಚೇರಿ, ತಹಶೀಲ್ದಾರ್ ಕಚೇರಿಗಳ ಮುಂಭಾಗ ತಟ್ಟೆ, ಲೋಟ ಬಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕೇಂದ್ರ ಕಚೇರಿ ಮುಂಭಾಗ ಬೆ. 11.30 ಗಂಟೆಯಿಂದ ತಟ್ಟೆ ಲೋಟ ಹಿಡಿದು ಚಳವಳಿ ಆರಂಭಿಸಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್

ಸರ್ಕಾರದ ಸಂಬಳ ಸಾಲುತ್ತಿಲ್ಲ, ಅರ್ಧ ಹೊಟ್ಟೆಯಲ್ಲಿ ಜೀವನ ನಡೆಸುತ್ತಿದ್ದೇವೆ. ನಾಳೆ ಯುಗಾದಿ ಹಬ್ಬ ಇದೆ. ಮಾರ್ಚ್ ತಿಂಗಳ ಸಂಬಳ ಆಗಿಲ್ಲ. 6ನೇ ವೇತನ ಆಯೋಗ ಜಾರಿಯಾಗಿಲ್ಲ. ಇಂದು ಬೇಡಿಕೆ ಈಡೇರಿಸದಿದ್ದಲ್ಲಿ ನಾಳೆಯಿಂದ‌ ಅನಿರ್ದಿಷ್ಟಾವದಿ ಮುಷ್ಕರ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್​ 6 ದಿನಗಳ ಮುಷ್ಕರ ಯಶಸ್ವಿಯಾಗಿದೆ. ಅಲ್ಲೊಂದು, ಇಲ್ಲೊಂದು ಬಸ್ ಹೋಗ್ತಿದೆ ಅಂತಾ ಎದೆಗುಂದುವುದು ಬೇಡ. ನಮ್ಮ ನೌಕರರು ಯಾರು ಬಸ್ ಓಡಿಸುತ್ತಿಲ್ಲ. ಖಾಸಗಿ ಚಾಲಕರನ್ನು ಕರೆದುಕೊಂಡು ಬಂದಿದ್ದಾರೆ.

ಕೆಲಸ ಮಾಡಲು ಆಗದಂತಹ ಅಸಹಾಯಕರನ್ನು ಹೆದರಿಸಿ, ಬೆದರಿಸಿ ಕೆಲಸ ಮಾಡಿಸುತ್ತಿದ್ದಾರೆ. ಮುಷ್ಕರ ಮುರಿಯಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ನೌಕರರು ಗೊಂದಲಕ್ಕೆ ಒಳಗಾಗಬಾರದು. ಚಳುವಳಿಯನ್ನು ಮುಂದುವರೆಸಿ, ಕುಟುಂಬ ಸಮೇತರಾಗಿ ತಟ್ಟೆ, ಲೋಟ ಚಳವಳಿ ಮಾಡಿ. ಈ ಮುಷ್ಕರಕ್ಕೆ ಹಲವು ಸಂಘಟನೆಗಳು ಬೆಂಬಲಿಸಿವೆ. ಸಾರಿಗೆ ನೌಕರರು ಆತಂಕಕ್ಕೆ ಒಳಗಾಗೋದು ಬೇಡ ಎಂದು ಹೇಳಿದ್ದಾರೆ.

ಓದಿ: ‌ಸರ್ಕಾರ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿಲ್ಲ: ಚಾಲಕ ಆನಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.