ETV Bharat / state

‌ಸರ್ಕಾರ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿಲ್ಲ: ಚಾಲಕ ಆನಂದ್ - transportation staffs strike updates

ಸರ್ಕಾರಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ, ಸರ್ಕಾರ ನಮ್ಮನ್ನು ಮಾತುಕತೆಗೆ ಕರೆಯುತ್ತಿಲ್ಲ , ಹೀಗಾಗಿ ಅನಿರ್ದಿಷ್ಟಾವಧಿವರೆಗೂ ಮುಷ್ಕರ ಮುಂದುವರೆಯುತ್ತೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ‌ಎಚ್ಚರಿಕೆ ನೀಡಿದ್ದಾರೆ.

anand reaction
ಚಾಲಕ ಆನಂದ್ ಪ್ರತಿಕ್ರಿಯೆ
author img

By

Published : Apr 10, 2021, 11:31 AM IST

ಬೆಂಗಳೂರು: ಸರ್ಕಾರವು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿಲ್ಲ, ಅದರ ಬದಲಾಗಿ ಕಾರ್ಮಿಕ ವಿವಾದ ಕಾಯ್ದೆಯಡಿ ಮುಷ್ಕರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಆರೋಪಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರಿಕೆ ಆಗದ ಹೊರತು ಮುಷ್ಕರ ನಿಲ್ಲಿಸೋಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಏಪ್ರಿಲ್ 6 ರಂದು ಕಾರ್ಮಿಕ ಆಯುಕ್ತರ ಹತ್ತಿರ ಸಂಧಾನ ಸಭೆಯಿತ್ತು. ಅವತ್ತು ಯಾಕೆ ಸರ್ಕಾರ ಮುಷ್ಕರ ಮುರಿಯಲಿಲ್ಲ?ಸರ್ಕಾರ ಆಗ ಮುಷ್ಕರಕ್ಕೆ ಪ್ರಚೋದನೆ ಕೊಟ್ಟಿದೆ. ಇವತ್ತು ಕಾರ್ಮಿಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಸರ್ಕಾರ ಕೂಟದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದೆ, ಈ ನೀತಿಯನ್ನು ಖಂಡಿಸುತ್ತೇವೆ. ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಟು ಬೇಡಿಕೆಯನ್ನು ಈಡೇರಿಸಿದ್ದೇವೆ ಅಂತಾ..ಆದರೆ ಆರನೇ ವೇತನ ಆಯೋಗ ಜಾರಿಯಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ನಮ್ಮ ಮುಷ್ಕರ ಮುರಿಯಲು ಟ್ರೈನಿ ನೌಕರರನ್ನು ಅಮಾನತು ಮಾಡಿದ್ದೀರಾ ಹಾಗೂ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದೀರಾ ಇದು ಸರಿಯಲ್ಲ. ಸರ್ಕಾರ ಮಾತುಕತೆಗೆ ಕರೆಯುತ್ತಿಲ್ಲ ಅನಿರ್ದಿಷ್ಟವಧಿವರೆಗೂ ಮುಷ್ಕರ ಮುಂದುವರೆಯುತ್ತೆ ಅಂತ‌ ಎಚ್ಚರಿಕೆ ನೀಡಿದರು.

ಬೆಳಗಾವಿಗೆ ಹೊರಟ ಕೋಡಿಹಳ್ಳಿ ಚಂದ್ರಶೇಖರ್

ನಾಲ್ಕನೇ ದಿನವೂ ಸಾರಿಗೆ ಮುಷ್ಕರ ಮುಂದುವರೆದಿದ್ದು, ಕಳೆದ ಮೂರು ದಿನಗಳ ಹಾಗೆ ಇಂದೂ ಪ್ರಯಾಣಿಕರ ಪರದಾಟ ಅನುಭವಿಸುತ್ತಿದ್ದಾರೆ.. ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಸಾರಿಗೆ ನೌಕರರು, ಕೆಲಸಕ್ಕೆ ಹಾಜರಾಗಿಲ್ಲ. ಇತ್ತ ರಾಜ್ಯಾದ್ಯಂತ ಮುಷ್ಕರವನ್ನ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಈ ಹಿನ್ನೆಲೆ ಇಂದು ಬೆಳಗಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಯಾಣ ಬೆಳೆಸಿದ್ದಾರೆ.. ಇಂದು ಬೆಳಗಾವಿ ಹಾಗೂ ಗುಲ್ಬರ್ಗದಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರ ಸಭೆ ನಡೆಸಲಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.