ETV Bharat / state

ಅನ್‌ಲಾಕ್ ಬಳಿಕ ನಿಧಾನವಾಗಿ ಚೇತರಿಕೆಯತ್ತ ರಾಜ್ಯದ ಆದಾಯ ಸಂಗ್ರಹ! - state revenue income collection 2021

ಕೋವಿಡ್ 3ನೇ ಅಲೆಯ ಭೀತಿಯಲ್ಲಿ ಸಂಪೂರ್ಣ ಅನ್​ಲಾಕ್​ ಸದ್ಯಕ್ಕೆ ಅನುಮಾನವಾಗಿದೆ. ಹಾಗಾಗಿ, ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಚೇತರಿಕೆ ಕಾಣುವುದು ಅನುಮಾನ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ, ಅನ್​ಲಾಕ್​ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ಸಾಧಾರಣವಾಗಿ ಆದಾಯ ಸಂಗ್ರಹದಲ್ಲಿ ಚೇತರಿಕೆ ಕಾಣುತ್ತಿದೆ..

Vidhanasouda
ವಿದಾನಸೌಧ
author img

By

Published : Jul 30, 2021, 3:33 PM IST

ಬೆಂಗಳೂರು : ಕೋವಿಡ್ 2ನೇ ಅಲೆಗೆ ಕರುನಾಡು ಸಂಪೂರ್ಣ ತತ್ತರಿಸಿತ್ತು.‌ 2ನೇ ಅಲೆಗೆ ಬ್ರೇಕ್ ಹಾಕಲು ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಹೇರಿತ್ತು. ಪರಿಣಾಮ ಸೊರಗಿದ ಖಜಾನೆ ಇದೀಗ ಅನ್​ಲಾಕ್​ ನಂತರ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಹಾಗಾದರೆ, ಕಳೆದ ಮೂರು ತಿಂಗಳಲ್ಲಿ ರಾಜ್ಯದ ಆದಾಯ ಸಂಗ್ರಹದ ಸ್ಥಿತಿಗತಿ ಹೇಗಿದೆ ಎಂಬ ಸಮಗ್ರ ವರದಿ ಇಲ್ಲಿದೆ.

state-revenue-collection-recovery-after-unlock
ಅನ್‌ಲಾಕ್ ಬಳಿಕ ನಿಧಾನವಾಗಿ ಚೇತರಿಕೆಯತ್ತ ಸಾಗಿದ ರಾಜ್ಯದ ಆದಾಯ

ಕೋವಿಡ್ 2ನೇ ಅಲೆ ರಾಜ್ಯವನ್ನು ಸಂಪೂರ್ಣವಾಗಿ ಮಂಡಿಯೂರುವಂತೆ ಮಾಡಿದೆ. ಕೋವಿಡ್ 2ನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಕುಬೇಕಾಯಿತು. ಕೊನೆಗೆ ಅನಿವಾರ್ಯವಾಗಿ ರಾಜ್ಯಾದ್ಯಂತ ಲಾಕ್​ಡೌನ್​ ಹೇರಬೇಕಾಯಿತು.‌ ಸುಮಾರು ಎರಡು ತಿಂಗಳು ಲಾಕ್‌ಡೌನ್ ಹೇರುವ ಮೂಲಕ ಆರ್ಥಿಕ ಚಟುವಟಿಕೆ ಬಹುತೇಕ ಸ್ತಬ್ಧವಾಯಿತು.‌ ಇದರ ಪರಿಣಾಮವಾಗಿ ರಾಜ್ಯದ ಖಜಾನೆ ಸೊರಗಲು ಪ್ರಾರಂಭವಾಯಿತು.

ಆದಾಯವಿಲ್ಲದೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಜೂನ್ 15ರ ಬಳಿಕ ರಾಜ್ಯ ಸರ್ಕಾರ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸಿತು.‌ ಇದೀಗ ರಾಜ್ಯದಲ್ಲಿ ಬಹುತೇಕ ಅನ್‌ಲಾಕ್ ಆಗಿರುವ ಕಾರಣ ಆದಾಯ ಸಂಗ್ರಹದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ತಕ್ಕಮಟ್ಟಿಗೆ ಚೇತರಿಕೆಯ ಹಾದಿ ಕಾಣುತ್ತಿದೆ.

ನಿಧಾನಗತಿಯ ಚೇತರಿಕೆಯತ್ತ ಆದಾಯ ಸಂಗ್ರಹ : 2020-21ರ ರಾಷ್ಟ್ರೀಯ ಲಾಕ್‌ಡೌನ್ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಕೊಡಲಿ ಏಟು ನೀಡಿತ್ತು. ಅದೇ 2021-22ನೇ ಸಾಲಿನಲ್ಲಿ ಮತ್ತೆ ಕೊರೊನಾ ಅಟ್ಟಹಾಸಕ್ಕೆ ನಲುಗಿದ ಕರ್ನಾಟಕ, ಲಾಕ್‌ಡೌನ್ ಹೇರಿದ ಕಾರಣ ಸೊರಗಿದ್ದ ಬೊಕ್ಕಸ ಮತ್ತಷ್ಟು ಮಂಡಿಯೂರುವಂತೆ ಮಾಡಿದೆ.

ಕೋವಿಡ್ 3ನೇ ಅಲೆಯ ಭೀತಿಯಲ್ಲಿ ಸಂಪೂರ್ಣ ಅನ್​ಲಾಕ್​ ಸದ್ಯಕ್ಕೆ ಅನುಮಾನವಾಗಿದೆ. ಹಾಗಾಗಿ, ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಚೇತರಿಕೆ ಕಾಣುವುದು ಅನುಮಾನ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ, ಅನ್​ಲಾಕ್​ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ಸಾಧಾರಣವಾಗಿ ಆದಾಯ ಸಂಗ್ರಹದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, ಆರ್ಥಿಕ ವರ್ಷದ ಮೊದಲ ಏಪ್ರಿಲ್ ತಿಂಗಳಲ್ಲಿ ಸ್ವಂತ ತೆರಿಗೆ ರಾಜಸ್ವ ಮೂಲಕ 10,976 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಮೇ ತಿಂಗಳಲ್ಲಿ ಲಾಕ್‌ಡೌನ್ ಹೇರಿದ ಕಾರಣ ಆದಾಯದಲ್ಲಿ ತೀವ್ರ ಕುಸಿತ ಕಂಡಿತು. ಸ್ವಂತ ತೆರಿಗೆ ರಾಜಸ್ವ ಸಂಗ್ರಹ 5,759 ಕೋಟಿ ರೂ.ಗೆ ಇಳಿಕೆಯಾಯಿತು. ಜೂನ್ 15ರಂದು ಭಾಗಶಃ ಅನ್‌ಲಾಕ್‌ ಆದ ಬಳಿಕ ಆದಾಯ ಸಂಗ್ರಹದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಜೂನ್ ತಿಂಗಳಲ್ಲಿ ಒಟ್ಟು 6,442 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ ಸಂಗ್ರಹವಾಗಿದೆ. ಕಳೆದ ಮೂರು ತಿಂಗಳಲ್ಲಿ ಸ್ವಂತ ತೆರಿಗೆಗಳ ಮೂಲಕ ಒಟ್ಟು 23,177 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಯಾವ ಇಲಾಖೆ ಎಷ್ಟು ತೆರಿಗೆ ಸಂಗ್ರಹ?

ಏಪ್ರಿಲ್ ಆದಾಯ ಸಂಗ್ರಹ

ವಾಣಿಜ್ಯ ತೆರಿಗೆ- 7,122 ಕೋಟಿ
ಅಬಕಾರಿ ತೆರಿಗೆ- 2,203 ಕೋಟಿ
ಮೋಟಾರು ವಾಹನ ತೆರಿಗೆ- 572 ಕೋಟಿ
ಮುದ್ರಾಂಕ ಶುಲ್ಕ- 1,037 ಕೋಟಿ
ಇತರೆ- 42 ಕೋಟಿ
ಸ್ವಂತ ತೆರಿಗೆಯೇತರ ರಾಜಸ್ವ- 761 ಕೋಟಿ
ಸ್ವಂತ ತೆರಿಗೆ ರಾಜಸ್ವ ಸಂಗ್ರಹ- 10,976 ಕೋಟಿ

ಮೇ ಆದಾಯ ಸಂಗ್ರಹ

ವಾಣಿಜ್ಯ ತೆರಿಗೆ- 4,037 ಕೋಟಿ
ಅಬಕಾರಿ ತೆರಿಗೆ- 1,474 ಕೋಟಿ
ಮೋಟಾರು ವಾಹನ ತೆರಿಗೆ- 69 ಕೋಟಿ
ಮುದ್ರಾಂಕ ಶುಲ್ಕ- 147 ಕೋಟಿ
ಇತರೆ- 32 ಕೋಟಿ
ಸ್ವಂತ ತೆರಿಗೆಯೇತರ ರಾಜಸ್ವ- 720 ಕೋಟಿ
ಸ್ವಂತ ತೆರಿಗೆ ರಾಜಸ್ವ ಸಂಗ್ರಹ- 5,759 ಕೋಟಿ

ಜೂನ್ ಆದಾಯ ಸಂಗ್ರಹ

ವಾಣಿಜ್ಯ ತೆರಿಗೆ- 3,194 ಕೋಟಿ
ಅಬಕಾರಿ ತೆರಿಗೆ- 2,230 ಕೋಟಿ
ಮೋಟಾರು ವಾಹನ ತೆರಿಗೆ- 224 ಕೋಟಿ
ಮುದ್ರಾಂಕ ಶುಲ್ಕ- 759 ಕೋಟಿ
ಇತರೆ- 36 ಕೋಟಿ
ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹ - 731 ಕೋಟಿ
ಸ್ವಂತ ತೆರಿಗೆ ರಾಜಸ್ವ ಸಂಗ್ರಹ- 6,442 ಕೋಟಿ

ಓದಿ: ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸಿದಾಕ್ಷಣ BBMP ಬಾಧ್ಯತೆ ಮುಗಿಯದು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.