ಕೆ.ಆರ್.ಪುರ: ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಯುವಕರು ದೇಶಕ್ಕೆ ಕೀರ್ತಿ ತರುವ ಕಾರ್ಯ ಮಾಡಬೇಕೆಂದು ಆಯೋಜಕ ಲಯನ್ಸ್ ಸ್ಪೋರ್ಟ್ಸ್ ಅಕಾಡೆಮಿಯ ಪುರುಷೋತ್ತಮ್ ಹೇಳಿದರು.
ಕೆ.ಆರ್.ಪುರದ ಡಾ.ಅಂಬೇಡ್ಕರ್ ಮೈದಾನದಲ್ಲಿ ನಡೆದ ಕೃಷ್ಣರಾಜಪುರ ಪ್ರೀಮಿಯರ್ ಲೀಗ್- 2021 ರಾಜ್ಯ ಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು 5 ದಿನಗಳ ಕಾಲ ಪಂದ್ಯಾವಳಿಯನ್ನು ನಡೆಸಲಾಗಿತ್ತು. ಇದರಲ್ಲಿ 16 ತಂಡಗಳು ಭಾಗವಹಿಸಿದ್ದವು. ಫಾಲ್ಕಾನ್ ತಂಡ 2021ರ ಕೃಷ್ಣರಾಜಪುರ ಪ್ರೀಮಿಯರ್ ಲೀಗ್ನ ವಿಜೇತರಾದರು. ಗೆದ್ದ ತಂಡಕ್ಕೆ 1 ಲಕ್ಷ ರೂ ನಗದು ಬಹುಮಾನ ಹಾಗೂ ರನ್ನರ್ ಅಪ್ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.