ETV Bharat / state

ಇಂಧನ ಇಲಾಖೆಗೆ 11 ಸಾವಿರ ಕೋಟಿ ನಷ್ಟ : ಖಂಡ್ರೆ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಸರ್ಕಾರ - ಇಂಧನ ಇಲಾಖೆಯಲ್ಲಿ ಉಂಟಾದ ನಷ್ಟದ ವಿಚಾರ

ಇಂಧನ ಇಲಾಖೆಯಲ್ಲಿ ಉಂಟಾದ ನಷ್ಟದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಇದು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶವನ್ನು ಹೊಂದಿದೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.

Vidhanasowdha
Vidhanasowdha
author img

By

Published : Nov 23, 2020, 11:12 PM IST

ಬೆಂಗಳೂರು: ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿ ಇಂಧನ ಇಲಾಖೆಯ 11,069 ಕೋಟಿ ರೂ.ಗಳ ವೆಚ್ಚವನ್ನು ತಡೆಗಟ್ಟಬಹುದಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಕೇವಲ ಊಹೆಯ ಆಧರಿಸಿ ನೀಡಿದ್ದಾಗಿದೆ. ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವ ಉದ್ದೇಶವನ್ನು ಹೊಂದಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿದೆ.

2019-20 ನೇ ಸಾಲಿನಲ್ಲಿ ರಾಜ್ಯದಲ್ಲಿ ಬಳಕೆ ಮಾಡಲಾಗದ ವಿದ್ಯುತ್ ಪ್ರಮಾಣ 55,377 ಎಂಯುಗಳಿಗೆ 11,069 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ ಎಂದು ಕೆಪಿಸಿಎಲ್ ತಿಳಿಸಿದೆ. ಇದರ ಆಧಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ನವೀಕರಿಸಬಹುದಾದ ಇಂಧನವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕಿರುವುದರಿಂದ ಗ್ರಿಡ್ ನಲ್ಲಿ ಬಳಸಲಾಗಿದ್ದು, ನಷ್ಟವಾಗುವ ಪ್ರಮೇಯವೇ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಸವಾಲಾಗಿದೆ. ಶೇ. 49ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳು ಅಸ್ತಿರವಾಗಿದೆ. ಇವುಗಳ ಲಭ್ಯತೆಯನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ದೀರ್ಘಾವಧಿ ಒಪ್ಪಂದ ಹಾಗೂ ಕೇಂದ್ರದ ವಿದ್ಯುದಸಗಾರಗಳಿಂದ ವಿದ್ಯುತ್ ಬೆಂಬಲ ಬಹಳ ಅಗತ್ಯವಿದೆ. ವಿದ್ಯುತ್ ಉತ್ಪಾದಕರೊಂದಿಗೆ ದೀರ್ಘಕಾಲದ ಅವಧಿಯ ಒಪ್ಪಂದವನ್ನು ಹೊಂದಿರುವುದರಿಂದ ಕನಿಷ್ಟ ತಾಂತ್ರಿಕ ವಿದ್ಯುತ್ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದ್ದು, ಬಳಕೆ ಮಾಡದಿರುವ ವಿದ್ಯುತ್ ಪ್ರಮಾಣಕ್ಕೂ ಸಹ ಸ್ಥಿರ ವೆಚ್ಚವನ್ನು ನೀಡಬೇಕಾಗಿದೆ ಎಂದು ಸಮಜಾಯಿಸಿ ನೀಡಿದೆ.

ಪ್ರಸ್ತುತ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್‌ ಲಭ್ಯವಿರುವುದನ್ನು ಪರಿಗಣಿಸಿ ಇನ್ನೂ ಹೆಚ್ಚಿನ ಪ್ರಮಾಣದ ವಿದ್ಯುತ್ ಸೇರ್ಪಡೆಯಾಗುವುದನ್ನು ತಡೆಯಲು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಿಗೆ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಹಾಗೂ ಮುಂದೆ ಬರಲಿರುವ ಯುಎಂಪಿಪಿ ಮತ್ತು ಮುಂತಾದ ಯೋಜನೆಗಳ ಒಪ್ಪಂದದಿಂದ ಹೊರಬರಲು ನಿರ್ಧರಿಸಿದೆ. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಿರುವುದರಿಂದ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಯಾವುದೇ ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸಿಲ್ಲ ಎಂದು ತಿಳಿಸಿದೆ.

ರಾಜ್ಯವು ಕೇಂದ್ರೀಯ, ಅಂತರರಾಜ್ಯ ವಿದ್ಯುತ್ ಉತ್ಪಾದನಾ ಘಟಕಗಳೊಂದಿಗೆ ಬಹಳ ಹಿಂದೆ ದೀರ್ಘಾವಧಿ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೂಲಗಳಿಂದ ರಾಜ್ಯದ ಆಧಾರ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಿ ವಿದ್ಯುತ್ ಜಾಲವನ್ನು ನಿಭಾಯಿಸಲು ಅನುಕೂಲವಾಗುತ್ತಿದೆ. ಈ ಒಪ್ಪಂದಗಳು ಬಹಳ ಹಿಂದೆಯೇ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ಘಟಕಗಳ ನಡುವೆ ಮಾಡಲಾಗಿದ್ದು, ಒಪ್ಪಂದಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಅಸಾಧುವಾಗಿದೆ ಎಂದು ವಿವರಣೆ ನೀಡಿದೆ.

ಕೇಂದ್ರೀಯ ಘಟಕಗಳ ವಿದ್ಯುತ್ತನ್ನು ಮತ್ತು ಪಿಜಿಸಿ ಐ ಎಲ್ ನ ಅಂತರಾಜ್ಯ ವಿದ್ಯುತ್ ಜಾಲವನ್ನು ಹಿಂದಿರುಗಿಸುವುದರಿಂದ ಸಿಇಆರ್ ಸಿ ವಿಧಿಸುವ ಹಿಂದಿರುಗಿಸುವ ನಿಯಮಾವಳಿ ಪ್ರಕಾರ ದರವು ಹೆಚ್ಚಾಗುತ್ತದೆ. ಸದ್ಯ ಕೇಂದ್ರ ವಿದ್ಯುತ್‌ ನ ಪ್ರತಿ ಯೂನಿಟ್ ದರ ಕಡಿಮೆ ಇದೆ. ಒಂದು ವೇಳೆ ಈಗ ಹಿಂದಿರುಗಿಸಿದರೆ ಮುಂದಿನ ವರ್ಷಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಲ್ಲಿ ರಾಜ್ಯಕ್ಕೆ ಮತ್ತೆ ಈ ವಿದ್ಯುತ್ ಲಭ್ಯವಾಗುವುದಿಲ್ಲ. ಇದಲ್ಲದೆ ಹೊಸ ಶಾಖೋತ್ಪನ್ನ ವಿದ್ಯುತ್ ಘಟಕಗಳ ಪ್ರತಿ ಯೂನಿಟ್ ದರವೂ ಹೆಚ್ಚಾಗಲಿದ್ದು, ಕೇಂದ್ರ ವಿದ್ಯುತ್ ಘಟಕಗಳ ದರಕ್ಕಿಂತ ಎರಡು ಪಟ್ಟಾಗಲಿದೆ. ಹಾಗಾಗಿ ವಿದ್ಯುತ್ ಹೊರೆಯ ಮುನ್ಸೂಚನೆ ಮತ್ತು ವಿದ್ಯುತ್ ಬಳಕೆಯ ಸಮಗ್ರ ಅಧ್ಯಯನದ ನಂತರವೇ ಕೇಂದ್ರೀಯ ಘಟಕಗಳ ವಿದ್ಯುತ್ತನ್ನು ಮತ್ತು ಪಿಜಿಸಿಐಎಲ್ ನ ಅಂತರಾಜ್ಯ ವಿದ್ಯುತ್ ಜಾಲವನ್ನು ಹಿಂದಿರುಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಪ್ರಸಕ್ತ ಸರ್ಕಾರದ ಅವಧಿಯಲ್ಲಿ 11 ಸಾವಿರ ಕೋಟಿಗಳ ಹಣವನ್ನು ನಷ್ಟ ಮಾಡಿಕೊಂಡಿರುವ ಬಗ್ಗೆ ನೀಡಿರುವ ಹೇಳಿಕೆಯು ತಪ್ಪಾಗಿದೆ. ಹೆಚ್ಚುವರಿ ಸ್ಥಾಪಿತ ಸಾಮರ್ಥ್ಯದ ಸೇರ್ಪಡೆಯನ್ನು ವಿಳಂಬಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಳಿಸಲು, ಬಳಕೆಯಾಗದ ವಿದ್ಯುತ್ತಿಗೆ ಪಾವತಿಸಬೇಕಾದ ಹಣವನ್ನು ಕಡಿಮೆಗೊಳಿಸಲು ಹಾಗೂ ಸುಸ್ಥಿರ ಮತ್ತು ವಿಶ್ವಾಸಾರ್ಹ ವಿದ್ಯುತ್ತನ್ನು ಎಲ್ಲಾ ಗ್ರಾಹಕರಿಗೆ ಪೂರೈಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.