ಬೆಂಗಳೂರು: ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತು ಪಾಲನೆಯಲ್ಲಿ ಪ್ರಥಮ ಸ್ಥಾನ ಮತ್ತು ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಕೇಂದ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದೆ.
ಉತ್ತಮ ಆಡಳಿತ ಸೂಚ್ಯಂಕದ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯಗಳ ಉತ್ತೇಜನಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮೊದಲ ವರ್ಷದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಸಮಗ್ರ ಆಡಳಿತ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನ, ಮಹಾರಾಷ್ಟ್ರ ಎರಡನೇ ಸ್ಥಾನ ಪಡೆದಿದ್ದು, ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ, ಇನ್ನು ಆರ್ಥಿಕ ಆಡಳಿತದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದುಕೊಂಡು ರಾಷ್ಟ್ರದ ಗಮನ ಸೆಳದಿದೆ.
ಯಾವ ಯಾವ ವಿಭಾಗದಲ್ಲಿ ಕರ್ನಾಟಕಕ್ಕೆ ಎಷ್ಟು ಸ್ಥಾನ:
ಆರ್ಥಿಕ ಆಡಳಿತ: ಮೊದಲ ಸ್ಥಾನ
ನ್ಯಾಯಾಂಗ ಸೇವೆ: ಏಳನೇ ಸ್ಥಾನ
ಪರಿಸರ ವಿಭಾಗ: ಏಳನೇ ಸ್ಥಾನ
ವಾಣಿಜ್ಯ ವಿಭಾಗ: ಒಂಭತ್ತನೇ ಸ್ಥಾನ
ಆರೋಗ್ಯ ಕ್ಷೇತ್ರ: ಒಂಭತ್ತನೇ ಸ್ಥಾನ
ಮೂಲಸೌಕರ್ಯ ಕ್ಷೇತ್ರ: ಹತ್ತನೇ ಸ್ಥಾನ
ಸಮಾಜ ಕಲ್ಯಾಣ: ಹತ್ತನೇ ಸ್ಥಾನ
ಕೃಷಿ ಕ್ಷೇತ್ರ: ಹನ್ನೆರಡನೇ ಸ್ಥಾನ
ಮಾನವ ಸಂಪನ್ಮೂಲ: ಹದಿಮೂರನೇ ಸ್ಥಾನ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಉನ್ನತಿಯತ್ತ ಸಾಗುತ್ತಿದೆ. ಆರ್ಥಿಕ ಶಿಸ್ತು ಪಾಲನೆಯಲ್ಲಿ ಪ್ರಥಮ ಸ್ಥಾನ ಮತ್ತು ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನ ಪಡೆದಿದೆ ನಮ್ಮ ರಾಜ್ಯ.'ಉತ್ತಮ ಆಡಳಿತ ಸೂಚ್ಯಂಕ' (ಜಿಜಿಐ)ವು ನಮಗೆ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡಲು ಸ್ಫೂರ್ತಿ ಒದಗಿಸಲಿದೆ ಎಂದು ಟ್ವೀಟ್ ಮಾಡಿದೆ.