ಬೆಂಗಳೂರು: ಅಳ್ನಾವರ -ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರ ಪ್ರಾರಂಭಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪತ್ರ ಬರೆದಿದ್ದಾರೆ.
![banglore](https://etvbharatimages.akamaized.net/etvbharat/prod-images/kn-bng-02-rvd-letter-to-central-script-9020923_21102019123258_2110f_1571641378_673.jpg)
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿರುವ ದೇಶಪಾಂಡೆ ಅವರು, ಈ ಭಾಗದ ರೈಲು ಮಾರ್ಗವನ್ನು ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಯಶಸ್ವಿ ಸಂಚಾರಿ ಪರೀಕ್ಷೆ ನಡೆದಿದೆ. ಬೆಳಗಾವಿಯಿಂದ ದಾಂಡೇಲಿಗೆ ನೇರ ಸಂಪರ್ಕಕ್ಕೆ ಕ್ರಮ ಕೈಗೊಳ್ಳಿ, ಹುಬ್ಬಳ್ಳಿ-ಧಾರವಾಡದಿಂದ ನೇರ ಸಂಪರ್ಕ ಒದಗಿಸಿ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಗಲಿದೆ ಎಂದು ಪತ್ರದಲ್ಲಿ ದೇಶಪಾಂಡೆ ವಿವರಿಸಿದ್ದಾರೆ.
ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ರೈಲು ಸಂಚಾರ ಆರಂಭಿಸಿ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.