ETV Bharat / state

ಬೆಂಗಳೂರಿಗೆ ಬಂತು 120 ಟನ್​ ಆಕ್ಸಿಜನ್​ ಹೊತ್ತ ವಿಶೇಷ ರೈಲು - ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂದ 120 ಟನ್​ ಆಕ್ಸಿಜನ್​ ಹೊತ್ತ ವಿಶೇಷ ರೈಲು

ಇಂದು ಬೆಳಗ್ಗೆ 9:30ರ ಸುಮಾರಿಗೆ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಕ್ಸಿಜನ್ ಹೊತ್ತ ವಿಶೇಷ ರೈಲು ಬಂದು ತಲುಪಿದೆ.

ಬೆಂಗಳೂರಿಗೆ ಬಂದ 120 ಟನ್​ ಆಕ್ಸಿಜನ್​ ಹೊತ್ತ ವಿಶೇಷ ರೈಲು

author img

By

Published : May 11, 2021, 10:48 AM IST

Updated : May 11, 2021, 11:58 AM IST

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿದ್ದು, ಅನೇಕ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿವೆ. ಸದ್ಯ ಇದೇ ಮೊದಲ ಬಾರಿಗೆ ವಿಶೇಷ ರೈಲಿನ ಮೂಲಕ ಆಕ್ಸಿಜನ್ ಬಂದಿದೆ. ಜೆಮ್​​ಶೆಡ್​​ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‌ಗಳು ಬಂದು ತಲುಪಿವೆ. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಬಂದು ತಲುಪಿವೆ.

ಬೆಂಗಳೂರಿಗೆ ಬಂತು 120 ಟನ್​ ಆಕ್ಸಿಜನ್​ ಹೊತ್ತ ವಿಶೇಷ ರೈಲು

ಆರು ಕ್ರಯೋಜೆನಿಕ್ ಟ್ಯಾಂಕ್​ಗಳಲ್ಲಿ 120 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಹೊತ್ತ ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 9.30ಕ್ಕೆ ಸೌತ್ ವೆಸ್ಟ್ ವೈಟ್‌ ಫೀಲ್ಡ್‌ನಲ್ಲಿರುವ ಒಳನಾಡಿನ ಕಂಟೇನರ್ ಡಿಪೋ ಟರ್ಮಿನಲ್ ತಲುಪಿತು. ರೈಲು ಸೋಮವಾರ ಮುಂಜಾನೆ 3.30ಕ್ಕೆ ಜೆಮ್​​ಶೆಡ್​​ಪುರದ ತತಾನಗರ ನಿಲ್ದಾಣದಿಂದ ಹೊರಟಿತ್ತು. ಸುಮಾರು 29 ಗಂಟೆಗಳ ಕಾಲ ಪ್ರಾಯಾಣ ಮಾಡಿ ಬೆಂಗಳೂರು ತಲುಪಿದೆ. ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.

ಈ ಆರು ಆಕ್ಸಿಜನ್ ಕ್ರಯೋಜೆನಿಕ್ ಟ್ಯಾಂಕರ್​ಗಳನ್ನು ಲಿಂಡೆ ಕಂಪನಿಯವರು ಕರ್ನಾಟಕ ರಾಜ್ಯದ ಸರ್ಕಾರದ ಜೊತೆ ಸೇರಿ ರಾಜ್ಯದಲ್ಲಿ ಎಲ್ಲಿ ಆಕ್ಸಿಜನ್ ಅಭಾವ ಇದಿಯೋ ಅಲ್ಲಿ ತಲುಪಿಸುತ್ತಾರೆ. ಈ ಟ್ಯಾಂಕರ್​ಗಳನ್ನ ಖಾಲಿ ಮಾಡಿ ಮತ್ತೆ ವಾಪಸ್ ಕಳುಹಿಸಲಾಗುತ್ತೆ. ಅಲ್ಲಿ ಮತ್ತೆ 6 ಕಂಟೇನರ್​ಗಳು ಆಕ್ಸಿಜನ್ ತುಂಬಿಕೊಂಡು ಬರಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ 15,913 ಜನರಿಗೆ ಕೊರೊನಾ ದೃಢ: ಹೊಸ ಸೋಂಕು ಪ್ರಕರಣಗಳು ಇಳಿಕೆ

Last Updated : May 11, 2021, 11:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.