ಬೆಂಗಳೂರು: ರಾಜಸ್ಥಾನದ ಜೋಧ್‌ಪುರಕ್ಕೆ ವಿಶೇಷ ಶ್ರಮಿಕ್ ರೈಲು ಇಂದು ಮಧ್ಯಾಹ್ನ 2 ಗಂಟೆಗೆ ಹೊರಡಲಿದೆ. ಲಾಕ್ಡೌನ್ ಇನ್ನೂ ಮುಂದುವರೆಯೋ ಸಾಧ್ಯತೆ ಇರುವುದರಿಂದ ಬಹುತೇಕ ಮಂದಿ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ.
ರೈಲು ಹತ್ತುವ ಮುನ್ನ ಪ್ರಯಾಣಿಕರು ಅರಮನೆ ಮೈದಾನದ ಬಳಿ ಸೇರಬೇಕು. ಅಲ್ಲಿ ಪೊಲೀಸರು, ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ನಂತರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಡ್ತಾರೆ. ಹೀಗಾಗಿ ಸದ್ಯ ಅರಮನೆ ಮೈದಾನದ ಬಳಿ ಸಾವಿರಾರು ಪ್ರಯಾಣಿಕರು ಜಮಾಯಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಚಿಕ್ಕಬಾಣಾವಾರ ರೈಲು ನಿಲ್ದಾಣದಿಂದ ಈ ರೈಲು ಹೊರಡಲಿದೆ.
ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡವರು ಹಾಗೂ ನೋಂದಣಿ ಮಾಡದೇ ಹಾಗೆಯೇ ಆಗಮಿಸಿದ ಬಟ್ಟೆ, ಟೈಲ್ಸ್, ಮಾರ್ಬಲ್, ಚಿನ್ನದ ಅಂಗಡಿ, ಹಾರ್ಡ್ವೇರ್ ಶಾಪ್ ನಡೆಸುತ್ತಿದ್ದ ಬಹುತೇಕ ವ್ಯಾಪಾರಿಗಳು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ.
ಸದ್ಯ ಕೋವಿಡ್ 19 ಇರುವ ಹಿನ್ನೆಲೆ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಯಾವುದೇ ತೊಂದರೆಯಾಗದ ರೀತಿಯಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಒಡಗಿಸಲಾಗಿದೆ.