ETV Bharat / state

ಮತ್ತೆ ಬಣ ರಾಜಕೀಯಕ್ಕೆ ವೇದಿಕೆಯಾಗುತ್ತಾ ಯಡಿಯೂರಪ್ಪ- ಈಶ್ವರಪ್ಪ ನಡುವಿನ ಆಂತರಿಕ ಕಲಹ?

ಬಿಜೆಪಿಯಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನ ಪದೇ ಪದೇ ವ್ಯಕ್ತವಾಗಿದೆ. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸ್ಫೋಟಗೊಳ್ಳುತ್ತಲೇ ಇರುತ್ತದೆ. ಅದರ ಜೊತೆ ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬರುತ್ತಿದೆ. ಈಗ ಸಚಿವ ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ಬಿಜೆಪಿಯಲ್ಲಿ ಮತ್ತೊಮ್ಮೆ ಬಣ ರಾಜಕೀಯಕ್ಕೆ ಕಾರಣವಾಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.

Special story about BSY and Esshwarappa inner fight
ಯಡಿಯೂರಪ್ಪ ಈಶ್ವರಪ್ಪ ನಡುವಿನ ಆಂತರಿಕ ಕಲಹ
author img

By

Published : Apr 1, 2021, 7:58 PM IST

ಬೆಂಗಳೂರು: ನಾಯಕತ್ವ ಬದಲಾವಣೆ ಕೂಗು, ಬಣ ರಾಜಕೀಯ ತಣ್ಣಗಾಗಿದೆ ಎನ್ನುವುದರ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಬಣ ರಾಜಕೀಯಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಈಶ್ವರಪ್ಪ ನಡುವಿನ ಮುಸುಕಿನ‌ ಗುದ್ದಾಟ ಪಕ್ಷ ಹಾಗು ಸರ್ಕಾರದ ಮೇಲೆ ನೇರ ಪರಿಣಾಮ ಬೀರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೌದು, ರಾಜ್ಯ ಬಿಜೆಪಿ ಪಾಳಯದಲ್ಲಿ ಮತ್ತೊಮ್ಮೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರ ವಿರುದ್ಧ ಸಚಿವರೊಬ್ಬರು ರಾಜಭವನದ ಕದ ತಟ್ಟಿದ್ದಾರೆ. ಆ ಮೂಲಕ ಬಹಿರಂಗವಾಗಿ ಸಂಪುಟದ ಮುಖ್ಯಸ್ಥರ ನಿರ್ಧಾರವನ್ನು ಸಂಪುಟದ ಸದಸ್ಯರೇ ನೇರವಾಗಿ ಪ್ರಶ್ನಿಸಿದ್ದಾರೆ. ಇದರಿಂದ ಸಂಪುಟ ಸದಸ್ಯರಿಗೆ ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲ ಅಥವಾ ಮುಖ್ಯಮಂತ್ರಿಗೆ ಸಂಪುಟ ಸದಸ್ಯರ ಮೇಲೆ ವಿಶ್ವಾಸವಿಲ್ಲ ಎನ್ನುವ ಎರಡು ಕಾರಣಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನ ಪದೇ ಪದೇ ವ್ಯಕ್ತವಾಗಿದೆ. ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸ್ಫೋಟಗೊಳ್ಳುತ್ತಲೇ ಇರುತ್ತದೆ. ಅದರ ಜೊತೆ ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬರುತ್ತಿದೆ. ಹೋಟೆಲ್​ಗಳಲ್ಲಿ ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಾರೆ. ಪ್ರಭಾವಿ ರಾಜಕಾರಣಿಗಳ ನಿವಾಸದಲ್ಲಿ ಭೋಜನ ಕೂಟದ ನೆಪದಲ್ಲಿ ಸಭೆ ಸೇರುತ್ತಾರೆ. ಅಧಿವೇಶನ ನಡೆಯುವ ಸಮಯದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಸದ್ದು ಮಾಡಿದ್ದು ಗುಟ್ಟಾಗೇನು ಉಳಿದಿಲ್ಲ. ಆದರೆ ಈಗ ಅದೆಲ್ಲವೂ ಸ್ತಬ್ಧವಾಗಿದೆ. ಕೆಲ ಪ್ರಭಾವಿ ನಾಯಕರು ಸಂಪುಟ ಸೇರಿದ ನಂತರ ಪ್ರತ್ಯೇಕ ಸಭೆಯಂತಹ‌‌ ಚಟುವಟಿಕೆಗೆ ಬ್ರೇಕ್ ಬಿದ್ದಿದೆ.

ಯತ್ನಾಳ್​​ ಕಿಡಿ:

ನಾಯಕತ್ವ ಬದಲಾವಣೆ ಕೂಗನ್ನು ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಮುಂದುವರೆಸಿದ್ದಾರೆ. ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದಾರೆ. ಶೋಕಾಸ್ ನೋಟಿಸ್ ಕೊಟ್ಟರೂ ನಾಯಕತ್ವ ಬದಲಾವಣೆ ಮಾತನ್ನು ಮಾತ್ರ ನಿಲ್ಲಿಸಿಲ್ಲ, ‌ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪವನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ.

ಇದೀಗ‌ ಇವರ ಸಾಲಿಗೆ ಸಚಿವ ಈಶ್ವರಪ್ಪ ಸೇರಿದ್ದಾರೆ. ನೇರವಾಗಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ, ಹೈಕಮಾಂಡ್ ಗೆ ದೂರು ನೀಡುವ ಮೂಲಕ ಆಂತರಿಕ ಕಲಹದ ಬೀಜವನ್ನು ಬಿತ್ತಿದ್ದಾರೆ. ಸಿಎಂ ಜೊತೆ ಮಾತುಕತೆ ನಡೆಸುವ ಎಲ್ಲ ಅವಕಾಶಗಳನ್ನೂ ಬದಿಗೆ ಸರಿಸಿ ಏಕಾಏಕಿ ದೂರು ನೀಡಿದ್ದರ ಹಿಂದೆ ಕಾಣದ ಕೈಗಳ ಬೆಂಬಲ ಇರಲೇಬೇಕು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಯಡಿಯೂರಪ್ಪ ಈಶ್ವರಪ್ಪ ನಡುವಿನ ಆಂತರಿಕ ಕಲಹ

ಸದ್ಯ ಈಶ್ವರಪ್ಪ ಪತ್ರ ಬಿಜೆಪಿ ಪಾಳಯದಲ್ಲಿ ಮತ್ತು ಸರ್ಕಾರದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಯಡಿಯೂರಪ್ಪ ಪರ ಆಪ್ತ ಸಚಿವರು, ಶಾಸಕರು ವಕಾಲತ್ತು ವಹಿಸಿದ್ದು, ಇಂದು ಬಹಿರಂಗವಾಗಿಯೇ ಈಶ್ವರಪ್ಪ ವಿರುದ್ಧ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ನಾಯಕತ್ವಕ್ಕೆ ಬಹುಪರಾಕ್ ಹಾಕಿದ್ದಾರೆ. ಸಿಎಂ ಹಸ್ತಕ್ಷೇಪದ ದೂರಿನ ನಂತರ ಮುಂದಾಗಬಹುದಾದ ಮುಂದಾಲೋಚನೆಯಿಂದಾಗಿಯೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಉಳಿದ ಅವಧಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲಾಗುತ್ತದೆ ಎಂದು ಆಪ್ತರ ಮೂಲಕ‌ ಸಿಎಂ ಹೇಳಿಸಿ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ರಾಯಣ್ಣ ಬ್ರಿಗೇಡ್ ಸಂಘಟನೆಯಿಂದ ಪಕ್ಷಕ್ಕಾದ ಹಿನ್ನೆಡೆಯನ್ನು ಆಪ್ತರ ಮೂಲಕ ಹೇಳಿಸಿ ಹೈಕಮಾಂಡ್ ಗಮನ ಸೆಳೆಯುವ ತಂತ್ರ ಮಾಡಿದ್ದಾರೆ.

ಇದಕ್ಕೆ ಈಶ್ವರಪ್ಪ ಪ್ರತಿಕ್ರಿಯೆ ಯಾವ ರೀತಿ ಇರಲಿದೆ ಎನ್ನುವುದರ ಆಧಾರದಲ್ಲಿ ಸರ್ಕಾರ ಹಾಗೂ ಪಕ್ಷದ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ನಿರ್ಧಾರವಾಗಲಿದೆ. ಪಕ್ಷದ ಆಂತರಿಕ ವಿಷಯ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದರೂ ಅವರ ಮುಂದಿನ ನಡೆ ಕುತೂಹಲಕಾರಿಯಾಗಿದೆ.

ಈ ಹಿಂದೆಯೂ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಧ್ವನಿ ಎತ್ತಿದ್ದರು. ಕೆಜೆಪಿ ಕಟ್ಟಿದಾಗ ಟೀಕೆಗಳನ್ನು ಮಾಡಿದ್ದರು, ಬಹಿರಂಗ ವಾಗ್ದಾಳಿಯನ್ನೂ ನಡೆಸಿದ್ದರು. ಇದೀಗ ಮತ್ತೆ ಯಡಿಯೂರಪ್ಪ ವಿರುದ್ಧ ದನಿ ಎತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಮಟ್ಟದ ನಾಯಕರೊಬ್ಬರ ಬೆಂಬಲ ಇದೆ ಎನ್ನಲಾಗ್ತಿದೆ. ರಾಷ್ಟ್ರೀಯ ಮಟ್ಟದ ನಾಯಕರೊಬ್ಬರು ರಾಜ್ಯ ಮಟ್ಟದ ನಾಯಕರೊಬ್ಬರ ಮೂಲಕ ಈಶ್ವರಪ್ಪಗೆ ಸಾಥ್​ ನೀಡಿದ್ದಾರೆ. ಹಾಗಾಗಿ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡುವ ಸಾಹಸ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಒಂದೇ ಜಿಲ್ಲೆಯವರಾದರೂ ಭಿನ್ನ ದೃಷ್ಟಿಕೋನ:

ಇಬ್ಬರೂ ಒಂದೇ ಜಿಲ್ಲೆಯ ನಾಯಕರಾಗಿದ್ದು, ಒಟ್ಟಿಗೆ ಪಕ್ಷ ಸಂಘಟನೆ ಮಾಡಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಆಪ್ತ ಬಳಗದಿಂದ ಈಶ್ವರಪ್ಪ ದೂರವಾಗಿದ್ದಾರೆ. ಹಾಗಾಗಿಯೇ ಪಕ್ಷದಲ್ಲಿ ಬಣ ರಾಜಕೀಯ ಕಾಣಿಸಿಕೊಂಡಾಗಲೆಲ್ಲಾ ಬಿಎಸ್​ವೈ ವಿರೋಧಿ ಬಣದಲ್ಲಿಯೇ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ಪಕ್ಷದಲ್ಲಿ ಬಣ ರಾಜಕೀಯ ಆರಂಭಗೊಂಡರೂ ಅಚ್ಚರಿ ಇಲ್ಲ.

ಪಕ್ಷದ ಹೈಕಮಾಂಡ್ ಪರಿಸ್ಥಿತಿಯನ್ನು ತಿಳಿಗೊಳಿಸಿದರೆ ಎಲ್ಲ ಸರಿಯಾಗಲಿದೆ. ಇಲ್ಲದೇ ಇದ್ದಲ್ಲಿ ಮತ್ತೆ ರಾಜ್ಯದಲ್ಲಿ ಬಣ ರಾಜಕೀಯ ಆರಂಭಗೊಳ್ಳಲಿದೆ. ಸಂಪುಟದಲ್ಲಿಯೂ‌ ಎರಡು ಬಣಗಳಾಗಿ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಪಕ್ಷದಲ್ಲಿಯೂ ಬಣ ರಾಜಕೀಯ ಆರಂಭಗೊಳ್ಳಲಿದ್ದು, ಇದರಿಂದ ಸಂಘಟನಾತ್ಮಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಸದ್ಯ ಪಂಚ ರಾಜ್ಯ ಚುನಾವಣೆ ಮತ್ತು ರಾಜ್ಯದಲ್ಲಿ ಮೂರು ಕ್ಷೇತ್ರದ ಉಪ‌ ಚುನಾವಣೆ ನಡೆಯುತ್ತಿದ್ದು, ಚುನಾವಣೆ ನಂತರ ಯಡಿಯೂರಪ್ಪ ಈಶ್ವರಪ್ಪ ನಡುವಿನ ಆಂತರಿಕ ಕಲಹಕ್ಕೆ ತೆರೆ ಎಳೆಯಲು ಹೈಕಮಾಂಡ್ ಮುಂದಾಗಲಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.