ETV Bharat / state

ಬ್ಯಾಂಕಿಂಗ್ ಉದ್ಯಮದ ಪ್ರಾಮಾಣಿಕತೆ ಖಾತ್ರಿಗೆ ಸಿಬಿಐ ತನಿಖೆ ಅಗತ್ಯ: ಹೈಕೋರ್ಟ್​ಗೆ ಯೂನಿಯನ್ ಬ್ಯಾಂಕ್ ಮನವಿ - Union Bank appeal to the High Court - UNION BANK APPEAL TO THE HIGH COURT

ವಾಲ್ಮೀಕಿ ನಿಗಮ ಹಗರಣದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್​ಗೆ ಮನವಿ ಮಾಡಿದೆ.

high-court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Sep 24, 2024, 6:34 PM IST

ಬೆಂಗಳೂರು : ದೇಶದ ಬ್ಯಾಂಕಿಂಗ್ ವಲಯದ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಲು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್‌ಗೆ ಮನವಿ ಮಾಡಿದೆ.

ವಾಲ್ಮೀಕಿ ನಿಗಮದಲ್ಲಿನ ಹಣಕಾಸು ಹಗರಣ ಆರೋಪ ಸಂಬಂಧದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶನ ನೀಡುವಂತೆ ಕೋರಿ ಯೂನಿಯನ್ ಬ್ಯಾಂಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ಪೀಠಕ್ಕೆ ಬ್ಯಾಂಕ್ ಪರ ವಕೀಲರು ವಿವರಿಸಿದರು.

ಬ್ಯಾಂಕ್ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ವೆಂಕಟರಮಣಿ, ಡೆಲ್ಲಿ ಸ್ಪೆಷಲ್ ಪೊಲೀಸ್ ಆಕ್ಟ್ ಉಲ್ಲೇಖಿಸಿ, ಬ್ಯಾಂಕಿಂಗ್ ಉದ್ಯಮ ದೇಶದ ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸಿದೆ. ವಿತ್ತೀಯ ಶಿಸ್ತುಗಳು ಭಾರಿ ದೊಡ್ಡ ಪರಿಣಾಮಗಳನ್ನು ಬೀರುತ್ತವೆ. ಬ್ಯಾಂಕುಗಳು ಇದೀಗ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾಸ್ಟರ್ ಸುತ್ತೋಲೆ ಹೊರಡಿಸಿದ RBI: ಆರ್‌ಬಿಐ ಬ್ಯಾಂಕುಗಳ ಪ್ರಾಮಾಣಿಕತೆ ಖಾತ್ರಿಪಡಿಸಲು ಮಾಸ್ಟರ್ ಸುತ್ತೋಲೆ ಹೊರಡಿಸಿದೆ. ಅದರಂತೆ ಬ್ಯಾಂಕುಗಳ ವಹಿವಾಟಿನ ಯಾವುದೇ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಂಸ್ಥೆ ಅಗತ್ಯವಿದೆ ಎಂದು ತಿಳಿಸಿದೆ. ಅದರಂತೆ ವಾಲ್ಮೀಕಿ ಹಗರಣವನ್ನೂ ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ ಎಂದು ಪ್ರತಿಪಾದಿಸಿದರು.

ಬ್ಯಾಂಕ್ ಈಗಾಗಲೇ ತನಿಖೆ ಕೋರಿ ಸಿಬಿಐಗೆ ಪತ್ರ ಬರೆದಿದೆ. ಹಾಗಾಗಿ ವಾಸ್ತವವಾಗಿ ದೂರು ದಾಖಲಾಗಿದೆ. ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಂತಾಗಿದೆ. ಒಟ್ಟಾರೆ ಬ್ಯಾಂಕುಗಳ ಹಿತದೃಷ್ಟಿಯಿಂದ ಕೋಟ್ಯಂತರ ರು. ದುರುಪಯೋಗವಾಗಿರುವ ಇದರ ತನಿಖೆಯನ್ನು ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ವಹಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು.

ಆಕ್ಷೇಪ ಎತ್ತಿದ ಬಿ ಬಿ ಆಚಾರ್ಯ: ಅದಕ್ಕೆ ಆಕ್ಷೇಪ ಎತ್ತಿದ ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ನ್ಯಾಯವಾದಿ ಬಿ. ವಿ ಆಚಾರ್ಯ, ಪ್ರಸ್ತುತದ ಪ್ರಕರಣ ಸಂಬಂಧ ಬ್ಯಾಂಕ್ ಸಲ್ಲಿಸಿರುವ ಅರ್ಜಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯಾಜ್ಯವಾಗಿದ್ದು, ಅರ್ಜಿಯ ಸಿಂಧುತ್ವದ ಬಗ್ಗೆ ಪ್ರಾಥಮಿಕ ಪ್ರಶ್ನೆ ಇದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠ, ಸರ್ಕಾರದ ವಾದವನ್ನು ಒಪ್ಪುವುದಿಲ್ಲ, ಇದು ಖಂಡಿತಾ ರಾಜ್ಯ ಮತ್ತು ಕೇಂದ್ರದ ನಡುವಿನ ವ್ಯಾಜ್ಯವಲ್ಲ ಎಂದು ಮೌಖಿಕವಾಗಿ ಹೇಳಿತು. ಅದಕ್ಕೆ ಉತ್ತರಿಸಿದ ಆಚಾರ್ಯ, ಈ ಅರ್ಜಿಯ ಮೂಲಕವೇ ಕೇಂದ್ರ ಸರ್ಕಾರ ಹೊರಡಿಸಿರುವ ಒಂದು ಸುತ್ತೋಲೆ, ಅಂತಹ ಸುತ್ತೋಲೆಗಳ ಮೂಲಕ ರಾಜ್ಯ ಸರ್ಕಾರ ಮತ್ತು ಪೊಲೀಸರ ನಡುವಿನ ಅಧಿಕಾರದಲ್ಲಿ ಮಧ್ಯಪ್ರವೇಶ ಮಾಡಲು ಯತ್ನಿಸಲಾಗುತ್ತಿದೆ ಎಂದರು.

ಅದಕ್ಕೆ ನ್ಯಾಯಾಲಯ, ಈ ಪ್ರಶ್ನೆಗೆ ನಾನು ಮೆರಿಟ್ ಮೇಲೆ ಉತ್ತರಿಸಲು ಬಯಸುತ್ತೇನೆ ಎಂದು ಹೇಳಿತು. ಆಗ ಬಿ. ವಿ ಆಚಾರ್ಯ ಅವರು, ವೆಸ್ಟ್ ಬೆಂಗಾಳ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದರು. ಅದಕ್ಕೆ ಪೀಠ, ಸುಪ್ರೀಂಕೋರ್ಟ್ ವ್ಯಾಜ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಇದೆ ಎಂದು ಹೇಳಿದೆಯೇ? ಎಂದು ಕೇಳಿತು. ಅದಕ್ಕೆ ಆಚಾರ್ಯ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ವ್ಯಾಜ್ಯಗಳು ಏರ್ಪಟ್ಟರೆ ಆಗ ಎಲ್ಲಾ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ ಮೊಟಕಾಗಲಿದೆ ಎಂದರು.

ಅದಕ್ಕೆ ಹೈಕೋರ್ಟ್, ಹಾಗಿದ್ದರೆ ಅದಕ್ಕೆ ಉತ್ತರ ಕಂಡು ಕೊಳ್ಳಬೇಕಾಗಿದೆ. ನಾನು ಮೊದಲಿಗೆ ಅರ್ಜಿಯ ಸಿಂಧುತ್ವದ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿತು.

ಇದನ್ನೂ ಓದಿ : ಮುಡಾ, ವಾಲ್ಮೀಕಿ ಹಗರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್​ಗೆ ಅರ್ಜಿ - MUDA Valmiki Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.