ETV Bharat / state

ಇಂದು ಸಂಜೆಯೊಳಗೆ ಸ್ಪಂದನಾ ವಿಜಯ್​ ಪಾರ್ಥಿವ ಶರೀರ ಬೆಂಗಳೂರಿಗೆ : ಶ್ರೀಮುರಳಿ ಆಪ್ತರ ಮಾಹಿತಿ - ಈಟಿವಿ ಭಾರತ ಕನ್ನಡ

ಇಂದು ಸಂಜೆಯೊಳಗೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಬರಲಿದೆ ಎಂದು ನಟ ಮುರಳಿ ಆಪ್ತರು ತಿಳಿಸಿದ್ದಾರೆ.

spandana
ಸ್ಪಂದನಾ ವಿಜಯ್
author img

By

Published : Aug 8, 2023, 11:58 AM IST

Updated : Aug 8, 2023, 3:48 PM IST

ಚಂದನವನದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಸ್ಪಂದನಾ ಅವರು ಸಂಬಂಧಿಕರೊಂದಿಗೆ ಬ್ಯಾಂಕಾಕ್​ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಿನ್ನೆ (ಆಗಸ್ಟ್​ 7) ಮುಂಜಾನೆ ಈ ವಿಚಾರ ಗೊತ್ತಾಗಿದೆ. ಸ್ಪಂದನಾ ಅವರ ಸಾವು ವಿಜಯ್​ ಬದುಕಿನಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. ಸದ್ಯ ಸ್ಪಂದನಾ ಅವರ ಮೃತದೇಹವನ್ನು ಬೆಂಗಳೂರಿಗೆ ತರಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ವಿಜಯ ರಾಘವೇಂದ್ರ ಸಹೋದರ, ನಟ ಶ್ರೀಮುರಳಿ ಆಪ್ತರು ಹೇಳುವಂತೆ, ಬ್ಯಾಂಕಾಕ್​ನಲ್ಲಿ ಈಗಾಗಲೇ ಸ್ಪಂದನಾ ಮರಣೋತ್ತರ ಪರೀಕ್ಷೆಗಳೆಲ್ಲಾ ಮುಗಿದಿದೆ. ವಿಜಯ್​ ರಾಘವೇಂದ್ರ ಅವರು ಬ್ಯಾಂಕಾಕ್​ನಲ್ಲಿದ್ದಾರೆ. ಇಂದು ಸಂಜೆಯೊಳಗೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಬರಲಿದೆ. ನಂತರ ಮಲ್ಲೇಶ್ವರಂನಲ್ಲಿನ ಸ್ಪಂದನಾ ಅವರ ತವರು ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯ ರಾಘವೇಂದ್ರ ಬಂದ ನಂತರ ಸ್ಪಂದನಾ ಅವರ ಅಂತ್ಯ ಸಂಸ್ಕಾರ ಈಡಿಗ ಸಂಪ್ರದಾಯದಂತೆ, ವಿಜಯ್​ ಮಾವ ತಮ್ಮ ಕನಕಪುರದ ಫಾರಂಹೌಸ್​ನಲ್ಲಿ ಮಾಡಬಹುದಾ? ಅಥವಾ ಸ್ಪಂದನಾ ಹುಟ್ಟೂರು ಬೆಳ್ತಂಗಡಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಾರಾ? ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟು ಬೇಗ ಅಲ್ಲಿಗೆ ಹೋಗುವ ಆತುರವೇನಿತ್ತು?.. ಸ್ಪಂದನಾ ಬಗ್ಗೆ ರೇಖಾರಾಣಿ ಭಾವುಕ

ಇದರ ಜೊತೆಗೆ ಬ್ಯಾಂಕಾಕ್​ನಲ್ಲಿ ಸ್ಪಂದನಾ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್ ಪ್ರಕಾರ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಂಜೆಯೊಳಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದ ಬಳಿಕ ಬಳಿಕ ಪತಿ ವಿಜಯ್​ ರಾಘವೇಂದ್ರ ಮತ್ತು ಕುಟುಂಬಸ್ಥರೊಂದಿಗೆ ಚರ್ಚಿಸಿ ಅಂತ್ಯ ಸಂಸ್ಕಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಅವರು ಸ್ಪಂದನಾ ನಿಧನದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, "ಚಿತ್ರರಂಗ ಕುಟುಂಬ ಇದ್ದ ಹಾಗೆ. ನಾಯಕ ನಟ, ನಟಿಯರು ಪ್ರೇಕ್ಷಕರನ್ನು ಮನರಂಜಿಸಿದಷ್ಟೇ ಅವರ ಕುಟುಂಬದಲ್ಲೂ ಉಲ್ಲಾಸ ಇರುತ್ತೆ. ವಿಜಯ ರಾಘವೇಂದ್ರ ಸದ್ಯ ನೋವಲ್ಲಿದ್ದಾರೆ. ಅವರ ನೋವನ್ನು ದೂರ ಮಾಡಿ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಅವರ ಕುಟುಂಬಕ್ಕೆ ದೇವರು ಶಕ್ತಿ ತುಂಬಲಿ" ಎಂದರು. ಬಳಿಕ ನಿರ್ಮಾಪಕ ಎಂ ಎನ್ ಸುರೇಶ್ ಮಾತನಾಡಿ, "ಸದ್ಯ ವಿಜಯ್ ರಾಘವೇಂದ್ರ ಕುಟುಂಬದವರು ನೋವಿನಲ್ಲಿ ಇದ್ದಾರೆ. ದೇವರು ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಕೊಡಲಿ" ಎಂದು ಹೇಳಿದರು.

ಇನ್ನು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್​ಸಿ ಬಿ ಕೆ ಹರಿಪ್ರಸಾದ್​ ನಿನ್ನೆ ಮಾಧ್ಯಮದೊಂದಿಗೆ ಮಾತನಾಡಿ, "ಸ್ಪಂದನಾ ಪಾರ್ಥಿವ ಶರೀರ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಿಮ ವಿಧಿ ವಿಧಾನಗಳು ನಡೆಯಲಿವೆ" ಎಂದು ತಿಳಿಸಿದ್ದರು.

ವಿಜಯ್​ ರಾಘವೇಂದ್ರ ಹಾಗೂ ಸ್ಪಂದನಾ ಅವರು ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್​ಗಳಲ್ಲೊಬ್ಬರಾಗಿದ್ದರು. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಮಗಳು. ವಿಜಯ್​ ರಾಘವೇಂದ್ರ ಹಾಗೂ ಸ್ಪಂದನಾ ಇಬ್ಬರೂ ಪರಸ್ಪರ ಪ್ರೀತಿಸಿ 2007ರಲ್ಲಿ ಹಿರಿಯರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಸ್ಪಂದನಾ ಅವರು ಕ್ರೇಜಿಸ್ಟಾರ್​​ ರವಿಚಂದ್ರನ್ ಅಭಿನಯದ 'ಅಪೂರ್ವ' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: 'ಸ್ಪಂದನಾ ಇಲ್ಲದೇ ವಿಜಯ್​ ಬದುಕಲ್ಲ ಎಂದಿದ್ದು ಕೇಳಿ ಕರುಳು ಹಿಂಡಿದಂತಾಯಿತು': ಹಿರಿಯ ನಟಿ ಜಯಮಾಲಾ ಭಾವುಕ

Last Updated : Aug 8, 2023, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.