ETV Bharat / state

ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದ ಆರು ಮಂದಿ ವಿದ್ಯಾರ್ಥಿಯರು

author img

By

Published : Mar 6, 2023, 6:59 PM IST

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಸೈನಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಜ್ಯದ ಆರು ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ಸೈನಿಕ ಶಾಲೆಯಲ್ಲಿ ತರಭೇತಿ
ರಾಷ್ಟ್ರೀಯ ಸೈನಿಕ ಶಾಲೆಯಲ್ಲಿ ತರಭೇತಿ

ರಾಷ್ಟ್ರೀಯ ಸೈನಿಕ ಶಾಲೆ ಇನ್​​ಚಾರ್ಜ್​ ಟಿ ಎಸ್​ ಸುರೇಶ್​ ಮಾತನಾಡಿದರು

ಬೆಂಗಳೂರು : ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿ ಮಹಿಳೆಯರು ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಇದಕ್ಕೆ ರಕ್ಷಣಾ ಇಲಾಖೆ ಸಹ ಹೊರತಾಗಿಲ್ಲ. ಭವಿಷ್ಯದಲ್ಲಿ ಆರ್ಮಿ, ನೌಕೆ ಹಾಗೂ ವಾಯುನೆಲೆಗಳಲ್ಲಿ ಹೆಣ್ಣು‌‌ ಮಕ್ಕಳನ್ನು ಹೆಚ್ಚಿಸುವ ದೃಷ್ಠಿಯಿಂದ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಸೈನಿಕ‌ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಹೆಣ್ಣು‌ ಮಕ್ಕಳಿಗೂ ಅವಕಾಶ ನೀಡಲಾಗಿದೆ. ಈಗಾಗಲೇ ವಿವಿಧ ರಾಜ್ಯಗಳಿಂದ ಆರು ಮಕ್ಕಳಿಗೂ ಪ್ರವೇಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ಬಿಜೆಪಿಯಿಂದ ರಾಜ್ಯಕ್ಕೆ ಬಂದ ಕೆಟ್ಟ ಹೆಸರನ್ನು ತೊಳೆಯುವ ಕೆಲಸ ಕಾಂಗ್ರೆಸ್ ಮಾಡಲಿದೆ: ಡಿಕೆಶಿ ಭರವಸೆ

55 ಸಾವಿರಕ್ಕಿಂತ ಹೆಚ್ಚು ಬಾಲಕಿಯರು ಪರೀಕ್ಷೆ ಬರೆದಿದ್ದರು: ಬೆಂಗಳೂರು, ಬೆಳಗಾವಿ ಸೇರಿದಂತೆ ದೇಶದಲ್ಲಿ ಐದು ರಾಷ್ಟ್ರೀಯ ಮಿಲಿಟರಿ ಶಾಲೆಗಳಿದ್ದು, ಇಷ್ಟು ವರ್ಷಗಳ ಕಾಲ ಗಂಡು ಮಕ್ಕಳಿಗಾಗಿಯೇ‌‌ ಮೀಸಲಾಗಿತ್ತು. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಮಿಲಿಟರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಶಾಲೆ ಆರಂಭಿಸಲಾಗಿತ್ತು‌.‌ ಕೇಂದ್ರಿಕೃತ ಪ್ರವೇಶ‌ ಪರೀಕ್ಷೆ ನಡೆಸಲಾಗಿತ್ತು. ದೇಶದಲ್ಲಿ 55 ಸಾವಿರಕ್ಕಿಂತ ಹೆಚ್ಚು ಬಾಲಕಿಯರು ಪರೀಕ್ಷೆ ಬರೆದಿದ್ದರು.

ಇದನ್ನೂ ಓದಿ : ಬಂಟ್ವಾಳದ 81ರ ವೃದ್ಧನಿಗೀಗ ಅಂಗನವಾಡಿ ಸ್ವಚ್ಛತಾ ಶಿಕ್ಷೆ: ಜೈಲಿನ ಬದಲು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್​

ಈ ಪೈಕಿ ರ‍್ಯಾಂಕಿಂಗ್ ಆಧಾರದ ಮೇರೆಗೆ ಹೊಸದಾಗಿ ತೆರೆಯಲಾಗಿರುವ ಬೆಂಗಳೂರಿನ ವಿದ್ಯಾರ್ಥಿನಿಯರ ಸೈನಿಕ‌ ಶಾಲೆಗೆ ಹರ್ಷಿಪಟೇಲ್ (ಗುಜರಾತ್), ವರ್ಷ ಯಾದವ್ (ಹರಿಯಾಣ) ದಿಲ್ ಜಾಮ್ (ಪಂಜಾಬ್) ಗೌರಿ ದೀಪ (ಆಂಧ್ರಪ್ರದೇಶ) ಸಿಮ್ರಾನ್ ಪಲ್ಲಿಯಾ (ಒಡಿಶಾ) ಹಾಗೂ ಆದಿತಿ ಮೆಹ್ರಾ (ಯುಪಿ) ಎಂಬುವರು ಪ್ರವೇಶವನ್ನು ಪಡೆದಿದ್ದಾರೆ‌.

ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ: ಸಿಎಂ ಕಚೇರಿ ಕಾಫಿ - ತಿಂಡಿಗೆ 200 ಕೋಟಿ ರೂ.‌ದುಂದು ವೆಚ್ಚ: ಎನ್.ಆರ್.ರಮೇಶ್ ಆರೋಪ

ಸೇನೆಯಲ್ಲಿ ಸೇವೆ ಸಲ್ಲಿಸಲು ರಾಷ್ಟ್ರೀಯ ಸೈನಿಕ ಶಾಲೆ ಅಡಿಗಲ್ಲು : 'ರಕ್ಷಣಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಕ್ರಮವಾಗಿ ಶೇಕಡಾ 70 ಹಾಗೂ 30ರಷ್ಟು ಮೀಸಲಾತಿಯಿದೆ. ಸಾರ್ವಜನಿಕ ವಲಯದಲ್ಲಿ‌ ಈ ಬಗ್ಗೆ ತಿಳಿವಳಿಕೆಯಿಲ್ಲ. ಬಡ ಕುಟುಂಬದ ಹೆಣ್ಣು‌ಮಗಳು ದೇಶದ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಲು ರಾಷ್ಟ್ರೀಯ ಸೈನಿಕ ಶಾಲೆ ಅಡಿಗಲ್ಲು ಆಗಿದೆ.

ವಿವಿಧ ಮಾದರಿಯ ರೈಫಲ್​ಗಳ ಪ್ರದರ್ಶನ: ಪ್ರತಿವರ್ಷ ಜೂನ್-ಆಗಸ್ಟ್ ನಲ್ಲಿ ಶಾಲೆಗೆ ಪ್ರವೇಶ‌ ಪಡೆಯಲು ಅರ್ಜಿ ಆಹ್ವಾನಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಶಾಲೆಯ ಇನ್‌ಚಾರ್ಜ್ ಆಗಿರುವ ಟಿ ಎಸ್ ಸುರೇಶ್ ಮನವಿ ಮಾಡಿಕೊಂಡರು. ಇದೇ ವೇಳೆ ಇಲಾಖೆಯಲ್ಲಿ ಬಳಸಲಾಗುವ ವಿವಿಧ‌ ಮಾದರಿಯ ರೈಫಲ್​ಗಳನ್ನು ಪ್ರದರ್ಶನಕ್ಕೆ‌ ಇಡಲಾಗಿತ್ತು.

ಇದನ್ನೂ ಓದಿ : ದತ್ತ ಪೀಠದಲ್ಲಿ ಮುಜಾವರ್​​ರಿಂದ ಮಾತ್ರ ಪೂಜಾ ಕೈಂಕರ್ಯ ನೆರವೇರಿಸುವ ಅವಕಾಶ ರದ್ದು: ಆದೇಶ ಎತ್ತಿ ಹಿಡಿದ ಹೈಕೋರ್ಟ್ ದ್ವಿಸದಸ್ಯ ಪೀಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.