ETV Bharat / state

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್,ಜಮೀರ್‌ಗೆ ಎಸ್​ಐಟಿ ನೋಟಿಸ್​

ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಿವಾಜಿನಗರ ಶಾಸಕ ರೋಷನ್​ ಬೇಗ್​ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್​ ಅಹಮ್ಮದ್​ ಖಾನ್‌ಗೆ ವಿಚಾರಣೆಗೆ ಹಾಜರಾಗುವಂತೆ SIT ನೋಟಿಸ್​ ಜಾರಿ ಮಾಡಿದೆ.

ಎಸ್​ಐಟಿ ನೋಟಿಸ್​
author img

By

Published : Jul 24, 2019, 11:31 PM IST

ಬೆಂಗಳೂರು : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿ ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್​ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇದೇ ವೇಳೆ ಎಸ್​ಐಟಿ ಅಧಿಕಾರಿಗಳು ಇಬ್ಬರೂ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದಾರೆ.

ಶಿವಾಜಿನಗರ ಶಾಸಕ ರೋಷನ್​ ಬೇಗ್​ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್​ ಅಹಮ್ಮದ್​ ಖಾನ್ ಇದೇ ತಿಂಗಳು 29 ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ತನಿಖಾಧಿಕಾರಿ ಗಿರೀಶ್​ ನೋಟಿಸ್​ ಜಾರಿ ಮಾಡಿದ್ದಾರೆ. ಐಎಂಎ ವಂಚನೆ ಪ್ರಕರಣದಲ್ಲಿ ಮನ್ಸೂರ್​ ಜೊತೆ ಹಣದ ಅವ್ಯವಹಾರ ನಡೆದಿದೆ ಎಂಬ ಆರೋಪದ ಆಧಾರದ ಮೇಲೆ ಇಡಿ ಅಧಿಕಾರಿಗಳು ಜು.5 ರಂದು ಜಮೀರ್​ ವಿಚಾರಣೆ ಮಾಡಿದ್ದರು.

ಬಳಿಕ ರೋಷನ್​ ಬೇಗ್​ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳುವ ವೇಳೆ ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೇ ಮೊದಲ ಬಾರಿಗೆ ಇಬ್ಬರು ಶಾಸಕರಿಗೆ ನೋಟಿಸ್​ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Intro:nullBody:ಐಎಂಎ ವಂಚನೆ ಪ್ರಕರಣ: ಶಾಸಕರಾದ ರೋಷನ್ ಬೇಗ್​​ ಹಾಗೂ ಜಮೀರ್ ಎಸ್​ಐಟಿ ನೊಟೀಸ್​
ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿ ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್​ ಮನ್ಸೂರ್ ಖಾನ್​ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚುರುಕುಗೊಳಿಸಿದ್ದರೆ ಮತ್ತೊಂದೆಡೆ ಎಸ್​ಐಟಿ ಅಧಿಕಾರಿಗಳು ಪ್ರಕರಣದಲ್ಲಿ ಹಣದ ಅವ್ಯವಹಾರ ನಡೆಸಿದ್ದಾರೆ ಶಂಕೆ ಮೇರೆಗೆ ಇಬ್ಬರು ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ಜಾರಿ ಮಾಡಿದ್ದಾರೆ.
ಶಿವಾಜಿನಗರ ಶಾಸಕ ಆರ್.ರೋಷನ್​ ಬೇಗ್​ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್​ ಅಹಮ್ಮದ್​ ಖಾನ್ ಇದೇ ತಿಂಗಳು 29ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ತನಿಖಾಧಿಕಾರಿ ಗಿರೀಶ್​ ನೊಟೀಸ್​ ಜಾರಿ ಮಾಡಿದ್ದಾರೆ.
ಐಎಂಎ ವಂಚನೆ ಪ್ರಕರಣದಲ್ಲಿ ಮನ್ಸೂರ್​ ನೊಂದಿಗೆ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪದ ಮೇರೆಗೆ ಇಡಿ ಅಧಿಕಾರಿಗಳು ಜು.5ರಂದು ಜಮೀರ್​ ಇಡಿ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದ್ದರು. ಅದೇ ರೀತಿ ರೋಷನ್​ ಬೇಗ್​ ಮುಂಬೈಗೆ ಹೋಗಲು ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಬಳಿ ಇದ್ದಾಗ ಏಕಾಏಕಿ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮಾರನೇ ದಿನ ವಿಚಾರಣೆಗೂ ಹಾಜರಾಗಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಶಾಸಕರನ್ನು ವಿಚಾರಣೆಗೆ ನೊಟೀಸ್​ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.Conclusion:null

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.