ETV Bharat / state

ಜಮೀರ್ ಅಹಮದ್​ಗೆ ಕೊರೊನಾ: ಸಿದ್ದರಾಮಯ್ಯ ಬೇಸರ, ಶೀಘ್ರ ಗುಣಮುಖರಾಗುವಂತೆ ಹಾರೈಕೆ - Zameer Ahmed Khan Covid-19

ಶಾಸಕ ಜಮೀರ್ ಅಹಮದ್ ಖಾನ್​ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ಜಮೀರ್​ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Zameer Ahmed Khan tests positive for Covid-19
ಶಾಸಕ ಜಮೀರ್ ಅಹ್ಮದ್ ಖಾನ್
author img

By

Published : Aug 18, 2020, 9:06 PM IST

Updated : Aug 18, 2020, 10:40 PM IST

ಬೆಂಗಳೂರು: ತಮ್ಮ ಆಪ್ತರ ವಲಯದಲ್ಲಿ ಒಬ್ಬರಾದ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧೈರ್ಯ ತುಂಬಿದ್ದಾರೆ. ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಜಮೀರ್ ಅಹಮದ್ ಆರೋಗ್ಯ ಸುಧಾರಿಸಲಿ ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

Zameer Ahmed Khan tests positive for Covid-19
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​

ಇಂದು ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಅವರು ಕೊರೊನಾ ಸೋಂಕಿಗೆ ಒಳಗಾದ ಸುದ್ದಿ ತಿಳಿದು ಬೇಸರವಾಯಿತು. ಅವರಿಗೆ ಕರೆ ಮಾಡಿ ಧೈರ್ಯ ತುಂಬುವ ಜೊತೆಗೆ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ ಎಂದಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸದಾ ಸಿದ್ದರಾಮಯ್ಯ ಜತೆಯಲ್ಲಿ ಕಾಣಿಸಿಕೊಳ್ಳುವ ಜಮೀರ್, ಸಿದ್ದರಾಮಯ್ಯ ತೆರಳಿದ ಕಡೆಯಲ್ಲೆಲ್ಲಾ ತೆರಳುತ್ತಿದ್ದರು. ಕಳೆದ ವಾರ ಸಿದ್ದರಾಮಯ್ಯನವರು ಮಣಿಪಾಲ್ ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆದು ಹಿಂದಿರುಗುವ ಸಂದರ್ಭದಲ್ಲಿಯೂ ಬರಮಾಡಿಕೊಳ್ಳಲು ತೆರಳಿದ್ದರು. ಇದೀಗ ಜಮೀರ್ ಕೊರೊನಾಗೆ ತುತ್ತಾಗಿರುವುದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Last Updated : Aug 18, 2020, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.