ETV Bharat / state

ರಾಜಕೀಯ ಮರೆತು ಸಿದ್ದರಾಮಯ್ಯ-ತೇಜಸ್ವಿ ಸೂರ್ಯ ಉಭಯ ಕುಶಲೋಪರಿ! - Tejasvi Surya

ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಸಾಕ್ಷಿಯಾಗಿದ್ದಾರೆ.

siddaramaiah-tejasvi-surya-talks
ರಾಜಕೀಯ ಮರೆತು ಸಿದ್ದರಾಮಯ್ಯ-ತೇಜಸ್ವಿ ಸೂರ್ಯ ಉಭಯ ಕುಶಲೋಪರಿ!
author img

By

Published : Jan 17, 2021, 11:02 PM IST

ಬೆಂಗಳೂರು: ರಾಜಕೀಯ ಮರೆತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಉಭಯಕುಶಲೋಪರಿ ವಿಚಾರಿಸಿದ್ದಾರೆ.

ನಟ ರಮೇಶ್ ಅರವಿಂದ್​ ಪುತ್ರಿ ನಿಹಾರಿಕಾ-ಅಕ್ಷಯ್ ಆರತಕ್ಷತೆ ಸಮಾರಂಭ ಇಂತಹ ಘಟನೆಗೆ ಸಾಕ್ಷಿಯಾಯಿತು. ಬದ್ಧ ವೈರಿಗಳಂತೆ ಸೆಣಸಾಡುತ್ತಿರುವ ಕಾಂಗ್ರೆಸ್-ಬಿಜೆಪಿ ನಾಯಕರು ಇಂದು ಒಂದೆಡೆ ಕುಳಿತು ಆತ್ಮೀಯವಾಗಿ ಸಮಾಲೋಚನೆ ನಡೆಸಿದ್ದಾರೆ. ಸಮಾರಂಭಕ್ಕೆ ಆಗಮಿಸಿದ್ದ ಸಂಸದ ತೇಜಸ್ವಿ ಸೂರ್ಯ, ಸಿದ್ದರಾಮಯ್ಯರನ್ನು ಭೇಟಿಯಾಗಿ ನಮಸ್ಕರಿಸಿ ಕೆಲ ಕಾಲ ಚರ್ಚೆ ನಡೆಸಿದರು.

ಸಮಾರಂಭಕ್ಕೆ ಡಿ.ಕೆ. ಶಿವಕುಮಾರ್, ಸುರೇಶ್​ ಕುಮಾರ್, ಸುಮಲತಾ ಅಂಬರೀಶ್, ಡಾ.ಸುಧಾಕರ್, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ್, ಮುನಿರತ್ನ ಮತ್ತಿತರ ರಾಜಕೀಯ ನಾಯಕರು ಆಗಮಿಸಿದ್ದರು. ಆದರೆ ಸಿದ್ದರಾಮಯ್ಯ, ತೇಜಸ್ವಿಸೂರ್ಯ, ಮುನಿರತ್ನ, ಬೈರತಿ ಸುರೇಶ್ ಒಟ್ಟಾಗಿ ಕುಳಿತು ಹರಟೆ ಹೊಡೆದ ಸನ್ನಿವೇಶ ಮಾತ್ರ ವಿಶೇಷವಾಗಿ ಗಮನ ಸೆಳೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.