ETV Bharat / state

ಬದುಕಿನ ಉತ್ಸವ ಮುಗಿಸಿ ಮರೆಯಾದ ನಿಸಾರ್‌ ಅಹಮದ್; ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

author img

By

Published : May 4, 2020, 1:09 PM IST

ಅನಾರೋಗ್ಯದಿಂದ ನಿನ್ನೆ ನಿಧನರಾದ ಕನ್ನಡದ ಹಿರಿಯ ಸಾಹಿತಿ ಕೆ.ಎಸ್.ನಿಸಾರ್​ ಅಹಮದ್​ ಅವರಿಗೆ ಪೊಲೀಸ್​ ಇಲಾಖೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದೆ.

siddaramaiah-talks-about-ks-nisar-ahmed
ನಿತ್ಯೋತ್ಸವ ಕವಿಗೆ ಅಂತಿಮ ನಮನ ಸಲ್ಲಿಸಿದ ಪೊಲೀಸ್ ಇಲಾಖೆ

ಬೆಂಗಳೂರು: ನಿತ್ಯೋತ್ಸವ ಕವಿತೆ ಮೂಲಕ ಕನ್ನಡಿಗರಲ್ಲಿ ನವೋಲ್ಲಾಸ ತುಂಬಿದ ಹಿರಿಯ ಸಾಹಿತಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಪೊಲೀಸ್ ಇಲಾಖೆ ಅಂತಿಮ ನಮನ ಸಲ್ಲಿಸಿತು.

ನಿತ್ಯೋತ್ಸವ ಕವಿಗೆ ಅಂತಿಮ ನಮನ

ಈ ಸಂದರ್ಭದಲ್ಲಿ ಮಾಜಿ‌ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಯು.ಟಿ.ಖಾದರ್, ಜಮೀರ್ ಅಹಮ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಿಸಾರ್ ಅಹ್ಮದ್ ಅವರು ನನಗೆ 37 ವರ್ಷಗಳಿಂದ ಪರಿಚಯ. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕಾರಣ ಶಿವಮೊಗ್ಗದ ವಾತಾವರಣ ಕವಿಯನ್ನು ಸಾಹಿತ್ಯ ಲೋಕಕ್ಕೆ ಆಕರ್ಷಿಸಿತ್ತು ಎಂದರು.

ಅಲ್ಲದೆ, 2017 ರಲ್ಲಿ ಮೈಸೂರು ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆ. ಆ ವೇಳೆ ಅವರು ದಸರೆಯ ಉದ್ಘಾಟನೆ ಮಾಡೋದು ನನಗೆ ತುಂಬಾ ಸಂತಸದ ವಿಷಯ. ಪದ್ಮಶ್ರೀ, ಪಂಪ, ಹಾಗೂ ನಾಡೋಜ ಪ್ರಶಸ್ತಿಗಿಂತ ದೊಡ್ಡ ಖುಷಿ ಕೊಡುವ ವಿಷಯ ಎಂದು ಹೇಳಿರುವುದಾಗಿ ಸ್ಮರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.