ETV Bharat / state

RSS ಕೈಗೊಂಬೆಯಂತೆ ಸಿಎಂ, ಸರ್ಕಾರದ ತಾಳದಂತೆ ಸ್ಪೀಕರ್ ಕೆಲಸ: ಸಿದ್ದು ವಾಗ್ದಾಳಿ - ಎನ್​ಇಪಿ ಮಸೂದೆ

ವಿಧಾನಸಭೆ ಕಲಾಪವನ್ನ ಅನಿರ್ದಿಷ್ಟಾವಧಿವರೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದ್ದಾರೆ. ಕಲಾಪ ಮುಗಿಯುತ್ತಿದ್ದಂತೆ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

siddaramaiah-
ಸಿದ್ದರಾಮಯ್ಯ
author img

By

Published : Sep 24, 2021, 2:20 PM IST

ಬೆಂಗಳೂರು: ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಬೊಮ್ಮಾಯಿ ಮೇಲೆ ನಿರೀಕ್ಷೆಯಿತ್ತು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅಂದುಕೊಂಡಿದ್ದೆ. ಆದರೆ, ಸಿಎಂ ಆರ್​​​ಎಸ್​ಎಸ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆ ಅಧಿವೇಶನ ಮುಕ್ತಾಯದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ತನ್ನ ಉದ್ದೇಶ ಈಡೇರಿಕೆಗೆ ಅಧಿವೇಶನ ಕರೆದಿತ್ತು. ಜನರ ಸಮಸ್ಯೆ ಬಗ್ಗೆ ಇವರಿಗೆ ಕಾಳಜಿ ಇಲ್ಲ. ನಾವು ಜನರ ಸಮಸ್ಯೆಗಳನ್ನು ಚರ್ಚಿಸುವ ಆಶಯ ಹೊಂದಿದ್ದವು. ಯಾವುದೇ ರೀತಿಯಲ್ಲೂ ಧರಣಿ ಪ್ರತಿಭಟನೆ ನಡೆಸದೇ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಿದ್ದೆವು. ಆದರೆ, ಸರ್ಕಾರದ ನಡೆ ಬೇಸರ ತರಿಸಿದೆ ಹಾಗಾಗಿ ಬಾವಿಗಿಳಿಯಬೇಕಾಗಿ ಬಂತು ಎಂದರು.

ಕನಿಷ್ಠ 20 ದಿನ ಕಲಾಪ ನಡೆಸುವಂತೆ ಹೇಳಿದ್ದೆ, ಬಿಎಸಿ ಸಭೆ ಮಾಡಿ ತೀರ್ಮಾನಿಸುವುದಾಗಿ ತಿಳಿಸಿದ್ದರು. ಆದರೆ, ಬಿಎಸಿ‌ ಸಭೆಯನ್ನ ‌ಕರೆಯಲೇ ಇಲ್ಲ. ಕೊನೆಗೆ 5 ದಿನ ವಿಸ್ತರಣೆಗೆ ಪತ್ರ ಬರೆದಿದ್ದೆ. ಸರ್ಕಾರ ಒಪ್ಪುತ್ತಿಲ್ಲ ಎಂದು ಸ್ಪೀಕರ್ ಹೇಳಿದ್ದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿ ಪಾಲಿಸಿ ಚರ್ಚೆಯಾಗಬೇಕು. ಇವತ್ತು ಪಾಲಿಸಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಿರೀಕ್ಷೆ ಹುಸಿಯಾಗಿದೆ

ರಾಜ್ಯದಲ್ಲಿಕೋವಿಡ್​​ನಿಂದಾಗಿ 4 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸತ್ತವರಿಗೆ ಪರಿಹಾರವನ್ನ ಸಹ ಇಲ್ಲಿಯವರೆಗೆ ನೀಡಿಲ್ಲ. ರಾಮುಲು ಕೊಟ್ಟಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ಇದೊಂದು ಮಾನಗೆಟ್ಟ, ಲಜ್ಜೆಗೆಟ್ಟ ಸರ್ಕಾರ. ಮೈಸೂರು ಅತ್ಯಾಚಾರ ಪ್ರಕರಣ ಚರ್ಚೆಯಾಯ್ತು. ಆದರೆ, ಸರಿಯಾದ ಉತ್ತರ ಕೊಡಲಿಲ್ಲ. ನಾವು ಧರಣಿ ಮಾಡೋದು ಬೇಡ ಅಂದುಕೊಂಡಿದ್ದೆವು. ಅಂತಿಮವಾಗಿ ವಿಸ್ತರಣೆಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಇಂದು ಅನಿವಾರ್ಯವಾಗಿ ಧರಣಿ ಮಾಡಿದ್ದೇವೆ ಎಂದರು.

‘ನಾಗ್ಪುರ ಎಜುಕೇಷನ್ ಪಾಲಿಸಿ’

ರಾಷ್ಟ್ರೀಯ ಶಿಕ್ಷಣ ನೀತಿ ಪಾಲಿಸಿ ಸರಿಯಲ್ಲ. ಇದು ದಲಿತರು, ಮಹಿಳೆಯರನ್ನ ಗುಲಾಮರನ್ನಾಗಿ ಮಾಡುತ್ತದೆ. ಅದಕ್ಕೆ ಈ ಬಿಲ್ ತಂದಿದ್ದಾರೆ. ಇದು ನಾಗ್ಪುರ ಎಜುಕೇಷನ್ ಪಾಲಿಸಿ ಅಂದೆವು. ಚಾಣಕ್ಯ ವಿವಿ ವಿಧೇಯಕ ತಂದರು. 116 ಎಕರೆ ಜಮೀನು ಅದಕ್ಕೆ ಕೊಟ್ಟಿದ್ದಾರೆ. ರೈತರಿಂದ 1.5 ಕೋಟಿಗೆ ಪಡೆದು 50 ಕೋಟಿಗೆ ಕೊಟ್ಟಿದ್ದಾರೆ. ಟ್ರಸ್ಟ್​​ನಲ್ಲಿರುವವರು ಆರ್​​​ಎಸ್​ಎಸ್​​ನವರು. ಶ್ರೇಣಿಕೃತ ಸಮಾಜಕ್ಕೆ ಈ ವಿವಿ ತೆಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: RSS ಶಿಕ್ಷಣ ನೀತಿಯೆಂದೇ ಕರೆಯಿರಿ ಚಿಂತೆ ಇಲ್ಲ: ನಾಗ್ಪುರ ಪಾಲಿಸಿ ಎಂದ ಕಾಂಗ್ರೆಸ್‌ಗೆ ಸಿಎಂ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.