ETV Bharat / state

ಡಿ ಕೆ ರವಿ ದಕ್ಷ ಪ್ರಾಮಾಣಿಕ ಅಧಿಕಾರಿ ಜತೆಗೆ ಪ್ರಚಾರ ಪ್ರಿಯರಾಗಿದ್ದರು : ವಿಪಕ್ಷ ನಾಯಕ ಸಿದ್ದರಾಮಯ್ಯ

ಇಂದು ಲೇಖಕ ರಾಮಕೃಷ್ಣ ಉಪಾಧ್ಯರವರು ಬರೆದಿರುವ ಐಎಎಸ್​​ ಅಧಿಕಾರಿ ಡಿಕೆ ರವಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ರಚಿಸಿರುವ 'ನಗ್ನ ಸತ್ಯ' ಹಾಗೂ 'ಲ್ಯಾಂಡ್, ಲಸ್ಟ್ ಅಂಡ್ ಆಡಿಯೋ ಟೇಪ್' ಎಂಬ ಕೃತಿಗಳು ಬಿಡುಗಡೆಗೊಂಡವು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುಸ್ತಕ ರಿಲೀಸ್​ ಮಾಡಿದರು..

books related program
ಪುಸ್ತಕ ಬಿಡುಗಡೆ ಕಾರ್ಯಕ್ರಮ
author img

By

Published : Oct 2, 2021, 8:23 PM IST

Updated : Oct 2, 2021, 8:52 PM IST

ಬೆಂಗಳೂರು : ಐಎಎಸ್ ಅಧಿಕಾರಿ ಡಿ ಕೆ ರವಿಯವರು ದಕ್ಷ ಪ್ರಾಮಾಣಿಕ ಅಧಿಕಾರಿ ಎನ್ನುವಲ್ಲಿ ಸಂಶಯ ಇಲ್ಲ. ಇದರ ಜೊತೆಗೆ ಪ್ರಚಾರಪ್ರಿಯರು ಆಗಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹಿರಿಯ ಪತ್ರಕರ್ತ, ಲೇಖಕ ರಾಮಕೃಷ್ಣ ಉಪಾಧ್ಯ ಅವರು ಬರೆದಿರುವ ಐಎಎಸ್​​ ಅಧಿಕಾರಿ ಡಿ ಕೆ ರವಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ರಚಿಸಿರುವ 'ನಗ್ನ ಸತ್ಯ' ಹಾಗೂ 'ಲ್ಯಾಂಡ್, ಲಸ್ಟ್ ಅಂಡ್ ಆಡಿಯೋ ಟೇಪ್' ಎಂಬ ಕೃತಿಗಳನ್ನು ಬಿಡುಗಡೆ ಮಾಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ಬಳಿಕ ಮಾತನಾಡಿದ ಅವರು, ಮರಳು ಮತ್ತು ಭೂ ಮಾಫಿಯಾ ವಿರುದ್ಧ ಹೋರಾಟ ಮಾಡಲು ಆರಂಭಿಸಿದರು. ಮಾಧ್ಯಮಗಳಿಗೆ ತಿಳಿಸಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಹೆಚ್ಚು ಪ್ರಚಾರ ಸಿಗಬೇಕೆಂದು ಬಯಸುತ್ತಿದ್ದರು. ಮಾಧ್ಯಮಗಳು ಇವರಿಗೆ ಹತ್ತಿರವಾಗಿದ್ದರಿಂದ ದೊಡ್ಡ ಪ್ರಚಾರ ಸಿಕ್ಕಿತು. ಜನಪ್ರಿಯತೆ ಉಳಿಸುವ ಪ್ರಯತ್ನವನ್ನು ಡಿ ಕೆ ರವಿ ಮಾಡಿದರು ಎಂದರು.

ಅವರನ್ನು ವರ್ಗಾವಣೆ ಮಾಡಿ ಎಂದು ನನಗೆ ಯಾರೂ ಒತ್ತಡ ಹೇರಲಿಲ್ಲ. ಆದರೆ, ಸಾಕಷ್ಟು ರಾಜಕಾರಣಿಗಳಿಗೆ ಅವರ ವಿರುದ್ಧ ಬೇಸರ ಇತ್ತು. ಆದರೆ, ಒಂದು ದಿನ ಅವರ ಮಾವ ಹನುಮಂತರಾಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನನ್ನ ಬಳಿ ಬಂದು ಮಗಳು ಬೆಂಗಳೂರಿನಲ್ಲಿದ್ದು, ಅಳಿಯ ಕೋಲಾರದಲ್ಲಿದ್ದಾರೆ. ಬದುಕು ತೊಂದರೆಯಾಗುತ್ತದೆ.

ಬೆಂಗಳೂರಿನಲ್ಲಿ ಎಲ್ಲಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದರು. ಇಲ್ಲಿ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಅವರನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ವರ್ಗಾವಣೆ ಮಾಡಿಸಿಕೊಟ್ಟೆ ಎಂದು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳನ್ನು ತಿಳಿಸಿದರು.

ಲೇಖಕ ರಾಮಕೃಷ್ಣ ಉಪಾಧ್ಯ ಇಂತಹ ಸಾಕಷ್ಟು ಘಟನೆ ನೋಡಿದ್ದಾರೆ ಮತ್ತು ಬರೆದಿದ್ದಾರೆ. ಬಹಳಷ್ಟು ಅನುಭವ ಅವರಿಗಿದೆ. ಡಿ ಕೆ ರವಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಬಗ್ಗೆ ಅನೇಕ ಮಾಹಿತಿ ಶೇಖರಿಸಿ, ಸತ್ಯವನ್ನ ಜನರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಆ ವೇಳೆ ನಾವು ಮುಖ್ಯಮಂತ್ರಿಯಾಗಿದ್ದೆ, ವಿಧಾನಸಭೆ ಅಧಿವೇಶನ ನಡೆಯುತ್ತಿತ್ತು. ರವಿಯವರ ಆತ್ಮಹತ್ಯೆ ಬಿಜೆಪಿ ಮತ್ತು ಜೆಡಿಎಸ್​ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು.

ಹಿರಿಯ ಪತ್ರಕರ್ತ, ಲೇಖಕ ರಾಮಕೃಷ್ಣ ಉಪಾಧ್ಯ

ಆಗ ಕೆ ಜೆ ಜಾರ್ಜ್ ಗೃಹ ಸಚಿವರಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದ್ದರು. ಡಿ ಕೆ ರವಿ ಒಬ್ಬ ಯುವ ಅಧಿಕಾರಿ. ಇವರನ್ನು ಜಿಲ್ಲಾಧಿಕಾರಿಯಾಗಿ ಮಾಡಿ ಎಂದು ಕೆ ಹೆಚ್​ ಮುನಿಯಪ್ಪ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಡಿಸಿ ಮಾಡಿದ್ದೆ. ಒಂದು ವರ್ಷ ಕಾರ್ಯ ನಿರ್ವಹಿಸಿದ್ದರು. ಅನುಭವ ಇಲ್ಲದೆ ತನಿಖಾ ವರದಿ ಮಾಡಲು ಹೋದರೆ ಏನಾಗುತ್ತದೆ ಎನ್ನುವುದಕ್ಕೆ ರವಿ ಸಾವಿನ ಘಟನೆ ಉತ್ತಮ ಉದಾಹರಣೆ ಎಂದರು.

ಆ ಸಮಯದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ಕೇಂದ್ರದ ಗ್ರಹ ಸಚಿವ ರಾಜನಾಥ್ ಸಿಂಗ್​​​ರನ್ನು ಭೇಟಿಯಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ನಾವು ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಯಾವುದೇ ಹಿಂಜರಿಕೆ ಪಡಲಿಲ್ಲ.

ನಾವು ನಮ್ಮ ಅಧಿಕಾರಾವಧಿಯಲ್ಲಿ ಐದಾರು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ. ಬಿಜೆಪಿ ಸರ್ಕಾರ ಕನಿಷ್ಠ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ತೋರಿಸಲಿ ಎಂದು ಆಕ್ರೋಶ ಹೊರ ಹಾಕಿದರು.

ಬಳಿಕ ಲೇಖಕ, ಪತ್ರಕರ್ತ ರಾಮಕೃಷ್ಣ ಉಪಾಧ್ಯ ಮಾತನಾಡಿ, ಐಎಎಸ್ ರವಿಯವರ ಆಕಸ್ಮಿಕ‌ ಸಾವಿನ ಕುರಿತಾದ ಕೃತಿ ಇದಾಗಿದೆ. ಬಡತನದಲ್ಲಿ ಹುಟ್ಟಿ ಐಎಎಸ್ ಪಾಸ್ ಮಾಡಿ ಮೂರು ವರ್ಷದಲ್ಲಿ ಕೋಲಾರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಲ್ಯಾಂಡ್, ಸ್ಯಾಂಡ್ ಮಾಫಿಯಾ ಮಟ್ಟ ಹಾಕಿ ಪ್ರಾಮಾಣಿಕ ಅಧಿಕಾರಿ ಎಂಬ ಕೀರ್ತಿ ಪಡೆದಿದ್ದರು. ರವಿಯವರ ಸಂಪೂರ್ಣ ಮಾಹಿತಿ ಹಾಗೂ ಎಲ್ಲಾ ರೀತಿಯ ದಾಖಲೆಗಳನ್ನು ಸಂಗ್ರಹಿಸಿ ಕೃತಿಗಳನ್ನು ರಚಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಿಜಿಆರ್ ಸಿಂಧ್ಯಾ, ಚಿತ್ರ ನಿರ್ದೇಶಕ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಸಿಗಲ್ಲ ಕೊರೊನಾ‌ ಲಸಿಕೆ.. ಕಾರಣ ಇಲ್ಲಿದೆ ನೋಡಿ..

Last Updated : Oct 2, 2021, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.