ETV Bharat / state

ಬೆಂಗಳೂರು: ದಕ್ಷಿಣ ಭಾರತದ ಮೊಟ್ಟ ಮೊದಲ ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ ರಥೋತ್ಸವ

ಬೆಂಗಳೂರು ನಗರದ ಹುಳಿಮಾವಿನಲ್ಲಿರುವ ಮಾತಾ ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ 19ನೇ ಶ್ರೀ ವೈಷ್ಣೋಮಾ ಮಹೋತ್ಸವ ಇಂದು ಆರಂಭವಾಯಿತು.

shri-vaishnoma-devi-temple-rathotsav-begins-today  at bengaluru
ದಕ್ಷಿಣ ಭಾರತದ ಮೊಟ್ಟ ಮೊದಲ ಶ್ರೀ ವೈಷ್ಣೋಮಾ ದೇವಿ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಚಾಲನೆ
author img

By ETV Bharat Karnataka Team

Published : Aug 26, 2023, 9:28 PM IST

ದಕ್ಷಿಣ ಭಾರತದ ಮೊಟ್ಟ ಮೊದಲ ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಚಾಲನೆ

ಬೆಂಗಳೂರು : ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಮಾತಾ ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ 19ನೇ ಶ್ರೀ ವೈಷ್ಣೋಮಾ ಮಹೋತ್ಸವ ಶನಿವಾರ ಆರಂಭವಾಯಿತು. ದೇವಸ್ಥಾನದ ರಥೋತ್ಸವಕ್ಕೆ ವಿಜಯನಗರದ ಶಾಸಕ ಎಂ ಕೃಷ್ಣಪ್ಪ, ಸುಬ್ರಮಣ್ಯ ಶರ್ಮ ಸ್ವಾಮೀಜಿ, ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್, ಪೂಜ ದುಗ್ಗಲ್ ಚಾಲನೆ ನೀಡಿದರು. ಈ ವೇಳೆ ಉತ್ಸವ ಮೂರ್ತಿಯ ಜೊತೆಯಲ್ಲಿ ಸಹಸ್ರಾರು ಮಹಿಳೆಯರು ಕಳಸ ಹೊತ್ತು ಪ್ರಮುಖ ರಾಜಬೀದಿಯಲ್ಲಿ ಸಾಗಿದರು.

ಬಳಿಕ ಮಾತನಾಡಿದ ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್, ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅಲ್ಲಿಗೆ ವಯಸ್ಸಾದವರಿಗೆ, ಮಕ್ಕಳಿಗೆ ಹೋಗಲು ಸ್ವಲ್ಪ ಕಷ್ಟ. ಹಾಗಾಗಿ ಅಲ್ಲಿ ಹೋಗಲು ಸಾಧ್ಯವಾಗದೇ ಇರುವವರಿಗೆ ಬೆಂಗಳೂರಿನಲ್ಲಿ ಮೂಲ ಮಾದರಿಯ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ದೇವಸ್ಥಾನ ಎಂದು ಹೇಳಿದರು.

ದಕ್ಷಿಣ ಭಾರತದ ಮೊದಲ ವೈಷ್ಣೋದೇವಿ ದೇವಸ್ಥಾನ : ದಕ್ಷಿಣ ಭಾರತದಲ್ಲಿ ಮೊದಲ ವೈಷ್ಣೋದೇವಿ ದೇವಸ್ಥಾನ ಇದಾಗಿದ್ದು, 19 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಮೂಲ ವೈಷ್ಣೋದೇವಿ ಮಂದಿರದಷ್ಟೇ ಪ್ರಭಾವ ಹೊಂದಿರುವ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ರಥೋತ್ಸವದ ಸಂದರ್ಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ರಕ್ಷಾ ಬಂಧನ, ಕಲಶ ಸ್ಥಾಪನೆ, ನವಗ್ರಹ, ಆಂಜನೇಯ ಮತ್ತು ಮಹಾಮೃತ್ಯುಂಜಯ ಹೋಮ ಮತ್ತು ಪಂಚರುದ್ರ, ಮಹಾಲಕ್ಷ್ಮೀ, ಕಾಲಭೈರವ, ಸುಬ್ರಮಣ್ಯ ಸ್ವಾಮಿ ಹೋಮ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ : ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.