ETV Bharat / state

ಬೆಂಗಳೂರಲ್ಲಿ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಯೋಗ ತರಬೇತುದಾರನಿಗೆ ಜೈಲು ಶಿಕ್ಷೆ - ಈಟಿವಿ ಭಾರತ್ ಕನ್ನಡ

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ. ಯೋಗ ತರಬೇತುದಾರರನಿಗೆ ಐದು ವರ್ಷ ಶಿಕ್ಷೆ ವಿಧಿಸಿದ ಬೆಂಗಳೂರು ಕೋರ್ಟ್​

ಬಾಲಕಿಗೆ ಲೈಂಗಿಕ ಕಿರುಕುಳ
ಬಾಲಕಿಗೆ ಲೈಂಗಿಕ ಕಿರುಕುಳ
author img

By

Published : Sep 23, 2022, 6:59 PM IST

Updated : Sep 23, 2022, 8:12 PM IST

ಬೆಂಗಳೂರು: ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸ್ವಾಮಿ ನಿರಂಜನ್​ ಎಂಬುವರಿಗೆ ನಗರದ 1ನೇ ತ್ವರಿತಗತಿಯ ನ್ಯಾಯಾಲಯ ಐದು ವರ್ಷ ಶಿಕ್ಷೆ ಮತ್ತು 30 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್​.ರೂಪ ಅವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟುವಲ್ಲಿ ವಿಫಲವಾದಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅಲ್ಲದೇ, ನೊಂದ ಬಾಲಕಿಗೆ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಹತ್ತಿಗುಪ್ಪೆ ಬಳಿಯ ಬಿನ್ನೆ ಲೇಔಟ್​ ನಿವಾಸಿಯಾದ ಆರೋಪಿ ಸ್ವಾಮಿ ನಿರಂಜನ್​ ಅವರು ಜಯನಗರದ ಧ್ಯಾನ ಮಂದಿರದಲ್ಲಿ ಸಾರ್ವಜನಿಕರಿಗೆ ಧ್ಯಾನ ಮತ್ತು ಯೋಗಾಸನಗಳ ತರಬೇತಿ ಕೊಡುತ್ತಿದ್ದರು.

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಸಂತ್ರಸ್ತೆಯ ತಾಯಿ ಅದೇ ಧ್ಯಾನ ಮಂದಿರದಲ್ಲಿ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. 2018ರ ಆಗಸ್ಟ್​ 4 ರಂದು ಶಾಲೆ ಮುಗಿದ ಬಳಿಕ ಬಾಲಕಿಯನ್ನು ತಾಯಿ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದರು. ಜೊತೆಗೆ ಅತಿಥಿ ಕೋಣೆಯಲ್ಲಿ ಬಾಲಕಿಯ ಬ್ಯಾಗ್​ ಇಟ್ಟಿದ್ದರು. ಬ್ಯಾಗ್​​ನಿಂದ ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದು ಮಗುವನ್ನು ತಾಯಿ ಕಳಿಸಿದ್ದರು. ಮಗು ಕೋಣೆಗೆ ಹೋಗುತ್ತಿದ್ದಂತೆ ಒಳಗಡೆ ಇದ್ದ ಆರೋಪಿ, ಬಾಗಿಲನ್ನು ಮುಚ್ಚಿ ಮಗುವನ್ನು ವಿವಸ್ತ್ರಗೊಳಿಸಿ ಗುಪ್ತಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಈ ಸಂಬಂಧ ಬಾಲಕಿಯ ತಾಯಿ ಚಂದ್ರಾಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿಕೊಂಡು, ಅಂದಿನ ತನಿಖಾಧಿಕಾರಿಗಳಾದ ರವಿಕುಮಾರ್​ ಮತ್ತು ಎಸ್​. ವೀರೇಂದ್ರ ಪ್ರಸಾದ್​ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್​ ಪರವಾಗಿ ಪಿ.ಕೃಷ್ಣವೇಣಿ ಬಲವಾದ ವಾದ ಮಂಡಿಸಿದರು. ವಾದ ಮತ್ತು ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

(ಓದಿ: ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​)

Last Updated : Sep 23, 2022, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.