ETV Bharat / state

ವಿಧಾನ ಪರಿಷತ್​ನಲ್ಲಿ ಕೊರೊನಾ ನಿಯಂತ್ರಣ ವಿಚಾರದ ಮೇಲೆ ಗಂಭೀರ ಚರ್ಚೆ - Corona latest news

ರಾಜ್ಯ ಸರ್ಕಾರ ನಮ್ಮ ಸಲಹೆ ಸ್ವೀಕರಿಸಲಿಲ್ಲ. ಬದಲಾಗಿ ನಿಯಂತ್ರಿಸಿದ್ದರೆ ಮೆಚ್ಚುಗೆ ಮಾತನ್ನಾಡಬಹುದಿತ್ತು. ಆದರೆ, ಸ್ಥಿತಿ ಶೋಚನೀಯ ವಾಗಿದೆ. ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸಲಕರಣೆ ಇತ್ಯಾದಿಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ. 4 ಲಕ್ಷ ಬೆಲೆಯ ವೆಂಟಿಲೇಟರ್​ನ್ನು 18,20,000 ರೂ.ಗೆ ಖರೀದಿಸಿದೆ. ಎಷ್ಟು ಪಟ್ಟು ಹಣ ಹೆಚ್ಚಾಗಿದೆ ಅನ್ನುವುದಕ್ಕೆ ಉತ್ತರವಿಲ್ಲ ಎಂದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಟೀಕಿಸಿದರು..

Serious debate on Corona at the Council
ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ
author img

By

Published : Sep 22, 2020, 8:30 PM IST

ಬೆಂಗಳೂರು : ಕೊರೊನಾ ನಿಯಂತ್ರಣದಲ್ಲಿ ಕಳೆದ ಆರು ತಿಂಗಳಲ್ಲಿ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ವಿಧಾನ ಪರಿಷತ್​ನಲ್ಲಿ ಅರ್ಧ ಗಂಟೆ ಚರ್ಚೆ ಮಾಡಿ ಮಾತನಾಡಿದ ಅವರು, ರೋಗ ತಡೆಯಲು ಏನು ಮಾಡಬೇಕಿತ್ತೋ ಅದನ್ನು ಮಾಡಲು ಸಚಿವರ ನಡುವಿನ ಸಂವಹನ ಕೊರತೆ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಮಾರಕ ರೋಗ ನಿಯಂತ್ರಣಕ್ಕೆ 4 ಸಾವಿರ ಕೋಟಿ ವ್ಯಯಿಸಿರುವ ಸರ್ಕಾರ ಶೇ.1 ರಷ್ಟು ನಿಯಂತ್ರಿಸಲು ಸಾಧ್ಯವಾಗಿಲ್ಲ. ಖರೀದಿಗೆ ಎಲ್ಲಿ ಕಮೀಷನ್ ಸಿಗಲಿದೆ ಎನ್ನುವುದನ್ನು ಸಚಿವರು ಗಮನಿಸಿದರೇ ಹೊರತು, ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಕೇರಳದ ನಿಯಂತ್ರಣ ಮಾದರಿ ಅಳವಡಿಸಿಕೊಳ್ಳಬೇಕಿತ್ತು. ಆರಂಭದಲ್ಲೇ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರು. ಅವರ ಹಾದಿಯಲ್ಲಿ ಸಾಗಬಹುದಿತ್ತು ಎಂದರು.

ಗೊಂದಲ ನಿರ್ಮಾಣ: ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಸ್ಥಾಪಿಸಿದೆ. ಇದರ ಲೆಕ್ಕ ಕೇಳುವಂತಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ಅನುದಾನ ಸಿಕ್ಕಿದೆ ಎಂದು ಕೇಳಿದಾಗ ಆಡಳಿತ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಆಯನೂರು ಮಂಜುನಾಥ್, ರವಿಕುಮಾರ್ ಖಂಡಿಸಿದರು. ರಾಜ್ಯ ಆರೋಗ್ಯ ಇಲಾಖೆ ಬಗ್ಗೆ ಮಾತಾಡಿ, ಪಿಎಂ ಕೇರ್ಸ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ ಇದೆ ಎಂದು ನಾರಾಯಣಸ್ವಾಮಿ ತಿಳಿಸಿದಾಗ ಆಡಳಿತ ಪಕ್ಷ ಸದಸ್ಯರು ಮೊದಲ ಸ್ಥಾನದಲ್ಲಿರುವ ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂದು ಕೇಳಿ ‌ಗಲಾಟೆ ಮಾಡಿದರು. ಸರ್ಕಾರಕ್ಕೆ ಉತ್ತರಿಸುವ ಸಾಮರ್ಥ್ಯ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿ ನಾರಾಯಣಸ್ವಾಮಿ ಮಾತು ಮುಂದುವರಿಸಿದರು.

ಸಲಹೆ ಸ್ವೀಕರಿಸಲಿಲ್ಲ: ರಾಜ್ಯ ಸರ್ಕಾರ ನಮ್ಮ ಸಲಹೆ ಸ್ವೀಕರಿಸಲಿಲ್ಲ. ಬದಲಾಗಿ ನಿಯಂತ್ರಿಸಿದ್ದರೆ ಮೆಚ್ಚುಗೆ ಮಾತನ್ನಾಡಬಹುದಿತ್ತು. ಆದರೆ, ಸ್ಥಿತಿ ಶೋಚನೀಯ ವಾಗಿದೆ. ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಸಲಕರಣೆ ಇತ್ಯಾದಿಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ. 4 ಲಕ್ಷ ಬೆಲೆಯ ವೆಂಟಿಲೇಟರ್​ನ್ನು 18,20,000 ರೂ.ಗೆ ಖರೀದಿಸಿದೆ. ಎಷ್ಟು ಪಟ್ಟು ಹಣ ಹೆಚ್ಚಾಗಿದೆ ಅನ್ನುವುದಕ್ಕೆ ಉತ್ತರವಿಲ್ಲ. ಇಲ್ಲಾದ ಅವ್ಯವಹಾರದ ತನಿಖೆ ಆಗಿಲ್ಲ, ಯಾರ ಮೇಲೂ ಕ್ರಮ ಆಗಿಲ್ಲ, ಮೂರು ಪತ್ರ ಬರೆದು ಆರು ತಿಂಗಳಾಯಿತು, ಇನ್ನೂ ಉತ್ತರ ಬಂದಿಲ್ಲ. ಆಂಬುಲೆನ್ಸ್​ ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ. ಜನರಿಗೆ ಆಂಬುಲೆನ್ಸ್ ನೀಡದ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು ಎಂದು ನಾರಾಯಣಸ್ವಾಮಿ ಹೇಳಿದ್ದಕ್ಕೆ ಆಡಳಿತ ಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಹೊರಟ್ಟಿ ಹಾಗೂ ಎಸ್.ಆರ್. ಪಾಟೀಲ್ ಮಧ್ಯಪ್ರವೇಶಿಸಿ ಮಾತನಾಡಲು ಅವಕಾಶ ನೀಡಿ, ನಂತರ ಮಾತನಾಡಿ ಎಂದು ಸಲಹೆ ಇತ್ತರು.

ಇಲ್ಲಿ ರಾಜಕೀಯ ಬೇಡ: ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಇದು ಸರ್ಕಾರದ ವೈಫಲ್ಯದಿಂದ ಆದ ಸಮಸ್ಯೆ ಅಲ್ಲ. ಇಡೀ ಜಗತ್ತು ಸಮಸ್ಯೆಗೆ ತುತ್ತಾಗಿದೆ. ಇಲ್ಲಿ ಆಗಿರುವ ಒಳ್ಳೆಯ ಕೆಲಸದ ಬಗ್ಗೆಗೂ ತಿಳಿಸಿ, ಸರ್ಕಾರ ಇಷ್ಟು ಕಷ್ಟದ ಸಮಸ್ಯೆಯಲ್ಲಿ ಮಾಡಿರುವ ಉತ್ತಮ ಕೆಲಸದ ಬಗ್ಗೆ ಮಾತನಾಡಿ. ರೋಗದ ವಿಚಾರದಲ್ಲಿ ರಾಜಕೀಯ ಬೇಡ. ತಮಿಳುನಾಡು ರಾಜ್ಯ ನಮ್ಮಲ್ಲಾದ ರೋಗ ನಿಯಂತ್ರಣವನ್ನು ಮೆಚ್ಚಿದೆ. ಕೆಲ ರಾಜ್ಯದಲ್ಲಿ ಈಗಲೂ ಲಾಲ್​ಡೌನ್​ ಜಾರಿಯಲ್ಲಿದೆ. ನಮ್ಮಲ್ಲಿ ಕೈಗಾರಿಕೆ ಕಾರ್ಯ ನಿರ್ವಹಿಸುತ್ತಿದೆ. ನಾವು ಸುರಕ್ಷತೆ ಕೈಗೊಂಡರೂ ರೋಗ ಹೆಚ್ಚಾಗುತ್ತಿದೆ. ಸೂಕ್ತ ಸಲಹೆ ಸೂಚನೆ ಕೊಡುವ ಕೆಲಸ ಮಾಡಿ. ಇಲ್ಲಿ ರಾಜಕೀಯ ಬೇಡ ಎಂದು ಸಲಹೆ ನೀಡಿದರು.

ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಇಂತ ಸಂದರ್ಭ ಟೀಕಿಸುವ ಬದಲು, ಸಲಹೆ ನೀಡಿ. ಪ್ರತಿಪಕ್ಷಗಳು ವಿರೋಧಿಸುವುದಕ್ಕೇ ಇದ್ದೇವೆ ಎಂಬ ರೀತಿ ನಡೆದುಕೊಳ್ಳಬಾರದು. ಲೋಪದೋಷಗಳನ್ನು ತಿಳಿಸಿ, ತಿದ್ದಿಕೊಳ್ಳುತ್ತೇವೆ ಎಂದರು.

ಸಚಿವ ಸಿ.ಟಿ. ರವಿ ಮಾತನಾಡಿ, ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಕೊರೊನಾಗೆ ಒಳಗಾಗಿ 3.9 ಲಕ್ಷ ಮಂದಿ ಗುಣಮುಖರಾಗಿ ಬಂದಿದ್ದಾರೆ. ರೋಗಿಗಳ ಸಾವಿನ ಪ್ರಮಾಣ ಶೇ.1.6 ರಷ್ಟಿದೆ. ಶೇ.25 ರಷ್ಟು ಗುಣಮುಖರಾಗುವ ಪ್ರಮಾಣ ಇದೆ. 7 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆಯೇ ಇಲ್ಲ ಅಂತ ಸರ್ಕಾರ, ವೈದ್ಯರು ಸುಮ್ಮನಿದ್ದರೆ ಸಾವಿನ ಸಂಖ್ಯೆ ಲಕ್ಷ ದಾಟುತ್ತಿತ್ತು. ಆದರೆ, ಆ ಸ್ಥಿತಿ ಇಲ್ಲ. ಟೀಕಿಸುವುದೇ ಉದ್ದೇಶವಾಗಿಸಿಕೊಳ್ಳಬೇಡಿ ಎಂದು ಹೇಳಿದಾಗ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಒಂದಿಷ್ಟು ಸಮಯ ಗದ್ದಲದ ವಾತಾವರಣ ಏರ್ಪಟ್ಟಿತು. ಸಭಾಪತಿಗಳು ಮಧ್ಯಪ್ರವೇಶಿಸಿ ಸಮಾಧಾನಿಸುವ ಯತ್ನ ಮಾಡಿದರಾದರೂ, ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ನಾರಾಯಣಸ್ವಾಮಿ ಮಾತು ಮುಂದುವರಿಸಿ, ವಲಸೆ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಿದ್ದರೆ ಯಾರೂ ಹೋಗುತ್ತಿರಲಿಲ್ಲ. ಹೈಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿದೆ. ಸಾಕಷ್ಟು ಮಂದಿ ಊರಿಗೆ ತೆರಳುವ ಮಾರ್ಗದಲ್ಲಿ ಸತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿರಾರು ಮಂದಿ ಬದುಕು ಕಳೆದುಕೊಂಡಿದ್ದಾರೆ. ಲಾಕ್​ಡೌನ್​ ಘೋಷಣೆಗೆ ಮುನ್ನ ಒಂದು ವಾರ ಊರಿಗೆ ತೆರಳುವವರಿಗೆ ಅವಕಾಶ ಕೊಡಬೇಕಿತ್ತೆಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯ ಪ್ರಾಣೇಶ ಮಾತನಾಡಿ, ನಾನು ಕೊರೊನಾ ರೋಗಿಯಾಗಿ 12 ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಇವರಿಗೆ ಇರುವ ಬದ್ಧತೆ ಖಾಸಗಿ ಆಸ್ಪತ್ರೆಗೆ ಇಲ್ಲ. ಇಂದು ಜನ ಖಾಸಗಿ ಆಸ್ಪತ್ರೆಗಳತ್ತ ವಾಲುತ್ತಿದ್ದರೆ ಅದಕ್ಕೆ ಪತ್ರಿಪಕ್ಷಗಳ ಆರೋಪ ಕಾರಣ. ಜನರನ್ನು ಮನೆ, ಜಮೀನು ಮಾರಿಕೊಳ್ಳುವಂತೆ ಮಾಡಿದ್ದೀರಿ ಎಂದು ದೂರಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಆರೈಕೆ ಸಿಗುತ್ತಿದೆ. ಅನಗತ್ಯ ಧೂಷಣೆ ಮಾಡಿದರೆ ಅವರ ಆತ್ಮಸ್ಥೈರ್ಯ ಕುಗ್ಗಿಸಬೇಡಿ. ವೈದ್ಯರ ಮನೋಭಲ ಕುಗ್ಗಿಸಬೇಡಿ. ಸಾಂಘಿಕ ಪ್ರಯತ್ನಕ್ಕೆ ಸಮಸ್ಯೆ ತರಬೇಡಿ. ನಾನು ಆಸ್ಪತ್ರೆಯಲ್ಲಿ ಇದ್ದಾಗಲೇ ಮೂವರು ನಿಧನರಾದರು. ಆದರೆ, ಅವರ ಅನಾರೋಗ್ಯ ದೊಡ್ಡದಿತ್ತು. 55 ವರ್ಷದ ಚಾಲಕರೊಬ್ಬರು 40 ಆಕ್ಸಿಜನ್ ಸಿಲಿಂಡರ್ ಬಳಸಿದರೂ ಉಳಿಯಲಿಲ್ಲ. ಆದರೂ ಸರ್ಕಾರಿ ವೈದ್ಯರು ಪ್ರಯತ್ನ ಮಾಡುತ್ತಿದ್ದಾರೆ.

ಜನ ಕೂಡ ನಿಯಮ ಪಾಲಿಸಬೇಕು. ಸಾಕಷ್ಟು ಸಿದ್ಧತೆ ಮಾಡಿಕೊಂಡು ಲಾಕ್​ಡೌನ್​ ತೆರವು ಮಾಡಿದ್ದಾರೆ. ಹೀಗಾಗಿ ಸಾವು ನೋವು ನಿಯಂತ್ರಣದಲ್ಲಿವೆ. ಸಣ್ಣ ಪುಟ್ಟ ದೋಷಗಳು ಇರಬಹುದು. ಆದರೆ, ಟೀಕಿಸುವುದೇ ಕೆಲಸ ಆಗಬಾರದು. ಜನ ಸಾಯಲು ಹೆದರಿಕೆ ಕಾರಣ. ತಬ್ಲಿಘಿಗಳಿಂದ ಈ ರೋಗ ಬಂತು ಎಂದಾಗ ಮತ್ತೆ ಗದ್ದಲ ಉಂಟಾಯಿತು. ಇದಾದ ಬಳಿಕ ಸದಸ್ಯರಾದ ಪಿ.ಆರ್. ರಮೇಶ್, ಮತ್ತಿತರ ಸದಸ್ಯರು ಮಾತನಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.