ETV Bharat / state

ಜುಲೈನಲ್ಲಿ ಶಾಲೆಗಳ ಪ್ರಾರಂಭ ಸಾಧ್ಯತೆ : ಶಾಲಾ ಕಚೇರಿಗಳು ಇದೇ 5ರಿಂದ ಆರಂಭ

ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನದಂತೆ, ಕೇಂದ್ರದ ಮಾರ್ಗಸೂಚಿಯ ಆಧಾರದಲ್ಲಿ ಜುಲೈ 1 ರಿಂದ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ಪೋಷಕರ ಅಭಿಪ್ರಾಯ ಸಂಗ್ರಹಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

schools opening  in July
ಜುಲೈನಲ್ಲಿ ಶಾಲೆಗಳ ಪ್ರಾರಂಭ ಸಾಧ್ಯತೆ : ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ
author img

By

Published : Jun 2, 2020, 10:40 PM IST

ಬೆಂಗಳೂರು : ಜುಲೈನಲ್ಲಿ ಶಾಲೆಗಳು ಪುನಾರಂಭವಾಗುವ ಮುನ್ಸೂಚನೆ ಇದ್ದು, ಇದರ ತಯಾರಿಗಾಗಿ ಇದೇ ತಿಂಗಳ ಜೂನ್ 5 ರಿಂದ ಶಾಲೆಗಳ ಕಚೇರಿಗಳು ಪ್ರಾರಂಭವಾಗಲಿವೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನದಂತೆ, ಕೇಂದ್ರದ ಮಾರ್ಗಸೂಚಿಯ ಆಧಾರದಲ್ಲಿ ಜುಲೈ 1 ರಿಂದ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಪೋಷಕರ ಅಭಿಪ್ರಾಯ ಸಂಗ್ರಹಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಹೀಗಾಗಿ ಜೂನ್ 5 ರಿಂದಲೇ ರಾಜ್ಯದ ಎಲ್ಲ ಸರ್ಕಾರಿ‌ ಶಾಲೆಯ ಕಚೇರಿ ಸಿಬ್ಬಂದಿ ಸಂಬಂಧಿಸಿದ ಶಾಲೆಗಳಲ್ಲಿ ಕರ್ತವ್ಯಕ್ಕೆ‌ ಹಾಜರಾಗಿ, ಜೂನ್ 8 ರಿಂದ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಿದ್ದಾರೆ. ಶೈಕ್ಷಣಿಕ ತಯಾರಿಗೆ ಜೂನ್‌ ತಿಂಗಳನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳ ಪರಿಸ್ಥಿತಿಯ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರ್ಕಾರದ ನಿರ್ದೇಶನದಂತೆ ಆರಂಭಿಸಲು ಸೂಚಿಸಿದ್ದಾರೆ.

schools opening  in July
ಸರ್ಕಾರ ಹೊರಡಿಸಿರುವ ಸುತ್ತೋಲೆ

ಜೂನ್ 8 ರಿಂದ ಖಾಸಗಿ ಅನುದಾನರಹಿತ ಶಾಲಾ ಕಚೇರಿಗಳ ಪ್ರಾರಂಭಕ್ಕೂ ಅನುಮತಿಸಿ ಆದೇಶ ಹೊರಡಿಸಲಾಗಿದ್ದು, ಪೋಷಕರ‌ ಅಭಿಪ್ರಾಯವನ್ನು ಜೂನ್ 15 ರೊಳಗೆ ‌ದಾಖಲಿಸಲು ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.