ETV Bharat / technology

ಕೈಗೆಟುಕುವ ದರದಲ್ಲಿ ಫೈವ್​ ಸ್ಟಾರ್​ ಸೇಫ್ಟಿ ರೇಟಿಂಗ್; ಮಹೀಂದ್ರಾದ ಈ ಕಾರ್​ ಬಗ್ಗೆ ಗೊತ್ತಾ? - 5 STAR SAFETY RATING CAR

5 Star Safety Rating Car: ಮಹೀಂದ್ರಾ XUV 3XO ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರು ಫೈವ್​ ಸ್ಟಾರ್​ ಸೇಫ್ಟಿ ರೇಟಿಂಗ್​ ಹೊಂದಿವೆ.

5 STAR SAFETY RATING CAR  MAHINDRA 3XO FEATURES  MAHINDRA 3XO PRICE  MAHINDRA 3XO DETAILS
ಫೈವ್​ ಸ್ಟಾರ್​ ಸೇಫ್ಟಿ ರೇಟಿಂಗ್​ ಮಹೀಂದ್ರ (Photo Credit: Mahindra)
author img

By ETV Bharat Tech Team

Published : Jan 1, 2025, 9:14 AM IST

Best 5 Star Safety Rating Car: ನೀವು ಹೊಸ ಕಾರನ್ನು ಖರೀದಿಸುವಾಗ ಉತ್ತಮ ಮೈಲೇಜ್ ಜೊತೆಗೆ ನಿಮ್ಮ ಕಾಳಜಿಯು ಸುರಕ್ಷತೆಯ ಬಗ್ಗೆಯೂ ಆಲೋಚಿಸಬೇಕು. ಈಗ ಜನರು ಕಾರು ಖರೀದಿಸುವಾಗ ವಿನ್ಯಾಸ, ಬಣ್ಣ ಮತ್ತು ವೈಶಿಷ್ಟ್ಯಗಳ ಜೊತೆಗೆ ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದ್ದಾರೆ. ನೀವು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಮಹೀಂದ್ರಾ 3XO ಉತ್ತಮ ಆಯ್ಕೆಯಾಗಲಿದೆ.

Mahindra 3XO: ಮಹೀಂದ್ರ XUV 3XO ಮಕ್ಕಳಿಂದ ವಯಸ್ಕರವರೆಗಿನ ಪ್ರತಿಯೊಬ್ಬರ ಸುರಕ್ಷತೆಗಾಗಿ ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ, ಇದು 32 ರಲ್ಲಿ 29.36 ಅಂಕಗಳನ್ನು ಪಡೆದರೆ, ಮಕ್ಕಳ ಸುರಕ್ಷತೆಗಾಗಿ ಇದು 49 ರಲ್ಲಿ 43 ಅಂಕಗಳನ್ನು ಪಡೆದುಕೊಂಡಿದೆ. ಭಾರತ್ ಎನ್‌ಸಿಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಾಧಿಸಲು ಇದು ಅಗ್ಗದ ಕಾರು. ಇನ್ನು ಬೆಲೆಯ ಬಗ್ಗೆ ಹೇಳುವುದಾದರೆ ಇದರ ಬೆಲೆ 7 ಲಕ್ಷ 79 ಸಾವಿರ ಎಕ್ಸ್ ಶೋ ರೂಂ ಆಗಿದ್ದು, 15 ಲಕ್ಷದ 49 ಸಾವಿರ ರೂ. ವೇರಿಯಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆ ಬದಲಾಗುತ್ತದೆ.

XUV 3XO ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯ: ಮಹೀಂದ್ರಾ XUV 3XO ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 82 kW ಶಕ್ತಿಯನ್ನು ಒದಗಿಸುತ್ತದೆ ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಾಹನವು 1.2-ಲೀಟರ್ TGDi ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ, ಇದು 96 kW ಮತ್ತು 230 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಹೀಂದ್ರಾ ಕಾರು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಈ ಡೀಸೆಲ್ ಎಂಜಿನ್ 86 kW ಪವರ್ ಮತ್ತು 300 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸುರಕ್ಷತಾ ವೈಶಿಷ್ಟ್ಯಗಳು ಕಾರಿನಲ್ಲಿ ಲಭ್ಯ: ಮಹೀಂದ್ರಾ XUV 3XO ನಲ್ಲಿ ನೀವು 6 ಏರ್‌ಬ್ಯಾಗ್‌ಗಳು, ABS, ESE ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ನಂತಹ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸಹ ಇದರಲ್ಲಿ ಲಭ್ಯವಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮುಂತಾದ ವೈಶಿಷ್ಟ್ಯಗಳು ಕಾರಿನಲ್ಲಿ ಲಭ್ಯ ಇವೆ.

ಓದಿ: ಬಾಹ್ಯಾಕಾಶ ಡಾಕಿಂಗ್​ ಪ್ರಯೋಗ: ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ, ಯಶಸ್ವಿಯಾಗಿ ಬೇರ್ಪಡಿಸಿದ ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.