ಶಿವಮೊಗ್ಗ: 2025 ಹೊಸ ವರ್ಷವನ್ನು ಮಲೆನಾಡಿನ ಜನತೆ ಅತ್ಯಂತ ಸಂಭ್ರಮದಿಂದ ಬರ ಮಾಡಿಕೊಂಡು 2024 ಅನ್ನು ಸಂತೋಷದಿಂದ ಬಿಳ್ಕೋಟ್ಟರು.
ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಪ್ರೀತಿಯಿಂದ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಕ್ಲಬ್, ರೆಸಾರ್ಟ್ಗಳಲ್ಲಿ ಹೊಸ ವರ್ಷಕ್ಕಾಗಿ ವಿವಿಧ ಈವೆಂಟ್ಸ್, ಡಿಜೆ ಸೇರಿದಂತೆ ವಿವಿಧ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆ ಆಗುವುದನ್ನು ಕಾಯುತ್ತಿದ್ದ ಯುವ ಜನತೆಯು ಕುಣಿದು ಕುಪ್ಪಣಿಸುತ್ತಾ ಹೊಸ ವರ್ಷವನ್ನು ವೆಲ್ಕಮ್ ಮಾಡಿದರು. ಶಿವಮೊಗ್ಗದ ಕಂಟ್ರಿ ಕ್ಲಬ್, ಮಲೆನಾಡ್ ಶೈರ್ನಲ್ಲಿ ಹಾಗೂ ಸಾಗರದ ಗ್ರೀನ್ ಆ್ಯಂಬಾಸಿ, ತ್ಯಾಗರ್ತಿ ಕ್ರಾಸ್ನಲ್ಲಿ ಹೊಸ ವರ್ಷಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರದ ಕಂಟ್ರಿ ಕ್ಲಬ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬೆಂಗಳೂರಿನ ಒನ್ ನೈಟ್ ಇನ್ ಟುಮಾರೋ ಲ್ಯಾಂಡ್ ಎಂಬ ಈವೆಂಟ್ನಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ: ಹೊಸ ವರ್ಷ 2025: ಏನಂತಾರೆ ಬೆಳಗಾವಿಯ ಯುವ ಮನಸ್ಸುಗಳು? ಈಟಿವಿ ಭಾರತದ ಜೊತೆ ಮುಕ್ತ ಮಾತು