ಬೆಂಗಳೂರು: ಕೊರೊನಾ ವೈರಸ್ ಭೀತಿ ತಡೆಗೆ ಸರ್ಕಾರ ಮುಂದಾಗಿರುವ ಈ ಸಮಯದಲ್ಲಿ ಕೆಲ ಶಾಲೆಗಳು ಮಾತ್ರ ಶುಲ್ಕ ವಸೂಲಾತಿಗೆ ಮುಂದಾಗಿವೆ.
ಕೊರೊನಾ ಚಿಂತೆಯ ನಡುವೆಯೂ ಸ್ಕೂಲ್ ಫೀಸ್ ಕಟ್ಟುವ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಕೊರೊನಾ ವೈರಸ್ ಭೀತಿ ನಡುವೆ ಕೆಲ ಶಾಲೆಗಳು ಶುಲ್ಕ ವಸೂಲಿಗೆ ಮುಂದಾಗಿರೋದು ಸರಿಯಲ್ಲ. ಈಗಾಗಲೇ ಸರ್ಕಾರ ಕೂಡ ಸ್ಪಷ್ಟವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸದಿರುವಂತೆ ಸೂಚನೆ ಕೊಟ್ಟಿದೆ. ಆದ್ರೆ, ಕೆಲ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಿಗೆ ಮುಂದಾಗಿರುವುದು ಸರಿಯಲ್ಲ ಎಂದರು.
ಶಾಲೆಗಳು ತಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡಬೇಕು. ಯಾವುದೋ ಒಂದು ಶಾಲೆ ಮಾಡಿದ ತಪ್ಪಿಗೆ ಇಡೀ ಖಾಸಗಿ ಶಾಲೆಗಳ ಮೇಲೆ ತಪ್ಪು ಭಾವನೆ ಮೂಡುತ್ತಿದೆ. ಹಲವು ಶಾಲೆಗಳು ಆರ್ಥಿಕವಾಗಿ ಸದೃಢವಾಗಿದ್ದು, ಮನುಷ್ಯತ್ವ ಮರೆಯಬಾರದು. ಶುಲ್ಕ ವಸೂಲಿಗಿಳಿಯುವ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.