ETV Bharat / state

ಎಸ್​ಸಿ-ಎಸ್​ಟಿ ಆಯೋಗವು ವ್ಯಾಜ್ಯ ಬಗೆಹರಿಸುವ ನ್ಯಾಯ ಮಂಡಳಿಯಲ್ಲ: ಹೈಕೋರ್ಟ್ ಅಭಿಪ್ರಾಯ

ಸರ್ಕಾರಿ ನೌಕರ ಸಿದ್ಧಲಿಂಗಸ್ವಾಮಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ನೌಕರರಾದ ಎಂ.ಬಿ.ಸಿದ್ಧಲಿಂಗಸ್ವಾಮಿ ಅಧೀಕ್ಷಕರಾಗಿ 2012ರಲ್ಲಿ ಬಡ್ತಿ ಹೊಂದಿದ್ದರು. ಕೆ.ಆರ್.ಮುರುಳೀದರ್ ಅವರು 2015ರಲ್ಲಿ ಬಡ್ತಿ ಹೊಂದಿದ್ದರು. ಈ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಬಡ್ತಿ ವಿಚಾರದಲ್ಲಿ ವಿವಾದವಿತ್ತು.

SC-ST Commission is not a dispute resolution tribunal: HC
ಹೈಕೋರ್ಟ್
author img

By

Published : Dec 25, 2020, 10:45 PM IST

Updated : Dec 25, 2020, 10:53 PM IST

ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು ನ್ಯಾಯ ಮಂಡಳಿಯಂತೆ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸರ್ಕಾರಿ ನೌಕರ ಸಿದ್ಧಲಿಂಗಸ್ವಾಮಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ನೌಕರರಾದ ಎಂ.ಬಿ.ಸಿದ್ಧಲಿಂಗಸ್ವಾಮಿ ಅಧೀಕ್ಷಕರಾಗಿ 2012ರಲ್ಲಿ ಬಡ್ತಿ ಹೊಂದಿದ್ದರು. ಕೆ.ಆರ್.ಮುರುಳೀದರ್ ಅವರು 2015ರಲ್ಲಿ ಬಡ್ತಿ ಹೊಂದಿದ್ದರು. ಈ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಬಡ್ತಿ ವಿಚಾರದಲ್ಲಿ ವಿವಾದವಿತ್ತು. ಈ ಕುರಿತು ಮುರುಳೀಧರ್ ಎಸ್‌ಸಿ/ಎಸ್‌ಟಿ ಆಯೋಗಕ್ಕೆ ಅರ್ಜಿ ಸಲ್ಲಿಸಿ, ತಮಗೆ ಸಿದ್ಧಲಿಂಗಸ್ವಾಮಿ ಅವರಿಗಿಂತ ಹೆಚ್ಚಿನ ಸೇವಾ ಹಿರಿತನವಿದೆ. ಅದರ ಆಧಾರದ ಮೇಲೆ ತಮಗೆ ಎಲ್ಲಾ ಸೌಲಭ್ಯ ಕೊಡಿಸಲು ಆದೇಶಿಸುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ಆಯೋಗ, ಮುಳೀಧರ್ ಅವರಿಗೆ 2012ರಿಂದ ಜಾರಿಗೆ ಬರುವಂತೆ ಎಲ್ಲಾ ಸೇವಾ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ 2016ರಲ್ಲಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸಿದ್ಧಲಿಂಗಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಿದ್ಧಲಿಂಗಸ್ವಾಮಿ ಪರ ವಕೀಲರು, ಬಡ್ತಿ ಅಥವಾ ಸೇವಾ ಹಿರಿತನ ವಿಚಾರದಲ್ಲಿ ಯಾವುದೇ ವ್ಯಾಜ್ಯವಿಸಿದ್ದರೂ ಮುರುಳೀಧರ್ ಕರ್ನಾಟಕ ಆಡಳಿತ ನ್ಯಾಯ ಮಂಡಳಿ(ಕೆಎಟಿ) ಮೊರೆ ಹೋಗಬೇಕಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಡಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಯನ್ನು ಪುರಸ್ಕರಿಸಿ ಆಯೋಗವು ಆದೇಶ ಹೊರಡಿಸಿದೆ. ಆಯೋಗಕ್ಕೆ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕೊಂದು ಕೊರತೆಗಳನ್ನು ಪರಿಹರಿಸುವ ಅಧಿಕಾರ ವ್ಯಾಪ್ತಿವಿದೆ. ಸೇವಾ ನಿಯಮ ಹಾಗೂ ವ್ಯಾಜ್ಯಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ. ಆಯೋಗವು ನ್ಯಾಯ ಮಂಡಳಿ ಅಥವಾ ನ್ಯಾಯಾಲಯಗಳ ಕಾರ್ಯಗಳನ್ನು ನಿರ್ವಹಿಸುವ ವೇದಿಕೆಯಲ್ಲ. ಹೀಗಾಗಿ ಅದರ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ವಾದ ಪರಿಗಣಿಸಿದ ಹೈಕೋರ್ಟ್, ಕರ್ನಾಟಕ ಎಸ್​ಸಿ-ಎಸ್​ಟಿ ಆಯೋಗವನ್ನು ನ್ಯಾಯ ಮಂಡಳಿಯಂತೆ ಪರಿಗಣಿಸಲಾಗದು. ಅದು ನ್ಯಾಯಾಲಯದ ಕಾರ್ಯಗಳನ್ನು ನಿರ್ವಹಿಸುವ ವೇದಿಕೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಿಚಾರಣೆ ಮುಂದೂಡಿದೆ.

Last Updated : Dec 25, 2020, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.