ETV Bharat / state

ಆ್ಯಡಂ ಪಾಷ ಹೈಫೈ MD ಕ್ರಿಸ್ಟಲ್ ಸೇವನೆ: ತನಿಖೆ ವೇಳೆ ರೋಚಕ ಕಹಾನಿ ಬೆಳಕಿಗೆ - md crystal drugs

ಆ್ಯಡಂ‌ ಪಾಷಾ MD ಕ್ರಿಸ್ಟಲ್ (ಅಧಿಕ ಮೊತ್ತದ ಡ್ರಗ್ಸ್​​​ ) ಸೇವನೆ ಮಾಡುತ್ತಿದ್ದ ವಿಚಾರ ಬಯಲಾಗಿದೆ. ಈ ಡ್ರಗ್ಸ್​​​ ಒಂದು ಗ್ರಾಂಗೆ ಸುಮಾರು ಐದು-ಆರು ಸಾವಿರದಿಂದ 15 ಸಾವಿರದವರೆಗೆ ಬೆಲೆಯುಳ್ಳದ್ದಾಗಿದೆ. ಇದನ್ನು ಈತ ಎನ್​​ಸಿಬಿಯಿಂದ ಮೊದಲು ಬಂಧನವಾದ ಅನಿಕಾಳ ಬಳಿಯಿಂದ ಪಡೆಯುತ್ತಿದ್ದ. ಈತ ಡ್ರಗ್ಸ್​​​ ಸೇವನೆ ‌ಮಾಡುತ್ತಿದ್ದದ್ದು ಮಾತ್ರವಲ್ಲದೇ ತ‌ನ್ನದೇ ಗ್ಯಾಂಗ್ ಸೃಷ್ಟಿ ಮಾಡಿಕೊಂಡು ಡ್ರಗ್ಸ್​​ ಪೂರೈಕೆ ಮಾಡುತ್ತಿದ್ದ ವಿಚಾರ ಕೂಡ ತಿಳಿದುಬಂದಿದೆ.

sandalwood drugs case: Adam Pasha took MD Crystal drugs
ಆ್ಯಡಂ ಪಾಷ ಹೈ-ಫೈ MD ಕ್ರಿಸ್ಟಲ್ ಸೇವನೆ; ತನಿಖೆ ವೇಳೆ ರೋಚಕ ಕಹಾನಿ ಬೆಳಕಿಗೆ
author img

By

Published : Oct 21, 2020, 2:18 PM IST

ಬೆಂಗಳೂರು: ಸ್ಯಾಂಡಲ್​​​ವುಡ್ ಡ್ರಗ್ಸ್​​​ ಮಾಫಿಯಾ ಸುಳಿಯಲ್ಲಿ ಆ್ಯಡಂ ಪಾಷಾ ಕೂಡ ಸಿಕ್ಕಿಬಿದ್ದಿದ್ದು, ಸದ್ಯ ಎನ್​​ಸಿಬಿ ‌ಪೊಲೀಸರು ಈತನ ಜೊತೆ ಸಂಪರ್ಕದಲ್ಲಿರುವ ಕೆಲ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಆ್ಯಡಂ ಪಾಷಾ ಮೊಬೈಲ್ ಜಪ್ತಿ ಮಾಡಿದ್ದು, ಮೊಬೈಲನ್ನು ರಿಟ್ರೀವ್​​​ಗಾಗಿ ಎಫ್​​ಎಸ್​​​ಎಲ್​ಗೆ ರವಾನೆ ಮಾಡಿದ್ದಾರೆ. ಮೊಬೈಲ್​ನಲ್ಲಿ ಕೆಲ ಚಾಟಿಂಗ್, ಕಾಲ್ ಡಿಟೇಲ್ಸ್ ಡಿಲಿಟ್ ಮಾಡಿರುವ ವಿಚಾರ ಎನ್​​ಸಿಬಿ ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ. ಅಷ್ಟೇ ಅಲ್ಲದೆ, ಆ್ಯಡಂ‌ ಪಾಷಾ MD ಕ್ರಿಸ್ಟಲ್ (ಅಧಿಕ ಮೊತ್ತದ ಡ್ರಗ್ಸ್​​​ ) ಸೇವನೆ ಮಾಡುತ್ತಿದ್ದ ವಿಚಾರ ಕೂಡ ಬಯಲಾಗಿದೆ.

ಬಿಗ್ ಬಾಸ್ ಖ್ಯಾತಿಯ ಆಡಂ ಪಾಷಾ ಬಂಧನ : ಆ ಮೂವರಿಂದ ಡ್ರಗ್ಸ್​​ ತರಿಸಿಕೊಳ್ತಿದ್ರಂತೆ?

ಈ ಡ್ರಗ್ಸ್​​​ ಒಂದು ಗ್ರಾಂಗೆ ಸುಮಾರು ಐದು-ಆರು ಸಾವಿರದಿಂದ 15 ಸಾವಿರದವರೆಗೆ ಬೆಲೆಯುಳ್ಳದ್ದಾಗಿದೆ. ಇದನ್ನು ಎನ್​​ಸಿಬಿಯಿಂದ ಮೊದಲು ಬಂಧನವಾದ ಅನಿಕಾಳ ಬಳಿಯಿಂದ ಪಡೆಯುತ್ತಿದ್ದ. ಈತ ಡ್ರಗ್ಸ್​​​ ಸೇವನೆ ‌ಮಾಡುತ್ತಿದ್ದದ್ದು ಮಾತ್ರವಲ್ಲದೇ ತ‌ನ್ನದೇ ಗ್ಯಾಂಗ್ ಸೃಷ್ಟಿ ಮಾಡಿಕೊಂಡು ಡ್ರಗ್ಸ್​​ ಪೂರೈಕೆ ಮಾಡುತ್ತಿದ್ದ ವಿಚಾರ ತಿಳಿದುಬಂದಿದೆ. ಹೀಗಾಗಿ ಕಳೆದ ಬಾರಿ ಬಿಗ್​​ ಬಾಸ್​​ನಲ್ಲಿ ಸ್ಪರ್ಧೆ ಮಾಡಿದ ಕೆಲವರಿಗೆ ನಡುಕ ಶುರುವಾಗಿದೆ. ಕಾರಣ, ಆ್ಯಡಂ‌ ಪಾಷಾ ಪಾರ್ಟಿಗಳಲ್ಲಿ ಬಹಳಷ್ಟು ಕಿರುತೆರೆ ಮಂದಿ ಭಾಗಿಯಾಗಿದ್ದು, ಸದ್ಯ ಅನೇಕರಿಗೆ ವಿಚಾರಣೆ ಭಯ ಶುರುವಾಗಿದೆ.

ಆ್ಯಡಂ ಪಾಷ ಆರೆಸ್ಟ್ ಆಗಿದ್ದೇ ರೋಚಕ:

ಆ್ಯಡಂ ಪಾಷಾ ಮೇಲೆ ಕಳೆದ ಒಂದು ತಿಂಗಳಿನಿಂದ ನಿಗಾ ಇಟ್ಟಿರುವ ಎನ್​ಸಿಬಿ ಅನುಮಾನ ಬಾರದಂತೆ ಮೊದಲು ಆತನ ಚಲನ ವಲನ ಗಮನಿಸಿದ್ರು. ನಿನ್ನೆ ಎನ್​​ಸಿಬಿ ಬೆಂಗಳೂರು ವಿಭಾಗದ ಮುಖ್ಯಸ್ಥ ಅಮಿತ್ ಘವಾಟೆ ನೇತೃತ್ವದಲ್ಲಿನ ತಂಡ ವಿಚಾರಣೆಗೆ ಕರೆದು ಮೊದಲು ಕುಡಿಯಲು ಟೀ ಕೊಟ್ಟು ಕೂರಿಸಿ ಉತ್ತಮ ರೀತಿಯಲ್ಲೇ ಮಾತನಾಡಿಸಿದ್ರು. ಆದ್ರೆ ಆ್ಯಡಂ ಸರಿಯಾಗಿ ಪ್ರತಿಕ್ರಿಯಿಸದೆ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದೆ ಇದ್ದಾಗ ಸಾಕ್ಷಿ ಆಧಾರಗಳನ್ನು ಮುಂದಿಟ್ಟು ತೀವ್ರ ತನಿಖೆ ನಡೆಸಿ ಸಂಜೆ ಐದು ಗಂಟೆಗೆ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.