ETV Bharat / state

ಇಂದು ಜಾಮೀನು ಅರ್ಜಿ ವಿಚಾರಣೆ: ಏನಾಗಲಿದೆ ನಟಿಮಣಿಯರ ಭವಿಷ್ಯ? - ನಟಿ ರಾಗಿಣಿ ಹಾಗೂ ನಟಿ ಸಂಜನಾಳ ಅರ್ಜಿ ವಿಚಾರಣೆ

ಸಿಟಿ ಸಿವಿಲ್ ಆವರಣದ ಎನ್​​​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಇಂದು ನಟಿ ರಾಗಿಣಿ ಹಾಗೂ ನಟಿ ಸಂಜನಾಳ ಅರ್ಜಿ ವಿಚಾರಣೆ ನಡೆಯಲಿದೆ. ಇದರ ಜೊತೆ ನಟಿಮಣಿಯರಿಬ್ಬರ ಆಪ್ತರ ಅರ್ಜಿ ವಿಚಾರಣೆ ‌‌ಕೂಡ ಇಂದು ನಡೆಯಲಿದೆ.

sandalwood-drug-mafia-case-actress-ragini-and-sanjana-petition-enquiry
ಜಾಮೀನು ಅರ್ಜಿ ವಿಚಾರಣೆ
author img

By

Published : Sep 24, 2020, 7:37 AM IST

Updated : Sep 24, 2020, 8:03 AM IST

ಬೆಂಗಳೂರು: ಸ್ಯಾಂಡಲ್​​​ವುಡ್ ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಇಂದು ಸಿಟಿ ಸಿವಿಲ್ ಆವರಣದ ಎನ್​​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಟಿ ರಾಗಿಣಿ ಹಾಗೂ ನಟಿ ಸಂಜನಾಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಗಳಾಗಿರುವ ನಟಿಮಣಿಯರಿಬ್ಬರು ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಕಳೆದ ವಿಚಾರಣೆ ವೇಳೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಸಿಸಿಬಿ ನ್ಯಾಯಾಲಯಕ್ಕೆ ಪ್ರಬಲ ಸಾಕ್ಷ್ಯ ನೀಡಿದ ಕಾರಣ ಇಂದಿಗೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿತ್ತು. ಕಳೆದ ವಿಚಾರಣೆ ವೇಳೆ ರಾಗಿಣಿ ಅರ್ಜಿಗೆ ರಾಗಿಣಿ ಪರ ವಕೀಲರು ವಾದ ಮಂಡಿಸಿದ್ದರು. ಸಿಸಿಬಿ ಕೂಡ ಇದಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಿತ್ತು. ಹಾಗೆಯೇ ಸಂಜನಾ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸಮಯಾವಕಾಶ ಕೇಳಿದ ಹಿನ್ನೆಲೆ ಇಂದು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಲ್ಲಿಕೆ ಮಾಡಲಿದೆ. ಹಾಗೆಯೇ ವಾದ ಪ್ರತಿವಾದ ನಡೆಯಲಿದೆ.

ಸದ್ಯ ತನಿಖಾಧಿಕಾರಿಗಳು ಇಬ್ಬರೂ ನಟಿಮಣಿಯರ ಬಗ್ಗೆ ಪ್ರಬಲವಾದ ಸಾಕ್ಷ್ಯ ಹೊಂದಿರುವ ಕಾರಣ ಇಂದು ಕೂಡ ‌ಜಾಮೀನು ಸಿಗುವುದು ಬಹುತೇಕ ಅನುಮಾನವಾಗಿದೆ. ಆದರೂ ನಟಣಿಯರಿಬ್ಬರು ತಮಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆ ನಟಿಮಣಿಯರಿಬ್ಬರ ಆಪ್ತರ ಅರ್ಜಿ ವಿಚಾರಣೆ ‌‌ಕೂಡ ಇಂದು ನಡೆಯಲಿದೆ.

Last Updated : Sep 24, 2020, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.