ಬೆಂಗಳೂರು: ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಲೂನ್ ಶಾಪ್ಗಳು ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ನಗರದಲ್ಲಿ ಶಾಪ್ಗಳು ತೆರೆದಿದ್ದು, ಕೆಲಸ ಆರಂಭಿಸಿವೆ.
ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಎಲ್ಲಾ ಶಾಪ್ಗಳು ತೆರೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಇಂದು ನಗರದಲ್ಲಿ ಸಲೂನ್ ಶಾಪ್ಗಳು ಆರಂಭವಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣೆ ಸಮೀಪದಲ್ಲಿರುವ ಇಪ್ರೆಸಿವ್ ಫ್ಯಾಮಿಲಿ ಸಲೂನ್ ಅಂಡ್ ಶಾಪ್ನಲ್ಲಿನ ಸಿಬ್ಬಂದಿ ತಮ್ಮ ಮತ್ತು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸರ್ಕಾರದ ಷರತ್ತಿನ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಸಲೂನ್ ಶಾಪ್ ಸಿಬ್ಬಂದಿ, ಪಿಪಿಇ ಕಿಟ್ ಹಾಗೂ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಶಾಪ್ನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದು, ಅಂಗಡಿಗೆ ಬರುವಂತಹ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕೆಂದು ಶಾಪ್ನ ಮುಂದೆ ಬೋರ್ಡ್ ಕೂಡ ಹಾಕಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪಿಪಿಇ ಧರಿಸಿ ಕರ್ತವ್ಯ ಮಾಡುತ್ತಿರುವುದು ನೋಡಿದ್ದೆ. ಗ್ರಾಹಕರ ಹಿತದೃಷ್ಟಿ ಹಾಗೂ ನಮ್ಮ ಆರೋಗ್ಯದ ದೃಷ್ಟಿಯಿಂದ ಪಿಪಿಇ ಕಿಟ್ ಬಳಸುವುದು ಉತ್ತಮ ಎಂದುಕೊಂಡು ಈ ಕಿಟ್ ಬಳಸಿದ್ದೇವೆ ಎಂದು ಶಾಪ್ ಮಾಲೀಕ ರವಿ ಈಟಿವಿ ಭಾರತ್ಗೆ ತಿಳಿಸಿದರು.