ETV Bharat / state

ಕೋರ್ ಕಮಿಟಿ ಜೊತೆ ಚರ್ಚಿಸಿ ಪದಾಧಿಕಾರಿಗಳ ನೇಮಕ ಮಾಡಬೇಕಿತ್ತು: ಸದಾನಂದಗೌಡ ಅಸಮಾಧಾನ

author img

By ETV Bharat Karnataka Team

Published : Dec 24, 2023, 1:40 PM IST

ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದು, ಕೋರ್ ಕಮಿಟಿ ಜೊತೆ ಚರ್ಚಿಸಿ ಪದಾಧಿಕಾರಿಗಳ ನೇಮಕ ಮಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

sadananda gowda
ಸದಾನಂದ ಗೌಡ

ಬೆಂಗಳೂರು : ಕೋರ್ ಕಮಿಟಿ ಅನ್ನೋದು ಒಂದು ಹಿರಿಯರ ತಂಡ. ಕೋರ್ ಕಮಿಟಿ ಜೊತೆ ಚರ್ಚಿಸಿ ರಾಜ್ಯ ಪದಾಧಿಕಾರಿಗಳ ನೇಮಕದ ತೀರ್ಮಾನ ಆಗಿದ್ದರೆ ಇನ್ನೂ ಸದೃಢವಾದ ತಂಡಲು ಕಟ್ಟಲು ಸಾಧ್ಯವಾಗಬಹುದಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಮತ್ತಷ್ಟು ಒತ್ತು ಕೊಡಬೇಕಿತ್ತು ಎಂದು ಬಿಜೆಪಿ ಹೈಕಮಾಂಡ್ ಬಗ್ಗೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಈ ಟೀಮ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಆದರೆ, ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಈ ತಂಡವನ್ನು ಅಸಮರ್ಥ ಅಂತಾ ಹೇಳಲ್ಲ. ಆದರೆ, ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲಾ ಮಾಡೋಕು ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು‌ ತಿಳಿದುಕೊಳ್ಳಬೇಕಿತ್ತು. ಅವರಿಂದ ಹೊಸ ವಿಷಯ ತಗೊಂಡು ಟೀಮ್ ಮಾಡಬೇಕಿತ್ತು. ಇವತ್ತು ಅವರನ್ನು ಕರೆದು ಮಾತಾಡಿದ್ದರೆ ಅತೃಪ್ತರ ಸಮಸ್ಯೆ ಇರುತ್ತಿರಲಿಲ್ಲ ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ : ನಾವು ಜಾತಿಗಣತಿ ವಿರೋಧಿಗಳಲ್ಲ, ವರದಿಯು ವಾಸ್ತವ, ಸತ್ಯದಿಂದ ಕೂಡಿರಬೇಕು: ಸಚಿವ ಈಶ್ವರ್ ಖಂಡ್ರೆ

ಇವತ್ತಿನ ಟೀಮ್​ನಲ್ಲಿ ಕ್ರಿಯಾಶೀಲರನ್ನು ನೇಮಕ ಮಾಡಿದ್ದಾರೆ. ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮನಾಗಿ ನೇಮಕ ಆಗಬೇಕು. ಒಂದು ತಂಡ ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ಕರ್ನಾಟಕಕ್ಕೆ ವರಿಷ್ಠರು ಬರಬೇಕು, ದೆಹಲಿಯಲ್ಲಿ ಕೂತು ತೀರ್ಮಾನ ಮಾಡೋದು ಸರಿಯಲ್ಲ ಎಂದರು.

ಇದನ್ನೂ ಓದಿ : ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ : ಬಿಎಸ್ ಯಡಿಯೂರಪ್ಪ

ಯಾಕೋ ಏನೋ ಗೊತ್ತಿಲ್ಲ, ಹಿರಿಯರ ವೈಫಲ್ಯದಿಂದ ಸೋಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿದೆ. ದಯವಿಟ್ಟು ಅದನ್ನು ಅಲ್ಲಿಗೆ ಬಿಟ್ಟು ಬಿಡಿ, ಸೋಲಿನ‌ ಬಗ್ಗೆ ಇನ್ನೂ ಆತ್ಮವಲೋಕನವನ್ನೇ ಮಾಡಿಲ್ಲ, ಮೊದಲು ಈ ಕೆಲಸವನ್ನು ವರಿಷ್ಠರು ಹಿರಿಯ ನಾಯಕರ ಜೊತೆ ಮಾತಾಡಬೇಕಿತ್ತು. ಇನ್ಮುಂದೆ ಆದರೂ ವರಿಷ್ಠರು ರಾಜ್ಯಕ್ಕೆ ಬರಬೇಕು, ಎಲ್ಲರ ಜೊತೆ ಮಾತಾಡಬೇಕು ಎಂದು ಸದಾನಂದಗೌಡ ಹೇಳಿದರು.

ಇದನ್ನೂ ಓದಿ : ನಮ್ಮವರು ಪಕ್ಷ ಬಿಡುತ್ತಿರುವುದು ನಿಜ, ಸೋಲಿನ ನಂತರ ಪಕ್ಷ ಕಟ್ಟುವಲ್ಲಿ ನಾವು ವಿಫಲ: ಸದಾನಂದ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.