ಉಡುಪಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ದೇಶದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಸೆಲೆಬ್ರಿಟಿಗಳು ಕೂಡಾ ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಅದರಂತೆ ತಮಿಳು ಚಿತ್ರರಂಗದ ಖ್ಯಾತ ತಾರಾ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ದಂಪತಿ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು. ನಟ ಸೂರ್ಯ ಹಾಗೂ ಜ್ಯೋತಿಕಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು . ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾ ಅವರಿಗೆ ಸಾಕಷ್ಟು ಅಭಿಮಾನಿಗಳಿರೋದು ನಿಮಗೆ ತಿಳಿದಿರುವ ವಿಚಾರ.
ಸೌತ್ ಸೂಪರ್ ಸ್ಟಾರ್ ಸೂರ್ಯ ಮುಖ್ಯಭೂಮಿಕೆಯ ಲೇಟೆಸ್ಟ್ ಸಿನಿಮಾ 'ಕಂಗುವ'. ಖ್ಯಾತ ನಿರ್ದೇಶಕ ಶಿವ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶನದ ಫ್ಯಾಂಟಸಿ ಪೀರಿಯಡ್ ಆ್ಯಕ್ಷನ್ ಸಿನಿಮಾ 'ಕಂಗುವ' ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಬಿಡುಗಡೆಗೂ ಮುನ್ನ ಇದ್ದ ಸದ್ದು ಈಗಿಲ್ಲ. ಭವ್ಯ ದೃಶ್ಯಗಳು, ಸ್ಟಾರ್ ಪವರ್ನಿಂದ ಕೂಡಿದ್ದರೂ ಚಿತ್ರದ ಕಲೆಕ್ಷನ್ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ. ತೆರೆಕಂಡ 12ನೇ ದಿನದಂದು, ಕಂಗುವ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಹೆಚ್ಚಿನ ಕುಸಿತ ಕಂಡಿದೆ.
ಇದನ್ನೂ ಓದಿ: ಡಾಲಿ ಧನಂಜಯ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ನುಡಿದ ಭವಿಷ್ಯ ನಿಜವಾಗುತ್ತಾ?: ಏನದು ಆ ಮಾತು?
ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಂಗುವ ಕಳೆದ ದಿನ 37 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ಪ್ರಮುಖ ಮಾರುಕಟ್ಟೆಯಾಗಿರುವ ತಮಿಳು ಆವೃತ್ತಿಯಿಂದ 16 ಲಕ್ಷ ರೂಪಾಯಿ ಬಂದಿದೆ. ಕಂಗುವ ತನ್ನ ಮೊದಲ 12 ದಿನಗಳಲ್ಲಿ, ಭಾರತದಲ್ಲಿ ಒಟ್ಟು 67.87 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಮೊದಲ ವಾರದ ಪ್ರದರ್ಶನ ನಿರೀಕ್ಷೆಗಿಂತಲೂ ಕಡಿಮೆ ಆಗಿದ್ದು, 64.3 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ತಮಿಳುನಾಡಿನಿಂದಲೇ ಒಟ್ಟು 35.63 ಕೋಟಿ ರೂಪಾಯಿ ಬಂದಿದೆ. ಎರಡನೇ ವಾರದಲ್ಲಿ, ವಿಶೇಷವಾಗಿ 12ನೇ ದಿನದಂದು ಕಲೆಕ್ಷನ್ನಲ್ಲಿ ಕುಸಿತ ಕಂಡಿದ್ದು, 100 ಕೋಟಿ ರೂಪಾಯಿ ದಾಟುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸದ್ಯ ಕಂಗುವ ಸಿನಿಮಾ ವೀಕ್ಷಿಸಿದವ್ರು ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಎತ್ತಿದ್ದಾರೆ.
ಇದನ್ನೂ ಓದಿ: Watch: ಮುಂಬೈನಲ್ಲಿ ಮಕ್ಕಳೊಂದಿಗೆ ಯಶ್-ರಾಧಿಕಾ; ಕೆಜಿಎಫ್ ಸ್ಟಾರ್ ಕಾಲಿಗೆ ಬಿದ್ದ ಅಭಿಮಾನಿ