ETV Bharat / state

Robotic Surgery: ಪಾಕ್‌ನಲ್ಲಿ ಕಿಡ್ನಿ ಕಸಿ ನಂತರ ಮೂತ್ರನಾಳ ಸೋಂಕಿಗೆ ತುತ್ತಾಗಿದ್ದ ಮಹಿಳೆಗೆ ಬೆಂಗಳೂರಿನಲ್ಲಿ ರೋಬೋಟಿಕ್‌ ಶಸ್ತ್ರಚಿಕಿತ್ಸೆ - Robotic surgery by fortis hospital

Robotic Surgery: ಪಾಕಿಸ್ತಾನದಲ್ಲಿ ಕಿಡ್ನಿ ಕಸಿ ಮಾಡಿಕೊಂಡು ಮೂತ್ರನಾಳದ ಸೋಂಕಿಗೆ ತುತ್ತಾಗಿದ್ದ ಒಮಾನಿ ಮಹಿಳೆಗೆ ಬೆಂಗಳೂರಿನ ಫೋರ್ಟಿಸ್​ ಆಸ್ಪತ್ರೆಯಲ್ಲಿ ಯಶಸ್ವಿ ಸಂಕೀರ್ಣ ರೋಬೋಟಿಕ್​ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

robotic-surgery-for-omani-woman-in-bengaluru
ಪಾಕಿಸ್ತಾನದಲ್ಲಿ ಕಿಡ್ನಿ ಕಸಿ ನಂತರ ಮೂತ್ರನಾಳ ಸೋಂಕಿಗೆ ತುತ್ತಾಗಿದ್ದ ಮಹಿಳೆಗೆ ಬೆಂಗಳೂರಿನಲ್ಲಿ ರೋಬೋಟಿಕ್‌ ಶಸ್ತ್ರಚಿಕಿತ್ಸೆ
author img

By

Published : Aug 10, 2023, 4:12 PM IST

ಬೆಂಗಳೂರು : ದೇಹಕ್ಕೆ ಹೊಂದಿಕೆಯಾಗದ ಮೂತ್ರ ಪಿಂಡದ ಕಸಿ ಮಾಡಿಸಿಕೊಂಡು ನಂತರ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ 51 ವರ್ಷದ ಒಮಾನಿ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ರೋಬೋಟ್‌ ಸಹಾಯದಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮೂತ್ರಶಾಸ್ತ್ರ ತಜ್ಞ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಡಾ.ಮೋಹನ್ ಕೇಶವಮೂರ್ತಿ ಅವರ ತಂಡ ಶಸ್ತ್ರಚಿಕಿತ್ಸೆ ನೆರವೇರಿಸಿತು.

ಈ ಕುರಿತು ಮಾತನಾಡಿರುವ ಡಾ. ಮೋಹನ್‌ ಕೇಶವಮೂರ್ತಿ, 51 ವರ್ಷದ ರೇಷ್ಮಾ ಒಂದು ವರ್ಷದ ಹಿಂದೆ ಕೆಲ ಕಾರಣದಿಂದ ಮೂತ್ರಪಿಂಡ ಕಳೆದುಕೊಂಡು, ಪಾಕಿಸ್ತಾನದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದರೆ, ಇದು ಇವರ ದೇಹ ಹಾಗೂ ರಕ್ತಕ್ಕೆ ಹೊಂದಿಕೆಯಾಗಿರಲಿಲ್ಲ. ಮೂತ್ರನಾಳ ಕಸಿ ಮಾಡುವಾಗ ಮೂತ್ರನಾಳದ ಸ್ಟೆಂಟಿಂಗ್ ಅನ್ನು (ಡಬಲ್ ಜೆ ಸ್ಟೆಂಟ್) ಅಳವಡಿಸಲಾಗಿತ್ತು. ಮೂತ್ರವಿಸರ್ಜನೆಗೆಂದು ಪ್ಲಾಸ್ಟಿಕ್‌ ಟ್ಯೂಬ್‌ ಅಳವಡಿಸಲಾಗಿತ್ತು. ಇದು ತೀರ ತೆಳುವಾದ್ದರಿಂದ ಕೇವಲ ಒಂದು ವರ್ಷದಲ್ಲಿಯೇ ಆ ಡಬಲ್‌ ಜೆ ಸ್ಟಂಟ್‌ ಮುರಿದಿತ್ತು. ಮೊದಲೇ ಹೊಂದಿಕೆಯಾಗದ ಮೂತ್ರಪಿಂಡವಾದ್ದರಿಂದ ಸ್ಟಂಟ್‌ ಮುರಿದು, ರೇಷ್ಮಾ ಅವರಿಗೆ ಮೂತ್ರಕೋಶದ ಸೋಂಕು ಹರಡಲು ಶುರುವಾಗಿತ್ತು. ಮುರಿದು ಹೋದ ಸ್ಟಂಟ್‌ನನ್ನು ತೆಗೆದು ಹಾಕುವುದು ಅನಿವಾರ್ಯವಾಗಿತ್ತು. ಆದರೆ, ಇದನ್ನು ತೆಗೆದು ಹಾಕಲು ಪಾಕಿಸ್ತಾನದಲ್ಲಿ ಯಾವ ಆಸ್ಪತ್ರೆಯಲ್ಲೂ ಅತ್ಯಾಧುನಿಕ ಆಸ್ಪತ್ರೆ ಸಿಗದೇ ರೋಗಿ ಸಮಸ್ಯೆ ಎದುರಿಸಿದ್ದರು. ಸಾಕಷ್ಟು ಶಸ್ತ್ರಚಿಕಿತ್ಸೆಗೆ ಒಳಗಾದರೂ ಸ್ಟಂಟ್‌ ತೆರವು ಅಸಾಧ್ಯವಾಗಿತ್ತು ಎಂದು ಹೇಳಿದ್ದಾರೆ.

ಈ ಸಂಬಂಧ ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ರೇಷ್ಮಾರಿಗೆ ನಮ್ಮಲ್ಲಿರುವ ರೋಬೋಟಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು, ಮೂರು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ವೇಳೆ ಬಳಿಕ ಮುರಿದು ಹೋಗಿದ್ದ ಸ್ಟಂಟ್‌ನನ್ನು ಹೊರ ತೆಗೆದು, ಕಸಿ ಮಾಡಲಾದ ಮೂತ್ರಪಿಂಡದಿಂದಲೇ ನೇರವಾಗಿ ಮೂತ್ರ ವಿಸರ್ಜನೆಗೆ ತೊಂದರೆಯಾದಂತೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಸಂಪೂರ್ಣ ಗುಣಮುಖರಾಗಿದ್ದು, ಮೂತ್ರಕೋಶ ಸೋಂಕಿನಿಂದಲೂ ಮುಕ್ತರಾಗಿ ಆರೋಗ್ಯದಿಂದ್ದಾರೆ ಎಂದು ತಿಳಿಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆ ಬಿಸ್ನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, "ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟವು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಮಹಿಳೆಯು ಭಾರತದಲ್ಲಿ ಅದರಲ್ಲೂ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿ, ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದು ನಮ್ಮ ಆಸ್ಪತ್ರೆಗೆ ಹೆಮ್ಮೆಯ ವಿಚಾರ" ಎಂದರು.

ಇದನ್ನೂ ಓದಿ : ಆಟವಾಡುತ್ತಾ ಟಿವಿ ರಿಮೋಟ್​ ಬ್ಯಾಟರಿ ನುಂಗಿದ ಎರಡು ವರ್ಷದ ಮಗು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.