ETV Bharat / state

ಬೆಂಗಳೂರಿನಲ್ಲಿ ಸಂಬಂಧಿಯಿಂದಲೇ ಯುವತಿ ಅಪಹರಣ ಯತ್ನ; ಆರೋಪಿ ಪೊಲೀಸ್ ವಶಕ್ಕೆ - ಸಂಬಂಧಿಕರಿಂದಲೇ ನಡೆದಿರುವ ಅಪಹರಣ

ತಂದೆಯ ಮರಣಾನಂತರ ಅವರ ನೌಕರಿ ಪಡೆದ ಯುವತಿಯ ಅಪಹರಣಕ್ಕೆ ಯತ್ನಿಸಿದ ಸಂಬಂಧಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

relative who tried to kidnap the young woman  young woman is in police custody  Relative in Police custody  ಅಪಹರಣಕ್ಕೆ ಯತ್ನಿಸಿದ ಸಂಬಂಧಿ ಪೊಲೀಸ್ ವಶಕ್ಕೆ  ತಂದೆಯ ಮರಣಾನಂತರ ಅವರ ಕೆಲಸ ಪಡೆದ ಯುವತಿ  ಸಂಬಂಧಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ  ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು  ಸಂಬಂಧಿಕರಿಂದಲೇ ನಡೆದಿರುವ ಅಪಹರಣ  ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿ
ಯುವತಿಯ ಅಪಹರಣಕ್ಕೆ ಯತ್ನಿಸಿದ ಸಂಬಂಧಿ ಪೊಲೀಸ್ ವಶಕ್ಕೆ
author img

By

Published : May 25, 2023, 8:00 AM IST

ಬೆಂಗಳೂರು : ಯುವತಿಯನ್ನು ಅಪಹರಿಸಲು ಯತ್ನಿಸಿದ ಆರೋಪಿಗಳನ್ನು ಕೆಐಎಸ್ಐಎಫ್ ಹಾಗೂ ಸಿಆರ್​ಪಿಎಫ್ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಈ ಘಟನೆ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಏಳು ಗಂಟೆಯ ಸುಮಾರಿಗೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಆರೋಪಿಗಳು ವಿಧಾನಸೌದ ಮೆಟ್ರೋ ನಿಲ್ದಾಣದ ಬಳಿ ಆಕೆಯನ್ನು ಏಕಾಏಕಿ ಎಳೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆಗ ಸ್ಥಳದಲ್ಲಿದ್ದ ಸಿಆರ್​ಪಿಎಫ್ ತಂಡ ಅಲರ್ಟ್ ಆಗಿದ್ದು ತಕ್ಷಣ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

relative who tried to kidnap the young woman  young woman is in police custody  Relative in Police custody  ಅಪಹರಣಕ್ಕೆ ಯತ್ನಿಸಿದ ಸಂಬಂಧಿ ಪೊಲೀಸ್ ವಶಕ್ಕೆ  ತಂದೆಯ ಮರಣಾನಂತರ ಅವರ ಕೆಲಸ ಪಡೆದ ಯುವತಿ  ಸಂಬಂಧಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ  ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು  ಸಂಬಂಧಿಕರಿಂದಲೇ ನಡೆದಿರುವ ಅಪಹರಣ  ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿ
ಸಿಆರ್​ಪಿಎಫ್ ಸಿಬ್ಬಂದಿಯೊಂದಿಗೆ ಆರೋಪಿ

ಸಂಬಂಧಿಕರಿಂದಲೇ ನಡೆದ ಅಪಹರಣ: ಕಳೆದ ಕೆಲವು ತಿಂಗಳ ಹಿಂದೆ ಯುವತಿಯ ತಂದೆ ನಿಧನ ಹೊಂದಿದ್ದರು. ಅವರು ಮಾಡುತ್ತಿದ್ದ ಎಫ್‌ಡಿಎ ಕೆಲಸ ಮಗಳಿಗೆ ದೊರೆತಿತ್ತು. ಇದೇ ವಿಚಾರ ಯುವತಿಯ ತಂದೆಯ ಎರಡನೇ ಪತ್ನಿಯ ಕಿರಿಯ ಸಹೋದರನ ಸಿಟ್ಟಿಗೆ ಗುರಿಯಾಗಿತ್ತು. ಎಫ್‌ಡಿಎ ಕೆಲಸ ತನ್ನ ಸಹೋದರಿಗೆ ಸಿಗಬೇಕಿತ್ತು ಎಂದು ಕ್ಯಾತೆ ತೆಗೆದಿದ್ದರು. ಅಲ್ಲದೇ ಆ ಯುವತಿಯನ್ನು ಆರೋಪಿ ಮದುವೆಯಾಗಲು ಇಚ್ಛಿಸಿದ್ದನಂತೆ. ಆದರೆ ಯುವತಿಗೆ ಆತನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಹೀಗಾಗಿ ವಿಧಾನಸೌದ ಮೆಟ್ರೋ ಸ್ಟೇಷನ್ ಬಳಿ ಯುವತಿಯನ್ನು ಅಪಹರಿಸಲು‌ ಆರೋಪಿ ಯತ್ನಿಸಿದ್ದಾನೆ. ಆಗ ಸ್ಥಳದಲ್ಲೇ ಇದ್ದ ಸಿಆರ್​ಪಿಎಫ್ ಹಾಗೂ ಕೆಎಸ್ಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ವಿಧಾನಸೌಧ ಠಾಣಾ ಪೊಲೀಸರಿಗೆ ಒಪ್ಪಿಸಿದರು. ಈ ಘಟನೆ ಕುರಿತಂತೆ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳದ ಚಿತ್ರ

ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ಶಿವಾಜಿನಗರ ಠಾಣಾ ಮಹಿಳಾ ಪಿಎಸ್ಐ ಲೋಕಾಯುಕ್ತ ಬಲೆಗೆ

4ನೇ ಮಹಡಿಯಿಂದ ಬಿದ್ದು ಯುವಕ ಸಾವು: ಪ್ರಕರಣವೊಂದರಲ್ಲಿ ಬಂಧಿಸಲು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರನ್ನು ಕಂಡ ಯುವಕನೊಬ್ಬ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು. ಮೊಹಮ್ಮದ್ ಹುಸೇನ್ (31) ಮೃತ ಯುವಕ ಎಂದು ಗುರುತಿಸಲಾಗಿದೆ. ಸ್ಥಳೀಯ ಯುವತಿಗೆ ಬೆದರಿಕೆ ಹಾಕಿದ ಆರೋಪದಡಿ ಮೊಹಮ್ಮದ್ ಹುಸೇನ್ ವಿರುದ್ಧ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಬೊಮ್ಮನಹಳ್ಳಿಯ ಬೇಗೂರು ರಸ್ತೆಯಲ್ಲಿರುವ ಮನೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿ ತೆರಳಿದ್ದರು. ಪೊಲೀಸರನ್ನು ಕಂಡ ಮೊಹಮ್ಮದ್ ಹುಸೇನ್, ಮನೆಯ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಪರಿಣಾಮ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.