ETV Bharat / state

ರಾಜ್ಯ ಸರ್ಕಾರ ಕಲ್ಯಾಣ ಮತ್ತು ಅಭಿವೃದ್ಧಿ ನಿಧಿಗಳನ್ನು ಬಳಸಿಕೊಳ್ಳಲು ಮರೆತಿದೆ: ಸುರ್ಜೇವಾಲಾ ಬೇಸರ - ಕಲ್ಯಾಣ ಮತ್ತು ಅಭಿವೃದ್ಧಿ ನಿಧಿ

ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ 60 ಕೋಟಿ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ಒಂದು ಬಿಡಿಗಾಸನ್ನೂ ಖರ್ಚು ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ
author img

By

Published : Mar 27, 2023, 3:28 PM IST

ಬೆಂಗಳೂರು: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ರಾಜ್ಯ ಬಿಜೆಪಿ ಸರ್ಕಾರ ಬಳಸಿಕೊಳ್ಳದೆ ಕಲ್ಯಾಣ ಕರ್ನಾಟಕವನ್ನು ಮರೆತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ಬೊಮ್ಮಾಯಿ ಸರ್ಕಾರವು 41,942 ಕೋಟಿ ರೂ. “ಕಲ್ಯಾಣ ಮತ್ತು ಅಭಿವೃದ್ಧಿ ನಿಧಿಗಳನ್ನು” ಬಳಸಿಕೊಳ್ಳಲು ಮರೆತಿದೆ. ಕಲ್ಯಾಣ ಕರ್ನಾಟಕ ಪ್ರದೇಶ, ಉನ್ನತ ಶಿಕ್ಷಣ, ಕಿಸಾನ್, ಸಬ್ಸಿಡಿ ಪಂಪ್ ಸೆಟ್‌ಗಳು, ಆರೋಗ್ಯ ರಕ್ಷಣೆ ಮತ್ತು ಹೆಚ್ಚಿನವುಗಳಿಗಾಗಿ ಬೃಹತ್ ಬಳಕೆಯಾಗದ ಮೊತ್ತಗಳು. ಇದು ನಾಚಿಕೆಗೇಡಿನ ಮತ್ತು ಕ್ಷಮಿಸಲಾಗದ ವಿಚಾರ. ಕರ್ನಾಟಕ ಉಳಿಸಿ, ಬಿಜೆಪಿಯನ್ನು ಧಿಕ್ಕರಿಸಿ ಎಂದು ವಿವರಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ, ಪ್ರಾಥಮಿಕ ಆರೋಗ್ಯ ಸೌಲಭ್ಯ, ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಕಿಸಾನ್, ಕೃಷಿ ಮೂಲಸೌಕರ್ಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ, ಪ್ರಾಥಮಿಕ ಆರೋಗ್ಯ ಸೌಲಭ್ಯ ಬಲಪಡಿಸುವುದು, ವಿದ್ಯಾರ್ಥಿಗಳ ರಿಯಾಯಿತಿ ಪಾಸ್, ಕುಟೀರ ಭಾಗ್ಯ, ನೀರಾವರಿ ಪಂಪ್‌ಸೆಟ್, ಕನಿಷ್ಠ ಬೆಂಬಲ ಬೆಲೆಗಳಂತಹ ಮಹತ್ತರ ಕಾರ್ಯಕ್ರಮಗಳಿಗೆ 2022-23ನೇ ಸಾಲಿಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ 41,942.68 ಕೋಟಿ ರೂ.ಗಳನ್ನು ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಮಾಧ್ಯಮದಲ್ಲಿ ಬಹಿರಂಗವಾಗಿತ್ತು. ಇದನ್ನೇ ಬಳಸಿಕೊಂಡು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಕಾರ್ಯವನ್ನು ಸುರ್ಜೇವಾಲಾ ಮಾಡಿದ್ದಾರೆ.

ಇದನ್ನೂ ಓದಿ : ನೈಸ್ ಸಂಸ್ಥೆ ವಶಕ್ಕೆ ಪಡೆದ ಭೂಮಿ ರೈತರಿಗೆ ವಾಪಸ್ ನೀಡಲು ತೀರ್ಮಾನ: ಎಸ್​​.ಟಿ.ಸೋಮಶೇಖರ್

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಜಾರಿಗೊಳಿಸಿದ್ದ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೆ 400 ಕೋಟಿ ರೂ. ಒಟ್ಟು ಅನುದಾನದಲ್ಲಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರೂ 2023ರ ಫೆಬ್ರವರಿ ಅಂತ್ಯಕ್ಕೆ ಖರ್ಚು ಮಾಡಿರುವುದು ಕೇವಲ 1.91 ಕೋಟಿ ರೂ. ಮಾತ್ರ. 398.09 ಕೋಟಿ ರೂ.ಗಳನ್ನು ವೆಚ್ಚ ಮಾಡಿಲ್ಲ. ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಹದಿನೈದನೇ ಹಣಕಾಸು ಆಯೋಗದ ಅನುದಾನದಲ್ಲಿ 911.11 ಕೋಟಿ ರೂ. ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ 1,372.11 ಕೋಟಿ ರೂ. ನೀರಾವರಿ ಪಂಪ್‌ಸೆಟ್ ಭಾಗ್ಯ, ಕುಟೀರ ಜ್ಯೋತಿ, ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನಕ್ಕೆ ನೀಡಿದ್ದ 14,092 ಕೋಟಿ ರೂ. ಪೈಕಿ 9,193.67 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ ಇನ್ನೂ 4,898.94 ಕೋಟಿ ರೂ.ಗಳನ್ನು ಖರ್ಚು ಮಾಡದೆಯೇ ಬಾಕಿ ಉಳಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ನಾವು ಸುಮ್ಮನೆ ಇದ್ದರೂ 50 ಸೀಟ್ ಗೆಲ್ಲುತ್ತೇವೆ: ಹೆಚ್ ಡಿ ಕುಮಾರಸ್ವಾಮಿ

ಪಿಎಂ ಕಿಸಾನ್ ಸಮ್ಮಾನ್​​ ಯೋಜನೆಯಡಿ ಫೆಬ್ರವರಿವರೆಗೆ ಒಂದು ರೂ. ಅನುದಾನ ಕೂಡ ಬಿಡುಗಡೆ ಮಾಡಿಲ್ಲ- ಸುರ್ಜೇವಾಲಾ.. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 1,000 ಕೋಟಿ ರೂ. ಅಂದಾಜಿಸಿದ್ದಾದರೂ ಫೆಬ್ರವರಿ ಅಂತ್ಯಕ್ಕೆ ಒಂದು ರೂ. ಕೂಡ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮದಲ್ಲಿ 1,000 ಕೋಟಿ ರೂ. ವೆಚ್ಚವಾಗಿಲ್ಲ. ಗ್ರಾಮೀಣ ಸುಮಾರ್ಗ ಯೋಜನೆಗೆ 2,217.13 ಕೋಟಿ ರೂ. ಅಂದಾಜಿಸಿತ್ತು. ಈ ಪೈಕಿ 903.38 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಒಟ್ಟು 8,529.86 ಕೋಟಿ ರೂ. ಅನುದಾನದ ಪೈಕಿ 1,996.79 ಕೋಟಿ ರೂ. ಬಿಡುಗಡೆಯಾಗಿದ್ದರೂ 4,101.26 ಕೋಟಿ ರೂ. ಖರ್ಚು ಮಾಡಿದೆ. ಒಟ್ಟು ಅನುದಾನದ ಪೈಕಿ ವೆಚ್ಚಕ್ಕೆ 4,428.60 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

ಸರ್ಕಾರದ ವಿರುದ್ಧ ಟ್ವೀಟ್ ದಾಳಿ : ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ 60 ಕೋಟಿ ರೂ. ಬಿಡುಗಡೆಯಾಗಿದ್ದರೂ ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ಕರ್ನಾಟಕ ನೀರಾವರಿ ನಿಗಮದಲ್ಲಿ 4,758.77 ಕೋಟಿ ರೂ. ಅನುದಾನದ ಪೈಕಿ 3,022.46 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ 3,240.41 ಕೋಟಿ ರೂ. ವೆಚ್ಚವಾಗಿದ್ದು ಇನ್ನೂ ವೆಚ್ಚಕ್ಕೆ 1,518.36 ಕೋಟಿ ರೂ. ಬಾಕಿ ಉಳಿದಿದೆ ಎಂಬಿತ್ಯಾದಿ ಮಾಹಿತಿ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಇದನ್ನೇ ಬಳಸಿಕೊಂಡು ಸುರ್ಜೇವಾಲಾ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ಮಾಡಿದ್ದಾರೆ. ಇದೂ ಅಲ್ಲದೇ ಇನ್ನೂ ಸುದೀರ್ಘ ಮಾಹಿತಿಯನ್ನು ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ಸರ್ಕಾರ ಇದಕ್ಕೆ ಉತ್ತರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಕೆ.ಆರ್ ಪೇಟೆ ದೇವರಾಜ್ ಕಾಂಗ್ರೆಸ್ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.