ಮಹದೇವಪುರ, ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕಾಗಿ ವೈಟ್ ಫೀಲ್ಡ್ನ ಇ.ಎಲ್.ವಿ ಭಾಸ್ಕರ್ 14 ಲಕ್ಷ ರೂಪಾಯಿ ಹಾಗೂ ರವಿ ಆಚಾರ್ 3 ಲಕ್ಷ ರೂಪಾಯಿ ಚೆಕ್ ನೀಡಿದ್ದು, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಸಿಎಂ ಇಬ್ರಾಹಿಂ ಜತೆ ಸಿದ್ದರಾಮಯ್ಯ ಸುದೀರ್ಘ ಚರ್ಚೆ: ಮನವೊಲಿಕೆ ಯತ್ನ..?
ಕ್ಷೇತ್ರದ ಕೊಡತಿ ಪಂಚಾಯತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಅಯೋಧ್ಯೆ ನಿರ್ಮಾಣದ ಚೆಕ್ ಪಡೆದು ಮಾತನಾಡಿದ ಅರವಿಂದ್ ಲಿಂಬಾವಳಿ, ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಮಹದೇವಪುರ ಕ್ಷೇತ್ರದ ಜನರು, ರಾಮಭಕ್ತರು ಹೆಚ್ಚಿನ ನಿಧಿ ಸಮರ್ಪಣೆಯ ಮಾಡುತ್ತಿರುವುದು ಕಂಡುಬಂದಿದೆ. ಇನ್ನೂ ನಿಧಿ ಸಮರ್ಪಣೆ ಮಾಡುವವರು ಮಾಡಬಹುದು ಎಂದರು.
ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಮನೋಹರ ರೆಡ್ಡಿ, ಯುವ ಮುಖಂಡರಾದ ಎಲ್.ರಾಜೇಶ್, ಪಂಚಾಯತಿ ಅಧ್ಯಕ್ಷ , ಉಪಾಧ್ಯಕ್ಷರು ಮತ್ತಿತರರು ಹಾಜರಿದ್ದರು.