ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ನೂತನ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ (55) ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಸೆ.2 ರಂದು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ರೋಗ ಲಕ್ಷಣ ಹೆಚ್ಚಾದ ಹಿನ್ನಲೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರ ಜತೆಗೆ ಬಹು ಅಂಗಾಂಗ ವೈಫಲ್ಯದಿಂದಾಗಿ ಜೀವ ರಕ್ಷದ ವ್ಯವಸ್ಥೆ ನೀಡಲಾಗಿತ್ತು.ಕಳೆದ ಎರಡು ದಿನದಿಂದ ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಎಲ್ಲ ರೀತಿಯ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಶೋಕ್ ಗಸ್ತಿ ನಿನ್ನೆ ರಾತ್ರಿ 10:30ಕ್ಕೆ ಮೃತಪಟ್ಟಿದ್ದಾರೆ.
ನಗರಸಭೆಯಿಂದ ರಾಜ್ಯಸಭೆ... ಶಿಸ್ತಿನ ಸಿಪಾಯಿ ಅಶೋಕ್ ಗಸ್ತಿ ನಡೆದು ಬಂದ ದಾರಿ
ಅಶೋಕ್ ಗಸ್ತಿ ನಿಧನದ ಸುದ್ದಿಯನ್ನು ಮಣಿಪಾಲ ಆಸ್ಪತ್ರೆ ಡೈರೆಕ್ಟರ್ ಖಚಿತಪಡಿಸಿದ್ದಾರೆ. ಕೋವಿಡ್-19 ದೃಢಪಟ್ಟ ಹಿನ್ನಲೆಯಲ್ಲಿ ಸೆ.2 ರಂದು ಅಶೋಕ್ ಗಸ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಕೋವಿಡ್-19 ನ್ಯುಮೋನಿಯಾದಿಂದ ಅವರು ಮೃತಪಟ್ಟಿದ್ದಾರೆ. ಜೀವ ರಕ್ಷರ ವ್ಯವಸ್ಥೆ ಕಲ್ಪಿಸಿ ತಜ್ಞರ ತಂಡ ಚಿಕಿತ್ಸೆ ನೀಡುತ್ತಿತ್ತು ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಣಿಪಾಲ ಆಸ್ಪತ್ರೆ ನಿರ್ದೇಶಕ ಡಾ.ಮನೀಶ್ ರೈ ಅಧಿಕೃತ ಮಾಹಿತಿ ನೀಡಿದ್ದಾರೆ.