ETV Bharat / state

ರಾಜರಾಜೇಶ್ವರಿಯ ಕೃಪಾಶೀರ್ವಾದ ಯಾರಿಗೆ?: ಕ್ಷೇತ್ರದಲ್ಲಿ ಕೈ-ಕಮಲ-ತೆನೆ ಪಕ್ಷಗಳ ಪೈಪೋಟಿ - ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ

ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಯಾರತ್ತ ಚಿತ್ತ ಹರಿಸಿದ್ದಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ.

rajarajeshwari nagar
ರಾಜರಾಜೇಶ್ವರಿನಗರ ಕ್ಷೇತ್ರ
author img

By

Published : May 7, 2023, 9:25 AM IST

Updated : May 7, 2023, 11:06 AM IST

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ನಡೆದ ಒಂದು ಉಪಚುನಾವಣೆ ಸೇರಿದಂತೆ ನಾಲ್ಕು ಚುನಾವಣೆಗಳ ಪೈಕಿ ಮೂರರಲ್ಲಿ ಗೆದ್ದಿರುವ ಮುನಿರತ್ನಗೆ ಈ ಸಲದ ವಿಧಾನಸಭೆ ಚುನಾವಣೆ ಕೊಂಚ ಸವಾಲಾಗಲಿದೆ ಎಂದು ಹೇಳಲಾಗುತ್ತಿದೆ.

ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಮುನಿರತ್ನ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಹಾಗೂ ಒಮ್ಮೆ (ಉಪಚುನಾವಣೆ) ಬಿಜೆಪಿಯಿಂದ ಗೆದ್ದಿದ್ದಾರೆ. ಈ ಸಲ ಅವರು ಉಪಚುನಾವಣೆ ಸೇರಿದಂತೆ ಎರಡನೇ ಸಾರಿ ಎದುರಾಳಿಯಾಗಿರುವ ಕುಸುಮಾ ಹನುಮಂತರಾಯಪ್ಪ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ನಾರಾಯಣಸ್ವಾಮಿ ಕೂಡಾ ಸವಾಲಾಗುವ ಲಕ್ಷಣ ತೋರುತ್ತಿದೆ. ಈ ಬಾರಿಯೂ ಕಳೆದ ಸಲದಂತೆ 14 ಮಂದಿ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಪ್, ಬಿಎಸ್​ಪಿ, ಕರ್ನಾಟಕ ರಾಷ್ಟ್ರೀಯ ಸಮಿತಿ, ಕಮ್ಯುನಿಸ್ಟ್ ಪಾರ್ಟಿ, ಉತ್ತಮ ಪ್ರಜಾಕೀಯ, ಜೆಡಿಯು ಹಾಗು ಜೈ ಮಹಾ ಭಾರತ್ ಪಕ್ಷದ ಅಭ್ಯರ್ಥಿಗಳೊಂದಿಗೆ ಪಕ್ಷೇತರರೂ ಅಖಾಡದಲ್ಲಿದ್ಗಾರೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಶ್ರೀನಿವಾಸ್ ಇಲ್ಲಿ ಗೆಲುವು ಸಾಧಿಸಿದ್ದರು. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಮುನಿರತ್ನ ಗೆಲುವು ಪಡೆದಿದ್ದರು. 2019ರಲ್ಲಿ ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಗೆದ್ದರು. ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಮುನಿರತ್ನ, ಸದ್ಯಕ್ಕೆ ಕ್ಷೇತ್ರದ ಗೆಲುವಿನ ಫೇವರೆಟ್ ಅಭ್ಯರ್ಥಿ. ಆದರೆ, ಇತರರೂ ಸವಾಲೊಡ್ಡುವ ಸಾಧ್ಯತೆ ಇದೆ.

ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಒಂದಿಷ್ಟು ಅಭಿವೃದ್ಧಿ ಆಗಿರುವುದು ಗೊತ್ತಾಗುತ್ತದೆ. ಕಾಂಕ್ರಿಟ್ ರಸ್ತೆಗಳು, ಮೈದಾನಗಳ ಅಭಿವೃದ್ಧಿ, ಉದ್ಯಾನ, ಒಳಚರಂಡಿ, ರಾಜಕಾಲುವೆ ನಿರ್ಮಾಣ, ಸುಸಜ್ಜಿತ ಬಡಾವಣೆಗಳ ನಿರ್ಮಾಣ ಆಗಿದೆ. ಒಂದೆಡೆ ಮೈಸೂರು ಮುಖ್ಯರಸ್ತೆ, ಇನ್ನೊಂದೆಡೆ ಪ್ರಮುಖ ವಾಣಿಜ್ಯ ತಾಣವಾಗಿ ಅಭಿವೃದ್ಧಿ ಆಗಿರುವ ಕ್ಷೇತ್ರಕ್ಕೆ ರಾಜಕಾಲುವೆ ಹಾಗೂ ಮಳೆಗಾಲದಲ್ಲಿ ನೀರು ಉಕ್ಕಿ ಉಂಟಾಗುವ ಸಮಸ್ಯೆ ಅತ್ಯಂತ ದೊಡ್ಡದು. ಇದರ ನಿವಾರಣೆಗೆ ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ ಅತ್ಯಂತ ವಿಶಾಲವಾಗಿ ಹಾಗೂ ತ್ವರಿತವಾಗಿ ಬಡಾವಣೆ ಬೆಳೆಯುತ್ತಿದ್ದು ಮೂಲಭೂತಸೌಕರ್ಯ ಕಲ್ಪಿಸುವುದು ಸಹ ಕಠಿಣ ಕಾರ್ಯ.

rajarajeshwari-nagar-assembly-constituency-report
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರಿನಲ್ಲಿಯೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ರಾಜರಾಜೇಶ್ವರಿನಗರದ್ದು. ಭೌಗೋಳಿಕವಾಗಿ ಯಶವಂತಪುರಕ್ಕಿಂತ ದೊಡ್ಡ ಕ್ಷೇತ್ರ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗವನ್ನು ತಮ್ಮ ವ್ಯಾಪ್ತಿಯಲ್ಲಿ ಹೊಂದಿದೆ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಈ ಕ್ಷೇತ್ರ ರಾಜರಾಜೇಶ್ವರಿನಗರವಾಗಿ 2008ರಲ್ಲಿ ರೂಪುಗೊಂಡಿತು. ಕ್ಷೇತ್ರದಲ್ಲಿ 9 ವಾರ್ಡ್​ಗಳಿದ್ದು, ರಾಜರಾಜೇಶ್ವರಿನಗರ, ಲಕ್ಷ್ಮಿದೇವಿ ನಗರ, ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಹೆಚ್.ಎಂ.ಟಿ, ಲಗ್ಗೆರೆ, ಜ್ಞಾನಭಾರತಿ, ಕೊಟ್ಟಿಗೆಪಾಳ್ಯ ಆಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,78,300 ಮತದಾರರಿದ್ದಾರೆ. ಇದರಲ್ಲಿ 2,46,918 ಲಕ್ಷ ಪುರುಷ ಮತದಾರರು ಮತ್ತು 2,31,295 ಲಕ್ಷ ಮಹಿಳಾ ಮತದಾರರು ಹಾಗೂ 87 ಇತರರು ಇದ್ದು, ಒಕ್ಕಲಿಗ ಸಮುದಾಯದ್ದೇ ಪ್ರಾಬಲ್ಯವಿದೆ.

ಕ್ಷೇತ್ರದಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಯಾಗಬೇಕಾಗಿದೆ. ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕ್ಷೇತ್ರದಲ್ಲಿ ಸುಧಾರಿಸಬೇಕಿದೆ. ನೈಸ್ ರಸ್ತೆ, ಉತ್ತಮ ಆಸ್ಪತ್ರೆಗಳು, ಮಾಲ್​ಗಳು ಕ್ಷೇತ್ರದಲ್ಲಿದ್ದು, ರಿಯಲ್ ಎಸ್ಟೇಟ್ ಉದ್ಯಮ ಜೋರಾಗಿರುವ ಕ್ಷೇತ್ರವಾಗಿದೆ. ಆದರೂ, ಕ್ಷೇತ್ರದಲ್ಲಿ ಟೆಂಡರ್ ಗೋಲ್ಮಾಲ್, ನಕಲಿ ಬಿಲ್, ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣಗಳು ಹೆಚ್ಚು ಸದ್ದು ಮಾಡಿದ್ದವು.

ಸಮಸ್ಯೆಗಳು ಇಲ್ಲದ ಪ್ರದೇಶ ನಗರದಲ್ಲಿ ಎಲ್ಲಿಯೂ ಇಲ್ಲ. ಅದೇ ರೀತಿ ಇಲ್ಲಿಯೂ ಸಾಕಷ್ಟು ಸಮಸ್ಯೆ ಇದೆ. ಆದರೆ ಅಭಿವೃದ್ಧಿ ದೃಷ್ಟಿಯಲ್ಲಿ ಸಾಕಷ್ಟು ಮುಂದುವರಿದ ಕ್ಷೇತ್ರವಾಗಿದೆ. ಅನೇಕ ಶಾಪಿಂಗ್ ಮಾಲ್​ಗಳು, ವಾಣಿಜ್ಯ ಮಳಿಗೆಗಳು, ಅಪಾರ್ಟ್ಮೆಂಟ್​ಗಳು, ವಸತಿ ಪ್ರದೇಶ, ಸುಸಜ್ಜಿತ ಬಡಾವಣೆ, ಶ್ರೀಮಂತರ ಆವಾಸಸ್ಥಾನವಾಗಿ ಜನಪ್ರಿಯವಾಗಿದೆ. ಇಲ್ಲಿನ ಮತದಾರರು ಸಾಕಷ್ಟು ಪ್ರಜ್ಞಾವಂತರಿದ್ದು, ಈ ಸಾರಿ ಯಾರಿಗೆ ಮಣೆ ಹಾಕುತ್ತಾರೆ ಅನ್ನುವುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

ಪ್ರತಿಕ್ರಿಯೆ: ರಾಜರಾಜೇಶ್ವರಿನಗರದ ಜೆಡಿಎಸ್ ಅಭ್ಯರ್ಥಿ ಹಾಗೂ ವೈದ್ಯರೂ ಆಗಿರುವ ಡಾ.ವಿ.ನಾರಾಯಣಸ್ವಾಮಿ 'ಈಟಿವಿ ಭಾರತ'ದ ಜತೆ ಮಾತನಾಡಿ, "ಎರಡು ರಾಷ್ಟ್ರೀಯ ಪಕ್ಷಗಳ ಪೈಪೋಟಿ ಇದ್ದರೂ, ಇದು ಜೆಡಿಎಸ್ ಭದ್ರಕೋಟೆ. ರಾಜ್ಯಾದ್ಯಂತ ಜೆಡಿಎಸ್​ಗೆ ಗೆಲುವಿನ ಅಲೆ ಬಂದಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ನಾನು ಗೆದ್ದು ಬರುವಲ್ಲಿ ಅನುಮಾನವಿಲ್ಲ. ಈ ಭಾಗದ ಕೆಲ ಬಡಾವಣೆ ಹಿಂದುಳಿದಿವೆ. ಆಸ್ಪತ್ರೆ, ಶಾಲೆ ಬರಬೇಕು. ಉತ್ತಮ ಶಿಕ್ಷಣ ಎಲ್ಲರಿಗೂ ಸಿಗಬೇಕು. ಹೈಟೆಕ್ ಶಾಲೆ, ಆಸ್ಪತ್ರೆ ನಿರ್ಮಿಸುವುದು ನಮ್ಮ ಗುರಿ. ಕ್ಷೇತ್ರದ ಮತದಾರರು ಜೆಡಿಎಸ್ ಗೆಲ್ಲಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಹಾಗೂ ಅವರ ಹಣಬಲದ ಪೈಪೋಟಿಯ ಆತಂಕ ಇಲ್ಲ. ಮಂಡ್ಯ, ಮೈಸೂರು, ಹಾಸನ ಭಾಗದ ಹಲವು ಮಂದಿ ಇಲ್ಲಿ ನೆಲೆಸಿದ್ದು, ಜೆಡಿಎಸ್ ಬೆಂಬಲಿಸುವವರೇ ಆಗಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರಲ್ಲಿ ಇಂದು ಮೋದಿ ರೋಡ್​ ಶೋ: ಶಿವಮೊಗ್ಗ, ನಂಜನಗೂಡಲ್ಲೂ ಸಮಾವೇಶ

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ನಾಗರಿಕ ಸತೀಶ್​ ಕುಮಾರ್ ಮಾತನಾಡಿ,"ರಾಜರಾಜೇಶ್ವರಿನಗರ ಅಭಿವೃದ್ಧಿಗೆ ಮುನಿರತ್ನ ಕೊಡುಗೆ ಸಾಕಷ್ಟಿದೆ. ಮುಂದೆ ಅವರು ಬಂದರೂ ಪರವಾಗಿಲ್ಲ. ಇಂತವರೇ ಬರಬೇಕೆಂಬ ಅಭಿಪ್ರಾಯವಿಲ್ಲ. ಬಂದವರು ಆರ್​ಆರ್​ ನಗರ ಉದ್ಧಾರ ಮಾಡಲಿ, ಯಾವುದೇ ಹಾನಿ ಮಾಡದೇ, ಆಗಬೇಕಿರುವ ಕೆಲಸವನ್ನು ಆದಷ್ಟು ಬೇಗ ಮಾಡಿಸಿಕೊಡಲಿ. ರಸ್ತೆ, ದಟ್ಟಣೆ ಸಮಸ್ಯೆ ಇದೆ. ಅದರ ಪರಿಹಾರ ಆಗಬೇಕು. ಕಳೆದ ಕೆಲ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಉದ್ಯಾನ, ರಸ್ತೆ ಪ್ರಗತಿ ಆಗಿದೆ. ಜನರಿಗೆ ಒಳ್ಳೆಯದಾಗುವ ಕೆಲಸವನ್ನು ಮುಂದೆ ಬರುವ ಸರ್ಕಾರ ಮಾಡಲಿ ಎನ್ನುವುದು ಆಶಯ" ಎಂದಿದ್ದಾರೆ.

Last Updated : May 7, 2023, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.