ETV Bharat / state

ಕಂದಾಯ ಇಲಾಖೆ ಸರ್ವೇ ಬಳಿಕ ರಾಜಕಾಲುವೆ ತೆರವು ಮುಂದುವರಿಕೆ : ಬಿಬಿಎಂಪಿ ಆಯುಕ್ತರು - ಒತ್ತುವರಿ ತೆರವು

ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡುತ್ತಿದ್ದೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

rajakaluve-will-continue-encroachment-clear
ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್
author img

By

Published : Oct 14, 2022, 10:23 PM IST

ಬೆಂಗಳೂರು: ರಾಜಧಾನಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಲು ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ನಡೆಯಬೇಕಾಗಿದೆ. ಈಗಾಗಲೇ ಗುರುತು ಮಾಡಿದಷ್ಟು ಒತ್ತುವರಿ ತೆರವು ಮಾಡಲಾಗಿದೆ. ಕಂದಾಯ ಇಲಾಖೆ‌ ಜೊತೆ ಜಂಟಿಯಾಗಿ ಸರ್ವೇ ಮಾಡಬೇಕಿದೆ. ಹೀಗಾಗಿ ಇದಕ್ಕೆ ಕಾಲಾವಕಾಶ ಬೇಕು. ನಾವು ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದವರ ಒತ್ತುವರಿ ಮರು ಸರ್ವೇ ಮಾಡುತ್ತಿದ್ದೇವೆ. ಎಲ್ಲೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿಲ್ಲ. ಆದರೆ, ಮತ್ತಷ್ಟು ಸಿದ್ಧತೆ ಆಗಬೇಕಿದೆ ಎಂದರು.

ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ತೆರವು: ಸದ್ಯಕ್ಕೆ ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿ ಮಾತ್ರ ತೆರವು ಮಾಡುತ್ತೇವೆ. ಬಫರ್ ಝೋನ್ ತೆರವು ಮಾಡೋದು ಸುಲಭದ ಮಾತಲ್ಲ. ಅದಕ್ಕಂತಲೇ ಒಂದಿಷ್ಟು ರೀತಿ ರಿವಾಜುಗಳಿವೆ, ಅದನ್ನು ಪಾಲಿಸಬೇಕು. ಮುಂದಕ್ಕೆ ನಡೆಯುವ ಸರ್ವೇಗಳಲ್ಲಿ ಕೆಲವು ಕಡೆ ಬಫರ್ ಝೋನ್​ಗಳಲ್ಲೂ ಸರ್ವೇ ಮಾಡಲಾಗುತ್ತದೆ ಎಂದು ಉಲ್ಲೇಖಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬಫರ್ ಝೋನ್ ಮಾಹಿತಿ ಪಡೆಯಬೇಕು: ಯಾವಾಗ ಬಫರ್ ಝೋನ್ ನಿರ್ಮಾಣ ಆಗಿದೆ ಎನ್ನುವ ಮಾಹಿತಿ ಪಡೆಯಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ವೇ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.

ಏಕಾಏಕಿ ಮುಖ್ಯ ರಸ್ತೆ ಬಂದ್ ಮಾಡಲಾಗುವುದಿಲ್ಲ: ಬೆಂಗಳೂರು ವಿವಿ ರಸ್ತೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಗಿರಿನಾಥ್ ಏಕಾಏಕಿ ನಾವು ಮುಖ್ಯ ರಸ್ತೆಯೊಂದನ್ನು ಬಂದ್ ಮಾಡಲು ಆಗುವುದಿಲ್ಲ. ರಸ್ತೆಗೆ ಹಂಪ್ಸ್ ಹಾಕಿರುವುದು ನಾವೇ, ಆದರೆ ನಮಗೆ ಇಷ್ಟ ಬಂದ ಕಡೆ ಹಾಕಲು ಆಗಲ್ಲ. ಸಂಚಾರಿ ಪೊಲೀಸ್ ಇಲಾಖೆ ಎಲ್ಲಿ ಅಗತ್ಯ ಇದೆ ಎನ್ನುತ್ತದೆಯೋ ಅಲ್ಲಿ ಹಂಪ್ಸ್ ಹಾಕುತ್ತೇವೆ ಎಂದರು.

ಇದನ್ನೂ ಓದಿ : ಪೆಟ್ರೋಲ್​ ಸುರಿದುಕೊಂಡು ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ದಂಪತಿ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.