ETV Bharat / state

ಬೆಂಗಳೂರಲ್ಲಿ ಮುಂದಿನ 3 ದಿನವೂ ಮಳೆ;  13 ಜಿಲ್ಲೆಗಳಲ್ಲಿ ಹೈ ಅಲರ್ಟ್​​​ ಘೋಷಿಸಿದ ಹವಾಮಾನ ಇಲಾಖೆ - ಹವಾಮಾನ ತಜ್ಞ ಸದಾನಂದ ಅಡಿಗ

ಬೆಂಗಳೂರಲ್ಲಿ ಕಳೆದೆರಡು ದಿನದಿಂದ ಮಳೆಯಾರ್ಭಟ ಮುಂದುರೆದಿದೆ. ಇಡೀ ದಿನ ಮಳೆ ಸುರಿಯುತ್ತಿದ್ದು, ಇದೇ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

rain-will-continue-further-3-days-says-meteorological-department
ಬೆಂಗಳೂರಲ್ಲಿ ಮುಂದಿನ ಮೂರು ದಿನ ಮಳೆ ಮುಂದುವರಿಕೆ
author img

By

Published : Nov 12, 2021, 9:15 AM IST

Updated : Nov 12, 2021, 11:51 AM IST

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ (Depression over Bay of Bengal) ಹಿನ್ನೆಲೆ ತಮಿಳುನಾಡಿನಾದ್ಯಂತ ಭಾರಿ ಮಳೆ (Tamilnadu Rain) ಯಾಗುತ್ತಿದ್ದು, ಅದರ ಎಫೆಕ್ಟ್ ರಾಜಧಾನಿಗೆ ತಟ್ಟಿದೆ.

ಬುಧವಾರ ರಾತ್ರಿಯಿಂದ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುತ್ತಿದ್ದು (Bangalore Rain) ರಾಜಧಾನಿ ಜನತೆ ಹೈರಾಣಾಗಿದ್ದಾರೆ. ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ (Meteorological Department)ಮುನ್ನೆಚ್ಚರಿಕೆ ನೀಡಿದೆ. ಜೊತೆಗೆ 13 ಜಿಲ್ಲೆಗಳಿಗೆ ಹೈ ಅಲರ್ಟ್​​ ಘೋಷಿಸಿದೆ.

ಬೆಂಗಳೂರಲ್ಲಿ ಮುಂದಿನ ಮೂರು ದಿನ ಮಳೆ ಮುಂದುವರಿಕೆ

10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಉಳಿದ 3 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ 4.2 ಮಿ.ಮೀ ಮಳೆಯಾಗಿದೆ. ಇಂದು ಸಂಜೆ ಅಥವಾ ನಾಳೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞ ಸದಾನಂದ ಅಡಿಗ (Weather report expert Sadananda Adiga) ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಅಪೌಷ್ಟಿಕತೆ: ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರ ನೇಮಕಕ್ಕೆ ಹೆಸರು ಸೂಚಿಸಲು ಹೈಕೋರ್ಟ್ ನಿರ್ದೇಶನ

Last Updated : Nov 12, 2021, 11:51 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.