ETV Bharat / state

ಮಳೆ ತಂದ ಅವಾಂತರ: ಯಶವಂತಪುರ ಮೆಟ್ರೋ ನಿಲ್ದಾಣದೊಳಗೆ ನುಗ್ಗಿದ ನೀರು - rain

ರಾಜಧಾನಿ ಬೆಂಗಳೂರಲ್ಲಿ ಮಳೆಯಾರ್ಭಟ ಮುಂದುವರಿದಿದೆ. ಇಂದು ಸಂಜೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ನೀರಿನಿಂದ ತುಂಬಿ ಹೋಗಿವೆ. ಅಲ್ಲದೆ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಮೇಲ್ಛಾವಣಿ ಮೂಲಕ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

Rain water pours into Yashwantpur Metro station
ಮಳೆ ತಂದ ಅವಾಂತರ: ಯಶವಂತಪುರ ಮೆಟ್ರೋ ನಿಲ್ದಾಣದೊಳಗೆ ನುಗ್ಗಿದ ಮಳೆ ನೀರು
author img

By

Published : May 27, 2020, 8:23 PM IST

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತ್ತವಾಗಿದ್ದರೆ, ಇತ್ತ ಮೆಟ್ರೋ ನಿಲ್ದಾಣದಲ್ಲೂ ಮಳೆ ಅವಾಂತರ ಸೃಷ್ಟಿಸಿದೆ.

ಯಶವಂತಪುರ ಮೆಟ್ರೋ ನಿಲ್ದಾಣದೊಳಗೆ ನುಗ್ಗಿದ ಮಳೆ ನೀರು

‌ಬೆಂಗಳೂರಿನ ಯಶವಂತಪುರ ಮೆಟ್ರೋ ಸ್ಟೇಷನ್ ಒಳಗೆ ಮಳೆ ನೀರು ನುಗ್ಗಿದ್ದು, ಮೇಲ್ಛಾವಣಿಯಿಂದ ಸುರಿದ ನೀರನ್ನು ಹೊರಹಾಕಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದಿತು.

ಇತ್ತ ಲಾಕ್​​​ಡೌನ್​ನಿಂದಾಗಿ ಮೆಟ್ರೋ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಪ್ರಯಾಣಿಕರ ಆಗಮನಕ್ಕೆ ನಿಷೇಧ ಹೇರಲಾಗಿದೆ. ಇದರಿಂದಾಗಿ ಯಾವುದೇ ತೊಂದರೆ ಉಂಟಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.