ETV Bharat / state

ರೈಲ್ವೆ ಪ್ರಯಾಣಿಕರ ಗಮನಕ್ಕೆ.. ಈ ಭಾಗದಲ್ಲಿ ರೈಲು ಸೇವೆ ಭಾಗಶಃ ರದ್ದು.. - ಬೆಂಗಳೂರಿನ ಕೆಲವೆಡೆ ರೈಲ್ವೆ ಸೇವೆ ರದ್ದು

ಬೆಂಗಳೂರಿನ ಕೆಲವು ಭಾಗಗಳಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ದಿನದಂದು ರೈಲು ಸೇವೆ ರದ್ದಾಗಲಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ..

Raily department cancelled its service
ಬೆಂಗಳೂರಿನ ಕೆಲವೆಡೆ ರೈಲ್ವೆ ಸೇವೆ ರದ್ದು
author img

By

Published : Nov 29, 2021, 10:39 PM IST

ಬೆಂಗಳೂರು : ಕುಪ್ಪಂ ರೈಲ್ವೆ ನಿಲ್ದಾಣದ ಯಾರ್ಡ್​​​ನಲ್ಲಿ ಅಸ್ತಿತ್ವದಲ್ಲಿರುವ ಫುಟ್ ಓವರ್ ಬ್ರಿಡ್ಜ್‌ನ ಬದಲಾಗಿ ಹೊಸ ಫುಟ್ ಓವರ್ ಬ್ರಿಡ್ಜ್​ ಅಳವಡಿಕೆ ಕಾರ್ಯ ನಿಮಿತ್ತ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ಕಾರಣ ರೈಲುಗಳ ಸೇವೆ ಭಾಗಶಃ ರದ್ದು ಆಗಲಿದೆ. ಹಾಗೆ ಕೆಲ ರೈಲುಗಳ ಓಡಾಟದಲ್ಲಿ ಬದಲಾವಣೆ ಆಗಲಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ರೈಲು ಸೇವೆಯ ಭಾಗಶಃ ರದ್ದತಿ:

1.ನವೆಂಬರ್​​ 30 ರಿಂದ ಡಿ.2ರವರೆಗೆ ರೈಲು ಸಂಖ್ಯೆ (06551) ಕೆಎಸ್ಆರ್ ಬೆಂಗಳೂರು - ಜೋಲಾರಪೇಟೆ ವಿಶೇಷ ಮೆಮು ಸೇವೆಯು ಬಂಗಾರಪೇಟೆ ಹಾಗೂ ಜೋಲಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.

2.ನವೆಂಬರ್​​ 30 ರಿಂದ ಡಿ.2ರವರೆಗೆ ರೈಲು ಸಂಖ್ಯೆ(06552) ಜೋಲಾರಪೇಟೆ - ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ಸೇವೆ ಜೋಲಾರಪೇಟೆ ಹಾಗೂ ಬಂಗಾರಪೇಟೆಗಳ ನಡುವೆ ಭಾಗಶಃ ರದ್ದಾಗುವುದು. ರೈಲು ಈ ದಿನಗಳಲ್ಲಿ ಬಂಗಾರಪೇಟೆಯಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದೆಡೆಗೆ ಹೊರಡುವುದು.

ರೈಲುಗಳ ನಿಯಂತ್ರಣ :

1.ರೈಲು ಸಂಖ್ಯೆ (22497) ಶ್ರೀಗಂಗಾನಗರ - ತಿರುಚಿನಾಪಳ್ಳಿ ಹಮ್ ಸಫರ್ ಎಕ್ಸ್​​​​ಪ್ರೆಸ್ ರೈಲು ಸೇವೆಯನ್ನು ಇಂದು (ನ.29) ರಂದು ಟ್ಯಾಕಲ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

2.ರೈಲು ಸಂಖ್ಯೆ(12577) ದರ್ಭಾಂಗ ಮೈಸೂರು ಭಾಗಮತಿ ಸೂಪರ್ ಫಾಸ್ಟ್ ಎಕ್ಸ್​​​​ಪ್ರೆಸ್ ರೈಲನ್ನು ನವೆಂಬರ್​​ 30ರಂದು ಮಲ್ಲನೂರು ನಿಲ್ದಾಣದಲ್ಲಿ 80 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

3.ರೈಲು ಸಂಖ್ಯೆ (22626) ಕೆಎಸ್ಆರ್ ಬೆಂಗಳೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್​​​​ಪ್ರೆಸ್ ರೈಲನ್ನು ನ.30 ಮತ್ತು ಡಿ.2ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ಹಾಗೂ ಡಿ.1ರಂದು ವರದಪುರ ನಿಲ್ದಾಣದಲ್ಲಿ 40 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

4. ರೈಲು ಸಂಖ್ಯೆ(12640) ಕೆಎಸ್ಆರ್ ಬೆಂಗಳೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ್ ಎಕ್ಸ್​​​​ಪ್ರೆಸ್ ರೈಲನ್ನು ನ.30 ರಿಂದ ಡಿ.2ರವರೆಗೆ ಬಂಗಾರಪೇಟೆ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

5. ಡಿಸೆಂಬರ್​​ 1ರಂದು ರೈಲು ಸಂಖ್ಯೆ(12539) ಯಶವಂತಪುರ-ಲಖನೌ ಎಕ್ಸ್​​​​ಪ್ರೆಸ್ ರೈಲನ್ನು ಬಿಸನಟ್ಟಮ್ ನಿಲ್ದಾಣದಲ್ಲಿ 75 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

ಇದನ್ನೂ ಓದಿ: ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್ ಸದಸ್ಯ ಸಿ.ಆರ್.ಮನೋಹರ್ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.