ETV Bharat / state

ವಿಧಾನ ಪರಿಷತ್​ನಲ್ಲಿ ಪ್ರತಿಧ್ವನಿಸಿದ ಕೋವಿಡ್ ಸಾಮಗ್ರಿ ಖರೀದಿ ವಿಷಯ: ಗಮನ ಸೆಳೆದ ಖಾಲಿ ಕವರ್ ಉತ್ತರ - ಶ್ರೀರಾಮುಲು

ಕೋವಿಡ್ ಸಾಮಗ್ರಿ ಖರೀದಿ ಕುರಿತಂತೆ ಪ್ರತಿಪಕ್ಷ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ಒದಗಿಸಲು 15 ದಿನದ ಕಾಲಾವಕಾಶವನ್ನು ಆರೋಗ್ಯ ಸಚಿವ ಶ್ರೀರಾಮುಲು ಕೇಳಿದರು. ಇದಕ್ಕಾಗಿ ಉತ್ತರದ ಬದಲು ಖಾಲಿ ಕವರ್ ಕೊಡಲಾಗಿತ್ತು. ಇದನ್ನು ಪ್ರದರ್ಶಿಸಿ ಖಾಲಿ ಕವರ್ ನೀಡಲಾಗಿದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

legislative council
ವಿಧಾನ ಪರಿಷತ್
author img

By

Published : Sep 21, 2020, 4:37 PM IST

Updated : Sep 21, 2020, 4:51 PM IST

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ವಿಷಯ ಸದ್ದು ಮಾಡಿತು. ಮಾಹಿತಿ ನೀಡಲು ಸಮಯಾವಕಾಶ ಕೋರಿದ ಸಚಿವರ ನಡೆಗೆ ಪ್ರತಿಪಕ್ಷ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ವಾರಾಂತ್ಯಕ್ಕೆ ಉತ್ತರ ಕೊಡಿಸುವುದಾಗಿ ಸಭಾಪತಿಗಳು ರೂಲಿಂಗ್ ನೀಡಿ ಗದ್ದಲಕ್ಕೆ ತೆರೆ ಎಳೆದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅವರು ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳಿದರು.

ಖಾಲಿ ಕವರ್ ಉತ್ತರ...

ಇದಕ್ಕೆ ಉತ್ತರ ಒದಗಿಸಲು 15 ದಿನದ ಕಾಲಾವಕಾಶವನ್ನು ಆರೋಗ್ಯ ಸಚಿವ ಶ್ರೀರಾಮುಲು ಕೋರಿದರು. ಇದಕ್ಕಾಗಿ ಉತ್ತರದ ಬದಲು ಖಾಲಿ ಕವರ್ ಕೊಡಲಾಗಿತ್ತು. ಇದನ್ನು ಪ್ರದರ್ಶಿಸಿ ಖಾಲಿ ಕವರ್ ನೀಡಲಾಗಿದೆ ಎಂದು ಪ್ರತಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, 15 ದಿನದ ಕಾಲಾವಕಾಶ ಅಗತ್ಯವಿಲ್ಲ. ಯಾವಾಗ ಉತ್ತರ ಕೊಡಲಿದ್ದೀರಿ ಹೇಳಿ ಎಂದು ಸೂಚನೆ ನೀಡಿದರು.

ಈ ವೇಳೆ ಸದನಕ್ಕೆ ಉತ್ತರ ನೀಡಿದ ಸಚಿವ ಶ್ರೀರಾಮುಲು, ಎಲ್ಲಾ ಜಿಲ್ಲೆ, ತಾಲೂಕುಗಳಿಂದ ಮಾಹಿತಿ ತರಿಸಿಕೊಳ್ಳಬೇಕು. ಹೀಗಾಗಿ ಕಾಲಾವಕಾಶ ಬೇಕು ಎಂದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರಿಗೆ ಎಲ್ಲಾ ಮಾಹಿತಿ ಇರಲಿದೆ. ಈಗಲೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಸಚಿವರಿಗೆ ಸಾಥ್​ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಉತ್ತರ ಒದಗಿಸಲು ಕಾಲಾವಕಾಶ ಪಡೆಯುವ ಅವಕಾಶ ಸಚಿವರಿಗೆ ಇದೆ. ಮೊದಲಿಂದಲೂ ಇದು ನಡೆದುಕೊಂಡು ಬಂದಿದೆ ಎಂದರು. ಈ ವೇಳೆ ಪರಸ್ಪರ ಮಾತಿನ ಚಕಮಕಿಯಿಂದ ಸದನದಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಕಲಾಪ ಮುಗಿಯುವುದರೊಳಗೆ ಉತ್ತರ ಕೊಡುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಇದಕ್ಕೆ ಕಿಡಿಕಾರಿದ‌ ಪ್ರತಿಪಕ್ಷ ಸದಸ್ಯರು, ಮೊದಲ ಪ್ರಶ್ನೆಗೂ ಉತ್ತರವಿಲ್ಲ ಎಂದರೆ 1,200 ಪ್ರಶ್ನೆಗೆ ಏನು ಉತ್ತರ ಕೊಡಲಿದ್ದಾರೆ ಎಂದು ಕಾಲೆಳೆದರು. ಈ ವೇಳೆ ಶ್ರೀರಾಮುಲು ಒಂದು ವಾರದ ಕಾಲಾವಕಾಶ ಕೇಳಿದರು. ಆಗ ವೈದ್ಯಕೀಯ ಶಿಕ್ಷಣ ಸಚಿವರು ನೆರವಿಗೆ ಧಾವಿಸಿದರು.

ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೆ ಕೇಳಿದ್ದು ಆರೋಗ್ಯ ಸಚಿವರಿಗೆ. ಅವರೇ ಉತ್ತರ ಹೇಳಲಿ ಎಂದರು. ಈ ವೇಳೆ ಸಚಿವರ ನೆರವಿಗೆ ಮತ್ತೊಬ್ಬರು ಸಚಿವರು ಬರುವುದು ಹಿಂದಿನಿಂದಲೂ ನಡೆದಿದೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸುಧಾಕರ್ ಅವರನ್ನು ಸಮರ್ಥಿಸಿಕೊಂಡರು.

ಒಂದು ವಾರ ಸದನ ನಡೆಯುವುದೇ ಅನುಮಾನವಿದೆ. ಇನ್ನು ಉತ್ತರ ನಮಗೆ ಹೇಗೆ ಸಿಗಲಿದೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿಕಾರಿದರು. ಸದನ ಮುಗಿಯುವ ಆತಂಕ ಬೇಡ. ಒಂದು ವೇಳೆ ಮುಗಿದರೆ ನಿಮ್ಮೊಂದಿಗೆ ಕುಳಿತು ಮಾಹಿತಿ ನೀಡಲಿದ್ದೇವೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರ್ ಹೇಳಿದರು. ಇದಕ್ಕೆ ಅಸಮಾಧಾನಗೊಂಡ ಎಸ್.ಆರ್. ಪಾಟೀಲ್ ಕಲಾಪ ಅವಧಿಗೂ ಮೊದಲು ಮುಗಿಯಲು ಬಿಡಲ್ಲ. ಒಂದು ವಾರ ವಿಸ್ತರಣೆ ಮಾಡಿ ಎಂದು ಸಿಎಂಗೆ ಪತ್ರ ಬರೆದಿದ್ದೇನೆ ಎಂದರು.

ನಂತರ ಸದನ ಮುಗಿಯುವ ಮೊದಲೇ ಉತ್ತರ ಒದಗಿಸುವುದಾಗಿ ಸಚಿವ ಶ್ರೀರಾಮುಲು ಸದನಕ್ಕೆ ಭರವಸೆ ನೀಡಿ‌ ಗದ್ದಲಕ್ಕೆ ತೆರೆ ಎಳೆದರು.

Last Updated : Sep 21, 2020, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.