ETV Bharat / state

ಕಾರ್ಮಿಕರಿಗೆ ಗುಣಮಟ್ಟದ ಆಹಾರ ಕಿಟ್, ಸಹಾಯಧನ ನೇರ ಜಮೆ: ಸಚಿವ ಶಿವರಾಂ ಹೆಬ್ಬಾರ್ - ಕಾರ್ಮಿಕ ಸಹಾಯವಾಣಿ

ರಾಜ್ಯದ ಅಸಂಘಟಿತ ವಲಯದ ವಿವಿಧ 11 ವರ್ಗದ ಕಾರ್ಮಿಕರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 2000 ರೂ. ಸಹಾಯಧನ ಪ್ರಕಟಿಸಿದ್ದು, ನೋಂದಣಿ ಆಗಿರುವ ಒಟ್ಟು 3,30,000 ಕಾರ್ಮಿಕರಲ್ಲಿ 2,44,000 ಕಾರ್ಮಿಕರಿಗೆ ಸಹಾಯಧನ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ.

minister-shivaram-habbar
ಸಚಿವ ಶಿವರಾಂ ಹೆಬ್ಬಾರ್
author img

By

Published : Jun 25, 2021, 11:27 PM IST

ಬೆಂಗಳೂರು: ಕೋವಿಡ್​​​ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ವಿತರಿಸುವ ಕಾರ್ಯ ಭರದಿಂದ ಸಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಲು ಕಾರ್ಮಿಕ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸುವ ಸಲುವಾಗಿ ಇಲಾಖೆಯು ಹಲವು ನಿಯಮಗಳನ್ನು ಪಾಲಿಸುತ್ತಿದ್ದು, ಸರಬರಾಜಾಗುತ್ತಿರುವ ಆಹಾರ ಪದಾರ್ಥಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಆಹಾರ ಕಿಟ್‌ಗಳಿಗೆ ಭಾರತೀಯ ಆಹಾರ ನಿಗಮದಿಂದ ಅಕ್ಕಿಯನ್ನು ಮತ್ತು ಉಳಿದ ಪದಾರ್ಥಗಳನ್ನು ಮಾರುಕಟ್ಟೆಯಿಂದ ಸ್ಪರ್ಧಾತ್ಮಕ ದರಗಳಲ್ಲಿ ಖರೀದಿಸಿ ಅರ್ಹ ಸಂಸ್ಥೆಗಳಿಂದ ವಿತರಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಕಾರ್ಮಿಕ ಇಲಾಖೆ ವಿತರಿಸುತ್ತಿರುವ ಆಹಾರ ಕಿಟ್‌ಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು, ಸ್ಥಳೀಯ ಕಾರ್ಮಿಕ ಸಂಘಟನೆಗಳ ಸಮ್ಮುಖದಲ್ಲಿ ಇಲಾಖೆ ಅಧಿಕಾರಿಗಳ ಮೂಲಕ ಪಾರದರ್ಶಕವಾಗಿ ವಿತರಿಸಲಾಗುತ್ತಿದ್ದು, ಕಾರ್ಮಿಕರಿಗೆ ಗುಣಮಟ್ಟದ ಆಹಾರ ತಲುಪಿಸುವುದು ಇಲಾಖೆಯ ಉದ್ದೇಶವಾಗಿದೆ ಎಂದಿದ್ದಾರೆ.

ದೂರಿಗೆ ಅವಕಾಶ

ಆಹಾರ ಪದಾರ್ಥಗಳ ಸಾಗಾಣಿಕೆ ವೇಳೆ ಸಾಮಾನ್ಯ ಲೋಪದಿಂದ ಕಳಪೆ ಆಹಾರ ಪದಾರ್ಥಗಳಿರುವುದು ಕಂಡುಬಂದರೆ ಕಾರ್ಮಿಕ ಸಹಾಯವಾಣಿ ಸಂಖ್ಯೆ 155214ಕ್ಕೆ ಕರೆ ಮಾಡಿ ದೂರು ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ. ಇದೇ ವೇಳೆ ಇಂತಹ ದೂರೊಂದಕ್ಕೆ ಸಂಬಂಧಿಸಿದಂತೆ ಆಹಾರ ಪದಾರ್ಥ ಸರಬರಾಜುದಾರನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ನೇರ ನಗದು ಹಣ ವರ್ಗಾವಣೆ

ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ. ಸಹಾಯಧನದ ಘೋಷಣೆ ಮಾಡಿದ್ದಾರೆ. ಈ ಆದೇಶದಂತೆ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರ ಪೈಕಿ ಈವರೆಗೆ 17,80,000 ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.

ಈವರೆಗೆ 15,40,000 ಕಾರ್ಮಿಕರಿಗೆ ಸಹಾಯಧನ ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಮತ್ತು ಉಳಿದ 2,40,000 ಕಾರ್ಮಿಕರ ಬ್ಯಾಂಕ್ ಖಾತೆಯು ನಿಷ್ಕ್ರಿಯವಾಗಿರುವುದರಿಂದ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗದೆ ಇರುವುದರಿಂದ ಸಹಾಯಧನ ಮೊತ್ತ ಜಮೆಗೆ ತೊಡಕಾಗಿದ್ದು, ಅರ್ಹ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಸಕ್ರೀಯಗೊಳಿಸಲು ಮನವಿ ಮಾಡಲಾಗಿದೆ ಎಂದಿದ್ದಾರೆ.

ಅಸಂಘಟಿತರ ವಲಯಕ್ಕೆ 2000 ರೂ.

ರಾಜ್ಯದ ಅಸಂಘಟಿತ ವಲಯದ ವಿವಿಧ 11 ವರ್ಗದ ಕಾರ್ಮಿಕರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 2000 ರೂ. ಸಹಾಯಧನ ಪ್ರಕಟಿಸಿದ್ದು, ಈ ಮೊತ್ತವನ್ನು ನೇರವಾಗಿ ಅವರವರ ಖಾತೆಗಳಿಗೆ ವರ್ಗಾಯಿಸುವ ಕೆಲಸವೂ ಇಲಾಖೆಯಿಂದ ನಡೆದಿದ್ದು, ಈವರೆಗೆ ಇಲಾಖೆಯಲ್ಲಿ ನೋಂದಣಿ ಆಗಿರುವ ಒಟ್ಟು 3,30,000 ಕಾರ್ಮಿಕರಲ್ಲಿ 2,44,000 ಕಾರ್ಮಿಕರಿಗೆ ಸಹಾಯಧನವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹೊಸದಾಗಿ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲು 20-07-2021ರ ವರೆಗೆ ಕಾಲಾವಕಾಶ ನೀಡಿದ್ದು, ಈವರೆಗೆ ಹೊಸದಾಗಿ 7,00,000 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಇತರೆ ಕಾರ್ಮಿಕರೂ ಸಹ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಸಚಿವ ಹೆಬ್ಬಾರ್ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.