ETV Bharat / state

ನಾಳೆ ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ - ಪಿಯುಸಿ ಪರೀಕ್ಷೆ ಫಲಿತಾಂಶ ಸಂಬಂಧ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಟ್ವೀಟ್

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

PUC exam result will be announced tomorrow

author img

By

Published : Jun 17, 2022, 4:51 PM IST

ಬೆಂಗಳೂರು: ಶನಿವಾರ ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ‌ಸಚಿವ ಬಿ.ಸಿ.ನಾಗೇಶ್ ಮಲ್ಲೇಶ್ವರಂನ ಪಿಯುಸಿ ಬೋರ್ಡ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಫಲಿತಾಂಶ ಪ್ರಕಟಿಸುವರು. ಎಸ್​ಎಸ್​ಎಲ್​ಸಿ ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್‌ಗೆ ಫಲಿತಾಂಶ ರವಾನೆಯಾಗಲಿದೆ.

  • ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ (ಜೂನ್.18) ಪ್ರಕಟಿಸಲಾಗುತ್ತದೆ.

    ವಿದ್ಯಾರ್ಥಿಗಳಿಗೆ ಶುಭಾಶಯಗಳು.

    2nd PUC exam results will be announced tomorrow.

    Best wishes to all students💐.

    — B.C Nagesh (@BCNagesh_bjp) June 17, 2022 " class="align-text-top noRightClick twitterSection" data=" ">

ಏಪ್ರಿಲ್‌ 22ರಿಂದ ಮೇ 18 ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.‌ ಈ ಪೈಕಿ ಬಾಲಕರು-3,46,936, ಬಾಲಕಿಯರು-3,37,319 ಇದ್ದರೆ, ಒಟ್ಟಾರೆ ರೆಗ್ಯುಲರ್ ವಿದ್ಯಾರ್ಥಿಗಳು-6,00,519, ಪುನರಾವರ್ತಿತ ವಿದ್ಯಾರ್ಥಿಗಳು-61,808 ಖಾಸಗಿ ವಿದ್ಯಾರ್ಥಿಗಳು 21,928 ಇದ್ದರು.

ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗದಲ್ಲಿ 2,28,167, ವಾಣಿಜ್ಯ ವಿಭಾಗದಲ್ಲಿ 2,45,519, ವಿಜ್ಞಾನ ವಿಭಾಗದಲ್ಲಿ 2,10,569 ಜನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ:ಅಗ್ನಿಪಥ್‌ ವಯೋಮಿತಿ ಹೆಚ್ಚಳ: 'ಜನರ ಅಗತ್ಯತೆಗಳಿಗೆ ಮೋದಿ ಸರ್ಕಾರ ಸ್ಪಂದಿಸುತ್ತಿದೆ'- ಸಿಎಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.