ETV Bharat / state

ಪಶ್ಚಿಮ ಘಟ್ಟದಲ್ಲಿ ರಸ್ತೆ ಅಗಲೀಕರಣ ಪ್ರಶ್ನಿಸಿ ಅರ್ಜಿ: ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ 'ಹೈ' ನೋಟಿಸ್​​ - ಯುನೈಟೆಡ್ ಕನ್ಸರ್ವೇಷನ್ ಮೊಮೆಂಟ್

ಪಶ್ಚಿಮ ಘಟ್ಟದ ಅರಣ್ಯ ಮಧ್ಯ ಇರುವ 5.5 ಮೀಟರ್​ ಹೆದ್ದಾರಿಯನ್ನು 18 ಮೀಟರ್​ಗೆ ವಿಸ್ತರಣೆ ಮಾಡುವ ನಿರ್ಧಾರವನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

high-court
ಹೈಕೋರ್ಟ್​
author img

By

Published : Jan 5, 2021, 8:56 PM IST

ಬೆಂಗಳೂರು: ಶಿರಸಿ-ಕುಮಟಾ ನಡುವಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಮೂಮೆಂಟ್,​ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಪಶ್ಚಿಮ ಘಟ್ಟದ ಅರಣ್ಯ ಮಧ್ಯ ಇರುವ 5.5 ಮೀಟರ್​ ಹೆದ್ದಾರಿಯನ್ನು 18 ಮೀಟರ್​​ಗೆ ವಿಸ್ತರಣೆ ಮಾಡುವ ನಿರ್ಧಾರವನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿದ್ದು, ಹೆದ್ದಾರಿ ಅಗಲೀಕರಣಕ್ಕೆ ಶಾಸನಬದ್ದ ಸಮ್ಮತಿ ಇಲ್ಲ ಹಾಗೂ ಈ ರಸ್ತೆಯಲ್ಲಿ ಕಡಿಮೆ ಪ್ರಮಾಣದ ವಾಹನ ಸಂಚಾರ ಇದೆ. ಹೆದ್ದಾರಿ ಅಗಲೀಕರಣದಿಂದ 2 ಲಕ್ಷಕ್ಕೂ ಅಧಿಕ ಮರ ಕಡಿಯಲಾಗುತ್ತದೆ ಎಂದು ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಓದಿ: ಬೆಂಗಳೂರಿನಲ್ಲಿ ಮಹಿಳೆ ಅನುಮಾನಾಸ್ಪದ ಸಾವು..!

ಅರ್ಜಿಗೆ ಹೈಕೋರ್ಟ್ ಸ್ಪಂದಿಸಿದ್ದು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ನೋಟಿಸ್ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಳ್ಳುವ ಯಾವುದೇ ಕಾಮಗಾರಿ ಅರ್ಜಿ ಸಂಬಂಧ ಹೈಕೋರ್ಟ್ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.